More

    ಬೆಂಬಲಬೆಲೆ ಯೋಜನೆಯಡಿ ಹಿಂಗಾರು ಬೆಳೆಗಳ ಬೆಲೆ ಹೆಚ್ಚಳ

    ಹುಬ್ಬಳ್ಳಿ : ಮುಂಬರುವ 2024-25 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ರೈತರು ತಾವು ಬೆಳೆದ ಬೆಳೆಗಳನ್ನು ಅತ್ಯುತ್ತಮ ಬೆಲೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿದಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಿಳಿಸಿದ್ದಾರೆ.

    ಗೋಧಿ ಸೇರಿ ಪ್ರಮುಖ ಆರು ಹಿಂಗಾರು ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಹೆಚ್ಚಳ ಮಾಡಿದೆ. ರೈತರ ಆದಾಯ ವೃದ್ಧಿಸುವ ಜತೆಗೆ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಬೆಂಬಲ ಬೆಲೆ ಹೆಚ್ಚಿಸಲಾಗಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

    ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವ ಪ್ರಕಾರ ಚನ್ನಂಗಿ ಬೇಳೆ ಪ್ರತಿ ಕ್ವಿಂಟಾಲ್​ಗೆ 425 ರೂ. ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಒಟ್ಟು ಒಂದು ಕ್ವಿಂಟಾಲ್​ಗೆ 6,425 ರೂ. ನಿಗದಿ ಮಾಡಲಾಗಿದೆ. ಗೋಧಿಗೆ 150 ರೂ. ಹೆಚ್ಚಳ ಮಾಡುವುದರ ಮೂಲಕ ಒಟ್ಟು ಒಂದು ಕ್ವಿಂಟಾಲ್​ಗೆ 2,275 ರೂ. ನಿಗದಿ ಮಾಡಲಾಗಿದೆ. ಕಡಲೆ 105 ರೂ. ಹೆಚ್ಚಳ ಮಾಡುವುದರ ಮೂಲಕ ಒಟ್ಟು ಒಂದು ಕ್ವಿಂಟಾಲ್​ಗೆ 5,440 ರೂ. ನಿಗದಿ ಮಾಡಲಾಗಿದೆ. ಬಾರ್ಲಿಗೆ 115 ರೂ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು ಒಂದು ಕ್ವಿಂಟಾಲ್ ಗೆ 1,850 ರೂ. ನಿಗದಿ ಮಾಡಲಾಗಿದೆ. ಸಾಸಿವೆಗೆ 200 ರೂ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಒಂದು ಕ್ವಿಂಟಾಲ್​ಗೆ 5,650 ರೂ. ನಿಗದಿ ಮಾಡಲಾಗಿದೆ. ಕುಸುಬೆಗೆ 150 ರೂ. ಹೆಚ್ಚಳ ಮಾಡುವುದರೊಂದಿಗೆ ಒಂದು ಕ್ವಿಂಟಾಲ್ ಗೆ 5,800 ರೂ. ನಿಗದಿ ಪಡಿಸಲಾಗಿದೆ.

    2013-14ನೇ ಸಾಲಿನ ಬೆಂಬಲ ಬೆಲೆ ಗಮನಿಸಿದರೆ, ಈ ಬಾರಿ ಶೇ. 50 ರಷ್ಟು ಹೆಚ್ಚಳ ಮಾಡಿರುವುದು ಮೋದಿ ಸರ್ಕಾರದ ವಿಶೇಷ ಎಂದು ಸಚಿವ ಜೋಶಿ ಹೇಳಿದ್ದಾರೆ.

    ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ರೈತರಿಂದ ಹಿಂಗಾರು ಬೆಳೆಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts