More

    ಕಾಗೆ ಕೋಗಿಲೆಗೆ ಬುದ್ದಿ ಹೇಳಿತ್ತಂತೆ! – ಮಾಜಿ ಶಾಸಕ ದಢೇಸುಗೂರು ಕುರಿತು ವ್ಯಂಗ್ಯ

    ಕಾರಟಗಿ: ಜಲಾಶಯದಿಂದ ಕಾಲುವೆಗೆ ನೀರು ಪೂರೈಸಿರುವುದನ್ನು ಮಾಜಿ ಶಾಸಕ ಬಸವರಾಜ ದಢೇಸುಗೂರು ಕಾಲುವೆ ದಂಡೆಯ ಮೇಲೆ ನಿಂತು ಕಣ್ಣು ತೆರೆದು ನೋಡಿಕೊಳ್ಳಲಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

    ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರದೊಂದಿಗೆ ಮಾತನಾಡಿದ ಅವರು, ಕಾಲುವೆಗೆ ನೀರು ಹರಿಸುವ ಬಗ್ಗೆ ಮಾಜಿ ಶಾಸಕರಿಗೆ ಸಾಮಾನ್ಯ ಜ್ಞಾನವಿಲ್ಲವಾದ್ದರಿಂದ ಅವರಿಂದ ಕಲಿಯುವ ಅಗತ್ಯವಿಲ್ಲ. ಅವರ ಮಾತು ಕೇಳಿದರೆ ಕಾಗೆ ಕೋಗಿಲೆಗೆ ಬುದ್ದಿ ಹೇಳಿದಂತಿದೆ.

    ಇದನ್ನೂ ಓದಿ: ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ: ಸಚಿವ ಶಿವರಾಜ ತಂಗಡಗಿ ಆಶ್ವಾಸನೆ

    ರಾಯಚೂರಿನ ಗಣೇಕಲ್ ಸಮತೋಲನ ಜಲಾಶಯಕ್ಕೆ ನೀರು ತಲುಪಿದ ಕೂಡಲೇ ವಿತರಣಾ ಕಾಲುವೆಗಳಿಗೆ ನೀರು ಪೂರೈಸಲಾಗುತ್ತದೆ. ಎಡದಂಡೆ ಕಾಲುವೆಗೆ ಹಂತಹಂತವಾಗಿ ನೀರು ಪೂರೈಕೆ ಹೆಚ್ಚಿಸಲಾಗುತ್ತದೆ. ಮಾಜಿ ಶಾಸಕರಿಗೆ ಭತ್ತದ ಬೇರು ಮತ್ತು ಕಾಳು ಎಣಿಸುವುದಷ್ಟೇ ಗೊತ್ತಿರುವುದು ಎಂದು ವ್ಯಂಗ್ಯವಾಡಿದರು.

    ಯಾವುದೇ ಸರ್ಕಾರ ರಚನೆ ಆದಾಗ ವರ್ಗಾವಣೆ ನಡೆಯುವುದು ಸಹಜ ಪ್ರಕ್ರಿಯೆ. ಅವರ ಅವಧಿಯಲ್ಲಿ ಬಂದಿರುವ ಪಿಐ ಮತ್ತು ವೈದ್ಯಾಧಿಕಾರಿ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಮಾಜಿ ಶಾಸಕರಿಗೆ ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆಯಿಲ್ಲ. ಅವರ ಅಧಿಕಾರವಧಿಯಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಅಮಾನತುಗೊಂಡರು.

    ಪಿಎಸ್‌ಐ ಹಗರಣ, ಪುರಸಭೆ ಅನುದಾನವನ್ನು ಬೇರೆ ಇಲಾಖೆಗೆ ವರ್ಗಾಯಿಸಿರುವುದು ಹಾಗೂ ಕ್ಷೇತ್ರದ ಏತ ನೀರಾವರಿ ಯೋಜನೆಯನ್ನು ಸಿಂಧನೂರು ಕ್ಷೇತ್ರದ ತಮ್ಮ ಜಮೀನಿಗೆ ಕೊಂಡೊಯ್ದಿರುವುದು ಸೇರಿ ಅನೇಕ ದುರಾಡಳಿತ ನಡೆಸಿದ್ದಾರೆ. ಎಲ್ಲವನ್ನು ಹಂತಹಂತವಾಗಿ ಸರ್ಕಾರದಿಂದ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts