More

    ಸಿಎಸ್​ಕೆ ನಾಯಕತ್ವ ದಿಢೀರ್​ ಹಸ್ತಾಂತರ; ಧೋನಿ ನಿರ್ಧಾರದ ಬಗ್ಗೆ ಕೋಚ್​ ಫ್ಲೆಮಿಂಗ್​ ಹೇಳಿದ್ದಿಷ್ಟು

    ಚೆನ್ನೈ: ರಂಗು ರಂಗಿನ ಐಪಿಎಲ್​ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು,  17ನೇ ಆವೃತ್ತಿ ಆರಂಭಕ್ಕೂ ಮುನ್ನ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿತ್ತು.  ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಯಶಸ್ವಿ ನಾಯಕರೆನ್ನಿಸಿಕೊಂಡಿದ್ದ ಮಹೇಂದ್ರ ಸಿಂಗ್​ ಧೋನಿ ತಮ್ಮ ನಾಯಕತ್ವವನ್ನು ಯುವ ಆಟಗಾರ ಋತುರಾಜ್​ ಗಾಯಕ್ವಾಡ್​ಗೆ ಹಸ್ತಾಂತರಿಸುವ ಮೂಲಕ ಕ್ರೀಡಾ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದರು.

    ಧೋನಿ ನಾಯಕತ್ವ ಹಸ್ತಾಂತರಿಸಿರುವ ಕುರಿತು ಮಾತನಾಡಿರುವ ಮುಖ್ಯ ಕೋಚ್​ ಸ್ಫೀಫೆನ್​ ಫ್ಲೆಮಿಂಗ್​, ಮಹೇಂದ್ರ ಸಿಂಗ್ ಧೋನಿ ಹೊರತುಪಡಿಸಿ ಬೇರೆ ಯಾವುದೇ ನಾಯಕನಿಗೆ ತಮ್ಮ ತಂಡ ಸಿದ್ಧವಾಗಿರಲಿಲ್ಲ ಎಂದು ಹೇಳಿದ್ದಾರೆ.

    ಚೆನ್ನೈನಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಫ್ಲೆಮಿಂಗ್, 2022ರಲ್ಲಿ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಾಗ ಅದಕ್ಕೆ ನಾವು ಸಿದ್ಧರಿರಲಿಲ್ಲ. ಧೋನಿಗೆ ಕ್ರಿಕೆಟ್ ಬಗ್ಗೆ ಉತ್ತಮ ತಿಳುವಳಿಕೆ ಇದೆ. ಆದರೆ ನಾವು ಕ್ಯಾಪ್ಟನ್ ಸ್ಥಾನಕ್ಕೆ ಯುವ ಆಟಗಾರರನ್ನು ಸಿದ್ಧಪಡಿಸಲು ಬಯಸಿದ್ದೇವೆ. ಈ ಬಾರಿ ಆ ಸಿದ್ಧತೆ ನಡೆಸಿದ್ದೇವೆ. ಕಳೆದ ಬಾರಿ ಎಂಎಸ್ ನಾಯಕತ್ವ ತೊರೆದಾಗ ನಾವು ಅದಕ್ಕೆ ಸಿದ್ಧರಿಲ್ಲದ ಕಾರಣ ಆಘಾತಕ್ಕೊಳಗಾಗಿದ್ದೇವೆ.

    ಇದನ್ನೂ ಓದಿ: ಐಪಿಎಲ್​ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ; ಚೆಪಾಕ್​ ಅಂಗಳ ಯಾರಿಗೆ ಹೆಚ್ಚು ಸಹಕಾರಿ? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

    ಹೊಸ ನಾಯಕನನ್ನು ಸಿದ್ಧಪಡಿಸಲು ನಾವು ಶ್ರಮಿಸುತ್ತಿದ್ದೇವೆ. ಯುವಕರನ್ನು ನಂಬಿದ್ದು ಫಲ ನೀಡಿದೆ. ನಾಯಕತ್ವದ ಬಗ್ಗೆ ಋತುರಾಜ್ ಜತೆ ಮಾತನಾಡಿದ್ದೇನೆ. ಇದು ಅವರಿಗೆ ಉತ್ತಮ ಅವಕಾಶ. ಐಪಿಎಲ್​​ಗೂ ಮುನ್ನ ನಡೆಯುವ ಅಭ್ಯಾಸ ಪಂದ್ಯಗಳಲ್ಲಿ ಧೋನಿ ಫಿಟ್ ಆಗಿ ಕಾಣುತ್ತಿದ್ದು, ಅಭ್ಯಾಸ ಪಂದ್ಯಗಳಲ್ಲಿ ಎಂಎಸ್ಡಿ ಉತ್ತಮ ಪ್ರದರ್ಶನ ನೀಡಿದ್ದು, ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕಳೆದ ಆವೃತ್ತಿಯಲ್ಲೇ ಮಂಡಿ ನೋವಿನೊಂದಿಗೆ ಇಡೀ ಲೀಗ್ ಆಡಿದ್ದ ಧೋನಿ ತಂಡವನ್ನು ದಾಖಲೆಯ ಐದನೇ ಬಾರಿಗೆ ಚಾಂಪಿಯನ್ ಮಾಡಿದ್ದರು. ಆ ವೇಳೆಯೆ ಧೋನಿ ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಎಲ್ಲಾ ಊಹಪೋಹಗಳನ್ನು ಸುಳ್ಳು ಮಾಡಿದ್ದ ಧೋನಿ, ಮತ್ತೆ ಐಪಿಎಲ್ ಅಖಾಡಕ್ಕೆ ಕಾಲಿಟ್ಟಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts