More

    ಸಿಎಸ್‌ಕೆ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಐಪಿಎಲ್‌ನಿಂದ ಹೊರನಡೆದರೇ ಜಡೇಜಾ?

    ಮುಂಬೈ: ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಮಾಜಿ ನಾಯಕ ರವೀಂದ್ರ ಜಡೇಜಾ ಐಪಿಎಲ್ 15ನೇ ಆವೃತ್ತಿಯಿಂದ ಹೊರಬಿದ್ದಿರುವುದಕ್ಕೆ ಅಧಿಕೃತವಾಗಿ ಅವರ ಗಾಯದ ಕಾರಣ ನೀಡಲಾಗಿದೆ. ಆದರೆ ಗಾಯದ ಸಮಸ್ಯೆಯ ಜತೆಗೆ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಜತೆಗಿನ ಅವರ ಭಿನ್ನಾಭಿಪ್ರಾಯವೂ ಇದಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

    ನಾಯಕತ್ವ ತ್ಯಜಿಸಿದ ಬಳಿಕ ಜಡೇಜಾ ಸಾಕಷ್ಟು ಕುಗ್ಗಿದ್ದರು. ತಮ್ಮ ಸಾರಥ್ಯದಲ್ಲಿ ತಂಡ ಉತ್ತಮ ನಿರ್ವಹಣೆ ನೀಡದೆ ಇದ್ದಾಗ ಜಡೇಜಾ ಅವರ ವೈಯಕ್ತಿಕ ಾರ್ಮ್ ಕೂಡ ಕುಸಿದಿತ್ತು. ಇದರಿಂದಾಗಿ ಮ್ಯಾನೇಜ್‌ಮೆಂಟ್ ಅಧಿಕಾರಿಗಳಿಂದ ಅವರು ಟೀಕೆಗಳಿಗೆ ಗುರಿಯಾಗಿದ್ದರು. ನಾಯಕತ್ವ ತ್ಯಜಿಸಿದ ಬಳಿಕವೂ ಅವರನ್ನು ಆ ನೋವು ಕಾಡಿತ್ತು. ಇದರಿಂದಾಗಿ ಮಾನಸಿಕವಾಗಿ ನೊಂದಿದ್ದ ಜಡೇಜಾ, ನಂತರದಲ್ಲೂ ಲಯ ಕಂಡುಕೊಂಡಿರಲಿಲ್ಲ.

    10 ಪಂದ್ಯಗಳಲ್ಲಿ ಜಡೇಜಾ 116 ರನ್ ಮತ್ತು 5 ವಿಕೆಟ್‌ಗಳಷ್ಟೇ ಗಳಿಸಿದ್ದರು. ಬ್ಯಾಟಿಂಗ್-ಬೌಲಿಂಗ್ ಜತೆಗೆ ಅವರ ಫೀಲ್ಡಿಂಗ್ ನಿರ್ವಹಣೆಯೂ ಕುಸಿದಿತ್ತು. ವಿಶ್ವದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರೆನಿಸಿದ ಜಡೇಜಾ ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಇದಕ್ಕೆ ಸಾಕ್ಷಿ.

    ‘ನಾಯಕತ್ವ ಜಡೇಜಾಗೆ ಹೊರೆಯಾಗಿ ಪರಿಣಮಿಸಿತು. ಮೊದಲ 2 ಪಂದ್ಯಗಳ ಬಳಿಕ ಅವರಿಗೆ ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದೆ. ಕಳೆದ ವರ್ಷವೇ ಅವರಿಗೆ ಈ ಬಾರಿ ನಾಯಕತ್ವ ಒಲಿಯುವ ಬಗ್ಗೆ ಗೊತ್ತಿರಬಹುದು’ ಎಂಬ ಧೋನಿ ಹೇಳಿಕೆಯೂ ಜಡೇಜಾಗೆ ನೋವು ತಂದಿತ್ತು. ಹೀಗಾಗಿ ಜಡೇಜಾ ಬೇಸರದಿಂದಲೇ ತಂಡದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಸಿಎಸ್‌ಕೆ ತಂಡದ ಇನ್‌ಸ್ಟಾಗ್ರಾಂ ಖಾತೆಯನ್ನು ಜಡೇಜಾ ಬುಧವಾರ ‘ಅನ್‌ಾಲೋ’ ಮಾಡಿರುವುದು ಇದಕ್ಕೆ ಪುಷ್ಠಿ ಎನಿಸಿದೆ.

    ಆದರೆ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಇದನ್ನು ನಿರಾಕರಿಸಿದ್ದು, ‘ಜಡೇಜಾ ಗಾಯದಿಂದಲೇ ತಂಡದಿಂದ ಹೊರಬಿದ್ದಿದ್ದಾರೆ. ಇದರ ಹೊರತಾಗಿ ಬೇರಾವುದೇ ಕಾರಣಗಳಿಲ್ಲ. ಮ್ಯಾನೇಜ್‌ಮೆಂಟ್‌ನಿಂದ ಯಾರೂ ಅವರ ಬಗ್ಗೆ ಅಸಮಾಧಾನಗೊಂಡಿಲ್ಲ. ದುರದೃಷ್ಟವಶಾತ್ ಅವರು ಗಾಯಗೊಂಡರು. ಹೀಗಾಗಿ ಅವರಿಗೆ ಚೇತರಿಕೆಗೆ ಸಮಯ ನೀಡಿದ್ದೇವೆ. ಇನ್ನು ಸಾಮಾಜಿಕ ಜಾಲತಾಣದ ಬೆಳವಣಿಗೆಯ ಬಗ್ಗೆ ನನಗೆ ಏನೂ ಗೊತ್ತಿಲ್ಲ’ ಎಂದಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts