More

    ಸಾಲೂರು ಮಠದ ಶ್ರೀಗಳ ಅಭಿನಂದನೆ

    ಹನೂರು: 12ನೇ ಶತಮಾನದ ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿರುವುದಕ್ಕೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿನಂದಿಸಿದ್ದಾರೆ.
    ಬಸವಣ್ಣನವರು 12ನೇ ಶತಮಾನದ ದಾರ್ಶನಿಕರಾಗಿದ್ದು, ಸಮಾಜ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದ್ದರು. ಜಾತಿ ಹಾಗೂ ಕಂದಾಚಾರಗಳ ವಿರುದ್ಧ ಹೋರಾಟ ನಡೆಸಿದ್ದ ಮಹಾನ್ ಮಾನವತಾವಾದಿ. ಇವರ ಬೋಧನೆಗಳು ಹಾಗೂ ಉಪದೇಶಗಳು ಎಲ್ಲ ಚೌಕಟ್ಟುಗಳನ್ನು ಮೀರಿದ್ದು, ಸಾರ್ವತ್ರಿಕವಾಗಿ ಇಂದಿನ ಉತ್ತಮ ಸಮಾಜಕ್ಕೂ ದಾರಿದೀಪವಾಗಿದೆ. ಇವರ ವಚನಗಳಲ್ಲಿ ಭಾವತೀವ್ರತೆ, ಏಕಾಗ್ರತೆ ಹಾಗೂ ಆತ್ಮೀಯತೆ ಪ್ರಶಂಸನೀಯವಾಗಿದೆ. ಹಾಗಾಗಿ ಇವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts