More

    ರಾಷ್ಟ್ರ ಕಾಯುವ ಯೋಧರ ಚಿತ್ತ ಈಗ ಅಗೋಚರ ಶತ್ರುವಿನ ದಮನದತ್ತ; ಫೀಲ್ಡ್​​ಗೆ ಇಳಿದಿದೆ ಸಿಆರ್​​ಪಿಎಫ್ ಪಡೆ !

    ನವದೆಹಲಿ: ಗಡಿ ಕಾಯುವ ಸೈನಿಕರು ತಮ್ಮ ತ್ಯಾಗ ಗುಣ ಹಾಗೂ ಅಪ್ರತಿಮ ರಾಷ್ಟ್ರಪ್ರೇಮದಿಂದಾಗಿ ಯಾವಾಗಲೂ ಜನ ಮನ ಗೆಲ್ಲುತ್ತಾರೆ. ಅವರೇನೇ ಮಾಡಿದರೂ ಅದು ಮಹತ್ಕಾರ್ಯವೇ ಆಗಿರುತ್ತದೆ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಶತ್ರುಗಳ ವಿರುದ್ಧ ಹೋರಾಟಕ್ಕಷ್ಟೇ ತಮ್ಮ ಕಾರ್ಯವನ್ನು ಸೀಮಿತಗೊಳಿಸಿಕೊಳ್ಳದೆ ಎಂಥದೇ ತುರ್ತು ಪರಿಸ್ಥಿತಿ ಎದುರಾದಾಗಲೂ ಅಲ್ಲಿ ಸೇವೆ ಸಲ್ಲಿಸುವಲ್ಲಿ ಮೊದಲಿಗರಾಗುವ ಯೋಧರು ಅಪ್ರತಿಮ ಸೇನಾನಿಗಳೆಂದೇ ಹೇಳಬಹುದು.

    ಈಗ ಯೋಧರು ಮತ್ತೆ ಯುದ್ಧಕ್ಕಿಳಿದಿದ್ದಾರೆ. ಈ ಬಾರಿ ಅವರು ಯುದ್ಧ ಸಾರಿರುವುದು ಅಗೋಚರ ಶತ್ರುವಿನ ವಿರುದ್ಧ. ಹೌದು, ಈಗ ಸಿಆರ್​ಪಿಎಫ್​​​ ಯೋಧರು ಮಹಾಮಾರಿ ಕರೊನಾ ವಿರುದ್ಧ ಸಮರ ಸಾರಿದ್ದಾರೆ. ಸದಾ ಕೈಯಲ್ಲಿ ಬಂದೂಕು ಹಿಡಿದು ಕಣ್ಣಿಗೆ ಕಾಣುವ ಶತ್ರುವಿನ ಸಂಹಾರಕ್ಕಾಗಿ ಸನ್ನದ್ಧರಾಗುವ ಯೋಧರು ಈ ಬಾರಿ ಕರೊನಾ ನಿಯಂತ್ರಿಸಲು ಪಿಪಿಇ ಕಿಟ್​ ಹಾಗೂ ಮಾಸ್ಕ್​ ತಯಾರಿಸುವ ಮೂಲಕ ಮತ್ತೊಂದು ಸಮರಕ್ಕೆ ಸಜ್ಜಾಗಿದ್ದಾರೆ.

    ಉಗ್ರರನ್ನು ಸಂಹರಿಸುವ ಛಲದಂತೆಯೇ ಈಗ ಕರೊನಾ ವಿರುದ್ಧವೂ ಅವರು ಕೆಚ್ಚೆದೆಯಿಂದ ಹೋರಾಟಕ್ಕಿಳಿದಿದ್ದಾರೆ. ಈಗಾಗಲೇ ಸ್ಯಾನಿಟೈಸರ್​ ಕಿಟ್​ ವಿತರಿಸುವ ಮೂಲಕ ಜನ ಮನ ಗೆದ್ದಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಕುಲ್​ಗಾಂವ್​​ ಮೂಲದ ಪೇದೆ ಅಬ್ದುಲ್​ ಹಮೀದ್​ ಈಗ ಸಿಆರ್​ಪಿಎ್​ ಯೋಧರಿಗೆ ಮಾಸ್ಕ್​ಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಅವರೇ ಹೇಳುವಂತೆ, ಈಗ ಇದು ತಮ್ಮ ಹಾಗೂ ತಮ್ಮ ತಂಡದ ಮುಂದಿರುವ ಅನಿರೀತ ಸವಾಲಾಗಿದ್ದು, ಬಿಡುವಿಲ್ಲದೆ ನಿತ್ಯ 40 ಸಾವಿರದಿಂದ 50 ಸಾವಿರ ಮಾಸ್ಕ್​ಗಳನ್ನು ತಯಾರಿಸುತ್ತಿದ್ದಾರೆ.

    ಮತ್ತೊಂದಡೆ, ಸಿಆರ್​ಪಿಎಫ್​ ದೆಹಲಿ ಮೂಲದ ಕ್ಯಾಂಪ್​ನಲ್ಲಿ ಸ್ವಯಂಚಾಲಿತ ಯಂತ್ರವನ್ನು ತಂದಿದ್ದು, ನಿತ್ಯ ಅಂದಾಜು 1 ಲಕ್ಷ ಮಾಸ್ಕ್​ಗಳನ್ನು ತಯಾರಿಸಲಾಗುತ್ತಿದೆ. ಅಗತ್ಯ ಕಚ್ಚಾ ಸಾಮಗ್ರಿಗಳು ಲಭ್ಯವಾದಲ್ಲಿ ನಿತ್ಯ 2 ಲಕ್ಷ ಮಾಸ್ಕ್​ಗಳನ್ನು ತಯಾರಿಸಬಹುದು ಎಂದು ಸೇನಾ ಮೂಲ ತಿಳಿಸಿದೆ. (ಏಜೆನ್ಸೀಸ್​)

    ಲಾಕ್​ಡೌನ್​ ಟೈಂಪಾಸ್​ಗಾಗಿ ಗಂಟೆಗಟ್ಟಲೆ ಮೊಬೈಲ್ ನೋಡುವವರಿಗೊಂದು ಶಾಕಿಂಗ್ ನ್ಯೂಸ್ ಇಲ್ಲಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts