More

    ಕುತೂಹಲ, ಶ್ರದ್ಧೆಯಿಂದ ಗಣಿತ ಕಲಿಯಿರಿ

    ನಿಪ್ಪಾಣಿ: ಗಣಿತದ ಬಗ್ಗೆ ಕುತೂಹಲ, ಶ್ರದ್ಧೆಯನ್ನು ರೂಢಿಸಿಕೊಂಡರೆ ಸುಲಭವಾಗಿ ಅರಿತುಕೊಳ್ಳಲು ಸಾಧ್ಯವಿದೆ ಎಂದು ಬೆಳಗಾವಿ ಜಿಎಸ್‌ಎಸ್ ಮಹಾವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥ ಪ್ರೊ.ನಾಗಸುರೇಶ ಎಂ.ಎಸ್. ಹೇಳಿದ್ದಾರೆ.

    ನಗರದ ಕೆಎಲ್‌ಇ ಸಂಸ್ಥೆಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಪೈ ದಿನಾಚರಣೆಯ ಅಂಗವಾಗಿ ಐಕ್ಯೂಎಸಿ ಪ್ರೇರಿತ ವಿಜ್ಞಾನ ಒಕ್ಕೂಟ ಮತ್ತು ಗಣಿತ ವಿಭಾಗದ ವತಿಯಿಂದ ಹಮ್ಮಿಕೊಂಡ ಗಣಿತ ಪ್ರಾತ್ಯಕ್ಷಿಕೆಗಳ ಪ್ರದರ್ಶನದಲ್ಲಿ ಮಾತನಾಡಿದರು.

    ಪ್ರಾಚಾರ್ಯ ಡಾ.ಸಿ.ವಿ.ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ರಾಯಬಾಗ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ಗೀತಾ ಶಿವಪೂಜೆ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಗಣಿತ ಪ್ರಾತ್ಯಕ್ಷಿಕೆ ಸ್ಪರ್ಧೆಯಲ್ಲಿ 23 ತಂಡಗಳ ಒಟ್ಟು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪದವಿ ವಿಭಾಗದಲ್ಲಿ ಪ್ರಜ್ಞಾ ಭಿವಸೆ ತಂಡ (ಪ್ರ), ಶ್ರೀಕಾಂತ ಮಾಳಿ ತಂಡ (ದ್ವಿ), ಪೂಜಾ ಕನಿರೆ ತಂಡ(ತೃ), ಪಾರ್ವತಿ ಚೌಗಲಾ ತಂಡ (ಸಮಾಧಾನಕರ), ಸ್ನಾತಕೋತ್ತರ ವಿಭಾಗದಲ್ಲಿ ಶ್ವೇತಾ ಪಾಟೀಲ ತಂಡ (ಪ್ರ), ಸಂಗೀತಾ ಮೋರೆ ಹಾಗೂ ತಂಡ (ದ್ವಿ), ಪ್ರಾಜಾಕ್ತಾ ಭೋರೆ ತಂಡ (ತೃ), ಪ್ರಿಯಾ ಪಾಟೀಲ ತಂಡ (ಸಮಾಧಾನಕರ) ಬಹುಮಾನ ಪಡೆದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಕೌಚಿ ಅಗಸ್ಟನ್ ತಂಡ ವಿಜೇತರಾದರೆ, ಬ್ರಹ್ಮಗುಪ್ತ ತಂಡದವರು ರನ್ನರ್ ಅಪ್ ಸ್ಥಾನ ಪಡೆದುಕೊಂಡರು. ರಸಪ್ರಶ್ನೆ, ಗಣಿತ ಪ್ರಾತ್ಯಕ್ಷಿಕೆ ಪ್ರದರ್ಶನ ಹಾಗೂ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದ 29 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

    ಡಾ.ಲಿಂಗರಾಜ ಅಂಗಡಿ ವಿಜೇತರಿಗೆ ಬಹುಮಾನ ವಿತರಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಬಿ.ಎಸ್. ಕಾಂಬಳೆ, ಉಪಪ್ರಾಚಾರ್ಯ ಡಾ. ಆರ್.ಜಿ. ಖರಾಬೆ, ಪ್ರೊ. ಶಶಿರೇಖಾ ಪಾಟೀಲ, ಡಾ. ಎಸ್.ಬಿ. ಸೊಲಬಣ್ಣವರ, ಪ್ರೊ. ವೇದಾಂತ ಗಳತಗೆ, ಪ್ರೊ. ಜಿನೇಂದ್ರ ಮಗದುಮ್ಮ, ಪ್ರೊ. ಕರುಣಾ ಸಮಾಜೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts