More

    ‘ಪ್ರಿಯಾಂಕಾ ಗಾಂಧಿ​ ಈ ಸಮಯದಲ್ಲಿ ಕೀಳು ರಾಜಕೀಯ ಮಾಡಬಾರದಿತ್ತು…’-ಇದನ್ನು ಹೇಳಿದ್ದು ಕಾಂಗ್ರೆಸ್ ಶಾಸಕಿ

    ಲಖನೌ: ರಾಯ್​ಬರೇಲಿಯ ಕಾಂಗ್ರೆಸ್​ ಶಾಸಕಿ ಅದಿತಿ ಸಿಂಗ್​, ತನ್ನದೇ ಪಕ್ಷದ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಅದಿತಿ ಸಿಂಗ್​ ಈ ಹಿಂದೆ ಗಾಂಧಿ ಕುಟುಂಬದ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಆದರೆ ಇತ್ತೀಚೆಗೆ ಪದೇಪದೆ ಕಾಂಗ್ರೆಸ್​ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಪ್ರಿಯಾಂಕಾ ಗಾಂಧಿಯವರು ಸೃಷ್ಟಿಸಿದ ಒಂದು ವಿವಾದದಿಂದ ಅದಿತಿ ಸಿಂಗ್​ ಮತ್ತೊಮ್ಮೆ ತಮ್ಮ ಪಕ್ಷವನ್ನೇ ಟಾರ್ಗೆಟ್​ ಮಾಡಿದ್ದಾರೆ.

    ವಲಸೆ ಕಾರ್ಮಿಕರು ಅವರ ಊರುಗಳಿಗೆ ತೆರಳಲು ಏನಾದರೂ ವ್ಯವಸ್ಥೆ ಮಾಡಿ. ನಿಮ್ಮಿಂದಾಗದೆ ಇದ್ದರೆ ಹೇಳಿ, ನಾವೇ 1000 ಬಸ್​ ಕಳಿಸುತ್ತೇವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಪ್ರಿಯಾಂಕಾ ಗಾಂಧಿ ಸವಾಲು ಹಾಕಿದ್ದರು. ಅದಕ್ಕೆ ಯೋಗಿ ಸಮ್ಮತಿ ನೀಡಿದ್ದರು. ಆದರೆ ನಿನ್ನೆ ಕಾಂಗ್ರೆಸ್ ಕೊಟ್ಟ 1000 ಬಸ್​ಗಳ ಲೆಕ್ಕಾಚಾರ ಬೇರೆಯದೇ ಸತ್ಯ ಬಿಚ್ಚಿಟ್ಟಿತ್ತು. ಕಳಿಸಿದ ನೋಂದಣಿ ಸಂಖ್ಯೆಯನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಬಹುತೇಕ ಸ್ಕೂಟರ್​, ಆಟೋರಿಕ್ಷಾ, ಸಣ್ಣ ಗೂಡ್ಸ್​ಗಳೇ ಇವೆ ಎಂಬುದು ಗೊತ್ತಾಗಿತ್ತು. ಸಿಎಂ ಸಲಹೆಗಾರ ಈ ಸತ್ಯವನ್ನು ತಿಳಿಸಿದ್ದರು. ಹಾಗೇ ಕಾಂಗ್ರೆಸ್​, ವಲಸೆ ಕಾರ್ಮಿಕರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದ್ದರು.

    ಇದನ್ನೂ ಓದಿ: ಲಾಕ್​ಡೌನ್ ಎಫೆಕ್ಟ್ : ಧಾರ್ಮಿಕ ಪ್ರವಾಸೋದ್ಯಮಕ್ಕೆ ಭಾರೀ ಹಿನ್ನಡೆ

    ಅದೇ ವಿಚಾರಕ್ಕೆ ಅದಿತಿ ಸಿಂಗ್​ ಅವರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಕಾಂಗ್ರೆಸ್​ ನಾಯಕರಿಗೆ ಇಂಥ ಕ್ರೌರ್ಯಯುಳ್ಳ ಜೋಕ್​ ಸೃಷ್ಟಿಸುವುದು ಬೇಕಿತ್ತಾ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
    ಕೊವಿಡ್​-19 ವಿಪತ್ತಿನ ಸಮಯದಲ್ಲಿ ಇಂಥ ಕೀಳು ಮಟ್ಟದ ರಾಜಕೀಯ ಮಾಡುವದು ಕಾಂಗ್ರೆಸ್​ಗೆ ಯಾಕೆ ಬೇಕಿತ್ತು? 1000 ಬಸ್​ಗಳ ಲಿಸ್ಟ್​​ನ್ನು ಕಾಂಗ್ರೆಸ್ ಸರ್ಕಾರಕ್ಕೆ ಕಳಿಸಿದೆ. ಅದರಲ್ಲಿ ಅರ್ಧಕ್ಕರ್ಧ ನೋಂದಣಿ ಸಂಖ್ಯೆಗಳು ನಕಲಿ. 297 ಕಳಪೆ ಬಸ್​ಗಳು, 98 ಆಟೋ ರಿಕ್ಷಾಗಳು, ಆಂಬುಲೆನ್ಸ್​ನಂತಹ ವಾಹನಗಳು, 68 ವಾಹನಗಳಿಗೆ ದಾಖಲೆಯೇ ಇಲ್ಲ. ಇದೊಂದು ಕ್ರೌರ್ಯದ ಜೋಕ್​ ಅಲ್ಲವೇ? ಅಷ್ಟಕ್ಕೂ ನಿಮ್ಮ ಬಳಿ ಬಸ್​ ಇದೆ ಎಂದಾದರೆ ಹೀಗೇಕೆ ಮಾಡಬೇಕು? ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್​​ಗಳಿಗೆ ಏಕೆ ಕಳಿಸಲಿಲ್ಲ ಎಂದು ಅದಿತಿ ಸಿಂಗ್​ ಟ್ವೀಟ್​ ಮೂಲಕ ಕುಟುಕಿದ್ದಾರೆ.

    ಅಷ್ಟೇ ಅಲ್ಲ ಯೋಗಿ ಆದಿತ್ಯ ನಾಥ್​ ಅವರನ್ನು ಹೊಗಳಿದ್ದಾರೆ. ಉತ್ತರ ಪ್ರದೇಶದ ಸಾವಿರಾರು ಮಕ್ಕಳು ಕೋಟಾದಲ್ಲಿ ಸಿಲುಕಿದ್ದಾಗ ಕಾಂಗ್ರೆಸ್​ನ ಸೋ ಕಾಲ್ಡ್​ ಬಸ್​ಗಳು ಎಲ್ಲಿ ಹೋಗಿದ್ದವು. ಆಗ ಈ ಪಕ್ಷಕ್ಕೆ ಅವರನ್ನು ಮನೆಗೆ ತಲುಪಿಸಲು ಸಾಧ್ಯವಾಗಲಿಲ್ಲ. ಅದೂ ಹೋಗಲಿ, ಗಡಿಯನ್ನು ಮುಟ್ಟಿಸಲೂ ಆಗಲಿಲ್ಲ. ಆ ಸಮಯದಲ್ಲಿ ಯೋಗಿ ಆದಿತ್ಯನಾಥ್​ ಜೀ ಅವರೇ ವಿದ್ಯಾರ್ಥಿಗಳನ್ನು ವಾಪಸ್​ ಕರೆಸಿದ್ದಾರೆ. ಇದನ್ನು ರಾಜಸ್ಥಾನ ಮುಖ್ಯಮಂತ್ರಿ ಕೂಡ ಹೊಗಳಿದ್ದಾರೆ ಎಂದು ಅದಿತಿ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: ಇದು ಸಿಹಿ ಸುದ್ದಿ ಎನ್ನುತ್ತಿದ್ದಾರೆ ತಾರಕ್ ಅಭಿಮಾನಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts