More

    ಅವಕಾಶ ನೀಡದೇ ಈ ರೀತಿ ಮಾತನಾಡಬಾರದು: ಧೋನಿ ಹೇಳಿಕೆಗೆ ಅಭಿಮಾನಿಗಳು ಗರಂ!

    ನವದೆಹಲಿ: ಸೋಮವಾರ ನಡೆದ ಐಪಿಎಲ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಹೀನಾಯವಾಗಿ ಸೋತ ಬೆನ್ನಲ್ಲೇ ಯುವ ಕ್ರಿಕೆಟಿಗರ ಬಗ್ಗೆ ಕಮೆಂಟ್​ ಮಾಡಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಎಂ. ಎಸ್​. ಧೋನಿ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.

    ನಿನ್ನೆಯ ಪಂದ್ಯದಲ್ಲಿ 7 ವಿಕೆಟ್​ಗಳ ಅಂತರದಲ್ಲಿ ಧೋನಿ ಪಡೆ ಹೀನಾಯ ಸೋಲು ಕಂಡಿದ್ದು, ಟೂರ್ನಿಯಿಂದಲೇ ಹೊರಬೀಳುವ ಆತಂಕ ಎದುರಿಸುತ್ತಿದೆ. ಇದರ ನಡುವೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಧೋನಿ, ಈ ಸೀಸನ್​ನಲ್ಲಿ ಕೆಲ ಯುವ ಕ್ರಿಕೆಟಿಗರಲ್ಲಿ ನಾವು ತುಡಿತ ಕಾಣಲಿಲ್ಲ. ಅವರ ಆಟದಲ್ಲಿ ಯಾವುದೇ ಸ್ಪಾರ್ಕ್ ಇರಲಿಲ್ಲ. ಮುಂದಿನ ಪಂದ್ಯಗಳಲ್ಲಿ ಅವರನ್ನು ಕರೆತರುವುದರಿಂದ ಯಾವುದೇ ಒತ್ತಡವಿಲ್ಲದೇ ಆಡಬಹುದು ಎಂದು ವ್ಯಂಗ್ಯವಾಡಿದ್ದರು.

    ಧೋನಿ ಹೇಳಿಕೆ ಬೆನ್ನಲ್ಲೇ ಅಭಿಮಾನಿಗಳು ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಧೋನಿ ಅವರ ಹೇಳಿಕೆಯಿಂದ ನಿಜಕ್ಕೂ ಬೇಸರವಾಗಿದೆ. ಯುವಕರಿಗೆ ಅವಕಾಶವನ್ನು ನೀಡದೆ ಅವರಲ್ಲಿ ಯಾವುದೇ ತುಡಿತವಿಲ್ಲ ಎನ್ನುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನಿಸಿದ್ದಾರೆ. ಜಡೇಜಾ ರನ್​ ಕದಿಯುವಲ್ಲಿ ತುಂಬಾ ಕಷ್ಟಪಡುತ್ತಿದ್ದಾರೆ. ಜಾಧವ್​ ಈ ಸೀಸನ್​ನಲ್ಲಿ ನಿರಂತರ ವೈಫಲ್ಯ ಅನುಭವಿಸುತ್ತಿದ್ದಾರೆ. ಆದರೆ, ಇವರಿಗೆ ಮತ್ತೆ ಮತ್ತೆ ಅವಕಾಶ ನೀಡಲಾಗುತ್ತಿದೆ. ಇಂತವರನ್ನು ಪಕ್ಕಕ್ಕೆ ಇಟ್ಟು ಯುವಕರಿಗೆ ಅವಕಾಶ ಕೊಟ್ಟು ನೋಡಿ. ಆಬಳಿಕ ಯುವಕರಲ್ಲಿ ಸ್ಪಾರ್ಕ್​ ಇದೆಯೋ? ಇಲ್ಲವೋ ನೋಡಿ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

    ಇದಕ್ಕೂ ಮುನ್ನ ಧೋನಿ ಹೇಳಿಕೆಗೆ ತಿರುಗೇಟು ನೀಡಿರುವ ಟೀಮ್​ ಇಂಡಿಯಾದ ಮಾಜಿ ನಾಯಕ ಕ್ರಿಸ್​ ಶ್ರೀಕಾಂತ್​, ಧೋನಿ ಓರ್ವ ಅತ್ಯುತ್ತಮ ಕ್ರಿಕೆಟಿಗ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ, ರಾಜಸ್ಥಾನ ರಾಯಲ್ಸ್​ ವಿರುದ್ಧ ಸೋತ ಬಳಿಕ ಆಡಿದ ಮಾತುಗಳನ್ನು ಒಪ್ಪಲಾಗದು. ನೀವು ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದೀರಿ, ಆದರೆ ನಿಮ್ಮ ಆಯ್ಕೆಯ ಪ್ರಕ್ರಿಯೆಯೇ ತಪ್ಪಾಗಿದೆ ಎಂದು ಧೋನಿಯನ್ನು ಟೀಕಿಸಿದ್ದಾರೆ.

    ಕೇದರ್​ ಜಾಧವ್​ ನಿರಂತರ ವೈಫಲ್ಯ ಕಾಣುತ್ತಿದ್ದಾರೆ. 8 ಪಂದ್ಯಗಳಿಂದ ಕೇವಲ 62 ರನ್​ಗಳನ್ನು ಮಾತ್ರ ಗಳಿಸಿದ್ದಾರೆ. 24 ವರ್ಷದ ಎನ್​ ಜಗದೀಶನ್​ಗೆ ಆರ್​ಸಿಬಿ ವಿರುದ್ಧ ಒಂದು ಅವಕಾಶ ನೀಡಲಾಯಿತು. ಮೊದಲ ಪಂದ್ಯದಲ್ಲೇ 28 ಎಸೆತದಲ್ಲಿ 33 ರನ್​ ಗಳಿಸಿದ್ದರು. ಅವರಿಗೆ ಈ ಪಂದ್ಯದಲ್ಲೂ ಅವಕಾಶ ನೀಡಬಹುದಾಗಿತ್ತು. ಯುವಕರಲ್ಲಿ ತುಡಿತ ಇಲ್ಲ ಎನ್ನುತ್ತೀರಿ, ಹಾಗಾದರೆ ಜಾಧವ್​ರಲ್ಲಿ ತುಡಿತವಿದೆಯೇ? ಪಿಯುಷ್​ ಚಾವ್ಲಾರಲ್ಲಿ ಇದೆಯಾ? ಧೋನಿ ಮಾತು ಇದೆಲ್ಲ ಹಾಸ್ಯಸ್ಪದವಾಗಿದ್ದು, ಅವರು ನೀಡಿದ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈಗಲಾದರೂ ಯುವಕರಿಗೆ ಅವಕಾಶ ನೀಡಿ ಎಂದರು. (ಏಜೆನ್ಸೀಸ್​)

    ಯುವ ಕ್ರಿಕೆಟಿಗರ ಬಗ್ಗೆ ಕಮೆಂಟ್:​ ಧೋನಿ ವಿರುದ್ಧ ತಿರುಬಿದ್ದ ಟೀಮ್​ ಇಂಡಿಯಾ ಮಾಜಿ ನಾಯಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts