More

    ಕರೆಂಟ್ ಉತ್ಪಾದನೆ ಬಹುತೇಕ ದ್ವಿಗುಣ : ಸಚಿವ ಗೋವಿಂದ ಕಾರಜೋಳ ಬಣ್ಣನೆ

    ಮುಧೋಳ : ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ವಿದ್ಯುತ್ ಉತ್ಪಾದನೆ ದ್ವಿಗುಣಗೊಂಡಿದೆ. ವಿದ್ಯುತ್‌ನಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಅಲ್ಲದೆ, ಬೇರೆ ದೇಶಗಳಿಗೆ ರ್ತು ಮಾಡುತ್ತಿರುವುದು ಪ್ರಧಾನಿ ಅವರ ದೂರದೃಷ್ಟಿಯ ಲವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬಣ್ಣಿಸಿದರು.

    ನಗರದ ರನ್ನ ಸ್ಮಾರಕ ಭವನದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಇಂಧನ ಇಲಾಖೆ ಶುಕ್ರವಾರ ಆಯೋಜಿಸಿದ್ದ ಉಜ್ವಲ ಭಾರತ, ಉಜ್ವಲ ಭವಿಷ್ಯ ಇಂಧನ-2047(ವಿದ್ಯುತ್ ಮಹೋತ್ಸವ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಧಾನಿ ಮೋದಿ ಅವರು ದೇಶದ ವಿದ್ಯುತ್ ಕಾಣದ 18,500 ಗ್ರಾಮಗಳಿಗೆ ಸಾವಿರ ದಿನದಲ್ಲಿ ವಿದ್ಯುತ್ ನೀಡಿದರು. ಆದರೆ, ದೇಶವನ್ನು ಅಧಿಕ ವರ್ಷ ಆಳಿದವರು ಜನಪರವಾದ ಯೋಜನೆ ತರದೆ ಇದ್ದ ಕಾರಣದಿಂದ ದೇಶವು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿತ್ತು. ಶೇ. 50ರಷ್ಟು ಇರುವ ಯುವ ಜನಾಂಗ ಸ್ವಾಭಿಮಾನದಿಂದ ಬದುಕುವ ಯೋಜನೆ ರೂಪಿಸಬೇಕು. ಜನರಿಗೆ ಮೀನು ತಿನ್ನುವುದನ್ನು ಕಲಿಸಬಾರದು, ಬದಲಿಗೆ ಮೀನು ಹಿಡಿಯುವುದನ್ನು ಕಲಿಸಬೇಕು ಎಂದು ಮಾರ್ಮಿಕವಾಗಿ ಮಾತನಾಡಿದರು.

    ಜಿಲ್ಲಾಧಿಕಾರಿ ವಿ.ಸುನೀಲಕುಮಾರ್ ಹಾಗೂ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಜಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ವಿಭಾಗ ಮುಖ್ಯ ಇಂಜಿನಿಯರ್ ಜೆ.ಪಿ. ನಾಗರಾಜ, ನಗರಸಭೆ ಅಧ್ಯಕ್ಷ ಗುರುಪಾದ ಕುಳಲಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಹೆಸ್ಕಾಂ ನಿಗಮದ ನಿರ್ದೇಶಕ ಹನುಮಂತ ತುಳಸಿಗೇರಿ, ತಹಸೀಲ್ದಾರ್ ವಿನೋದ ಹತ್ತಳ್ಳಿ, ಎಇಇ ವೀರಣ್ಣ ಮರಕಟ್ಟಿ, ಎಸ್.ಟಿ. ಮಠಪತಿ ಇದ್ದರು.

    ಮುಂದಿನ 25 ವರ್ಷದ ಅವಧಿಗೆ ವಿದ್ಯುತ್ ಅಭಾವ ಎದುರಾಗುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಕ್ಕಾಗಿ ಸಾಕಷ್ಟು ಅನುದಾನ ವಿನಿಯೋಗಿಸಿದೆ.
    ಜಿ.ಕೆ. ಗೋಟ್ಯಾಳ ಹೆಸ್ಕಾಂ ಅಧೀಕ್ಷಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts