More

    ಬೆಳೆ ಸಮೀಕ್ಷೆಗಾರರಿಗೆ ಸೇವಾ ಭದ್ರತೆ ಒದಗಿಸಿ

    ಹನುಮಸಾಗರ: ರೈತರ ಬೆಳೆ ಸಮೀಕ್ಷೆ ಮಾಡುವ ಪಿಆರ್‌ಗಳ ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಮಂಗಳವಾರ ಕುಷ್ಟಗಿ ತಾಲೂಕಿನ ಬೆಳೆ ಸಮೀಕ್ಷೆಗಾರರ ತಂಡ ತಹಸೀಲ್ದಾರ್ ಶೃತಿ ಮಲ್ಲಪ್ಪಗೌಡ್ರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.

    ಇದನ್ನೂ ಓದಿ: ವಿದ್ಯಾಭ್ಯಾಸದ ಜತೆ ಸಂಸ್ಕಾರ, ಗುಣವಂತಿಕೆ ಬೆಳೆಸಿಕೊಳ್ಳಿ

    ಕುಷ್ಟಗಿ ತಹಸಿಲ್ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದ ಪಿಆರ್‌ಗಳು ಆರೇಳು ವರ್ಷಗಳಿಂದ ಈ ಕೆಲಸ ನಿರ್ವಹಿಸುತ್ತಿದ್ದು. 2019 ರಿಂದ ಒಂದು ಪ್ಲಾಟಿಗೆ ಕೇವಲ 10 ರೂ. ತೆಗೆದುಕೊಳ್ಳುತ್ತಿದ್ದೇವೆ.

    ಒಂದು ಋತುವಿನಲ್ಲಿ ಮೂರ್ನಾಲ್ಕು ಬಾರಿ ಬೆಳೆ ಸಮೀಕ್ಷೆ ಮಾಡಬೇಕಾಗುತ್ತದೆ. ಇದರಿಂದ ಕೆಲಸದ ಹೋರೆ ಹೆಚ್ಚಾಗುತ್ತದೆ. ಆದ್ದರಿಂದ ಪಿಆರ್‌ಗಳ ಗೌರವ ಧನ ಹೆಚ್ಚಿಗೆ ಮಾಡಬೇಕು.

    ಮಾಸಿಕ ವೇತನದೊಂದಿಗೆ ಪಿಆರ್‌ಗಳನ್ನು ಖಾಯಂಗೊಳಿಸಬೇಕು. ಸಾಮಾಜಿಕ ಹಾಗೂ ಆರೋಗ್ಯ ಭದ್ರತೆ ನೀಡಿ. ಪ್ರತಿ ಪ್ಲಾಟ್‌ಗೆ 50 ರೂ.ಯಂತೆ ಹೆಚ್ಚಿಸಿ.ಇಲಾಖೆಯಿಂದ ಬೆಳೆ ಸಮೀಕ್ಷೆಗಾರರಿಗೆ ಐಡಿ ಕಾರ್ಡ ನೀಡಬೇಕು.

    ಬೆಳೆ ಸಮೀಕ್ಷೆ ಮಾಡುವ ಸಮಯದಲ್ಲಿ ಏನಾದರೂ ಅವಘಡಗಳು ಸಂಭವಿಸಿದರೆ ಹಾಗೂ ಆರೋಗ್ಯ ಸಮಸ್ಯೆ ಕಂಡು ಬಂದರೆ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿ.

    ಇಲಾಖೆಯಿಂದ ಪಿಆರ್‌ಗಳಿಗೆ ಬೆಳೆ ಸಮೀಕ್ಷೆ ಮಾಡಲು ಟ್ಯಾಬ್ ಅಥವಾ ಗುಣಮಟ್ಟದ ಮೊಬೈಲ್ ನೀಡಬೇಕು ಎಂದು ಒತ್ತಾಯಿಸಿದರು.
    ಪಿಆರ್‌ಗಳಾದ ಮಂಜುನಾಥ ಹೂಲಗೇರಿ, ಹುಚ್ಚೇಶ ಬಂಡರಗಲ, ಕಳಕಪ್ಪ ಚಳಗೇರಿ, ವೆಂಕಟೇಶ ದಳಪತಿ, ಸಗರಪ್ಪ, ಮಲ್ಲಿಕಾರ್ಜುನ ಕನ್ನೂರ, ಚನ್ನಪ್ಪ ಅಂಗಡಿ, ಸಂಗಮೇಶ ಗುರುಕಾರ, ಗಗೇಶ ಕಲ್ಲಗೋನಾಳ, ಬಸವಪ್ಪ ಹನುಮನಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts