More

    ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆ ಪ್ರತಿಭೆಗೆ ಸಹಕಾರಿ ಶಾಸಕ ರಘುಮೂರ್ತಿ ಅಭಿಪ್ರಾಯ

    ಚಳ್ಳಕೆರೆ: ದೇಶ, ಸಮಾಜದ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಬುನಾದಿ ಆಗಿದ್ದು, ಇದರ ಜತೆಗೆ ಪಠ್ಯೇತರ, ಸಾಂಸ್ಕೃತಿಕ ಚಟುವಟಿಕೆ ಪ್ರತಿಭೆ ಅನಾವರಣಕ್ಕೆ ಸಹಕಾರಿ ಆಗಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡಿದರು.

    ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ತಾಲೂಕಿನಲ್ಲಿ ಪ್ರತಿಭಾವಂತರು ರೂಪುಗೊಳ್ಳಬೇಕು ಎಂದರು.

    ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ತಾಲೂಕಿಗೆ 18ನೇ ಸ್ಥಾನ ಲಭ್ಯವಾಗಿದೆ. ವಿದ್ಯಾರ್ಥಿಗಳ ಪರಿಶ್ರಮದಲ್ಲಿ ಇನ್ನಷ್ಟು ಸಾಧನೆ ಆಗಬೇಕು. ಅದೇ ರೀತಿ ಸಾಂಸ್ಕೃತಿಕ ಮತ್ತು ಕಲಾ ಪ್ರದರ್ಶನದಲ್ಲಿ ತಾಲೂಕಿನ ಕೀರ್ತಿ ರಾಜ್ಯಕ್ಕೆ ಪಸರಿಸುವ ಸಂಕಲ್ಪ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದು ಹೇಳಿದರು.

    ಬಿಇಒ ಕೆ.ಎಸ್.ಸುರೇಶ್ ಮಾತನಾಡಿ, ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಿದೆ ಎಂದರು.

    ವಿದ್ಯಾರ್ಥಿಗಳಲ್ಲಿ ಸಮಾಜದ ಕಲೆ ಮತ್ತು ಸಾಂಸ್ಕೃತಿಕ ಸಾಧನೆಯ ವಾರಸುದಾರರು ಎನ್ನುವ ಆಸಕ್ತಿ ಬೆಳೆಯಬೇಕಿದೆ. ಈಗಾಗಲೇ ವಲಯ ಹಂತದಲ್ಲಿ ವಿಜೇತರಾಗಿರುವ ಮಕ್ಕಳನ್ನು ತಾಲೂಕು ಮಟ್ಟದಲ್ಲಿ ಗುರುತಿಸುವ ಕೆಲಸವಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ 47 ಚಟುವಟಿಕೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ಹೇಳಿದರು.

    ನಗರಸಭಾ ಅಧ್ಯಕ್ಷೆ ಸುಮಕ್ಕ, ಸದಸ್ಯರಾದ ಸುಜಾತಾ ಪ್ರಹ್ಲಾದ, ಸುಮಾ, ಕವಿತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಮುಖ್ಯಶಿಕ್ಷಕಿ ಪ್ರಮಿಳಾ, ಮಾರುತಿ ಭಂಡಾರಿ, ಗಿರೀಶ್‌ಬಾಬು ಇತರರಿದ್ದರು.

    ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆ ಪ್ರತಿಭೆಗೆ ಸಹಕಾರಿ ಶಾಸಕ ರಘುಮೂರ್ತಿ ಅಭಿಪ್ರಾಯ

    ಜಿಲ್ಲಾ ಮಟ್ಟಕ್ಕೆ ಸರಿತಾ
    ಪ್ರತಿಭಾ ಕಾರಂಜಿಯಲ್ಲಿ ರಂಗವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಪಿ.ಸರಿತಾ ಬೇಲೂರು ಶಿಲಾ ಬಾಲಿಕೆಯ ಛದ್ಮವೇಷದಲ್ಲಿ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಾಲಾ ಶಿಕ್ಷಕಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಉಪಾಧ್ಯಕ್ಷೆ ಜಿ. ವಿಜಯಲಕ್ಷ್ಮಿ ಮಾರ್ಗದರ್ಶನ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts