More

    ನೈಸರ್ಗಿಕ ಬೇಸಾಯದಿಂದ ಬೆಳೆಗಳ ರಕ್ಷಣೆ ಸಾಧ್ಯ

    ಶಿವಮೊಗ್ಗ: ನೈಸರ್ಗಿಕ ಕೃಷಿಯು ರೈತರಲ್ಲಿ ಸುಸ್ಥಿರತೆ ಮೂಡಿಸುತ್ತದೆ. ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆಯನ್ನು ದೂರವಾಗಿಸುತ್ತದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾಧಿಕಾರಿ ಡಾ. ಕೆ.ಟಿ.ಗುರುಮೂರ್ತಿ ಹೇಳಿದರು.

    ಕೃಷಿ ಸಖಿಯರಿಗೆ ಏರ್ಪಡಿಸಿದ್ದ ಐದು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ನೈಸರ್ಗಿಕ ಬೇಸಾಯವು ಮಣ್ಣಿನ ಫಲವತ್ತತೆ ಮತ್ತು ಬಲವನ್ನು ಸುಧಾರಿಸಿ ಹವಾಮಾನ ವೈಪರೀತ್ಯದ ವಿರುದ್ಧ ಬೆಳೆಗಳನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.
    ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಜಿ.ಕೆ.ಗಿರಿಜೇಶ್ ಮಾತನಾಡಿ, ನೈಸರ್ಗಿಕ ಕೃಷಿಯ ಪ್ರಾಮುಖ್ಯತೆ, ಅದರ ಅವಶ್ಯಕತೆ ಹಾಗೂ ರೈತರಿಗೆ ಅದರಿಂದಾಗುವ ಉಪಯೋಗಗಳು, ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ಕಲಿಸುವಂತಹ ವಿಷಯಗಳ ಬಗ್ಗೆ ವಿವರಣೆ ನೀಡಿದರು.
    ವಿಜ್ಞಾನಿ ಡಾ. ಗಣೇಶ್, ನೈಸರ್ಗಿಕ ಕೃಷಿಯಲ್ಲಿ ಮುಖ್ಯವಾಗಿ ಬೇವು, ಗೋಮೂತ್ರ, ಹುದುಗಿಸಿದ ಮೊಸರು, ನೀರು, ದಶಪರ್ಣಿ ಇತ್ಯಾದಿಗಳ ಸಾರ, ಬೇವು-ಗೋಮೂತ್ರದ ಸಾರ, ಮಿಶ್ರ ಎಲೆಗಳ ಸಾರ ಮತ್ತು ಮೆಣಸಿನಕಾಯಿ-ಬೆಳ್ಳುಳ್ಳಿ ಸಾರ ಇತ್ಯಾದಿಗಳನ್ನು ಸ್ವಾಭಾವಿಕವಾಗಿ ಕೀಟಗಳ ನಿರ್ವಹಣೆಯಲ್ಲಿ ಕಡಿಮೆ ಖರ್ಚಿನಲ್ಲಿ ರೈತರೇ ತಯಾರಿಸಬಹುದು ಎಂದು ತಿಳಿಸಿದರು.
    ವಿವಿಯ ಸಹ ವಿಸ್ತರಣಾ ನಿರ್ದೇಶಕ ಡಾ. ಹನುಮಂತಸ್ವಾಮಿ, ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ಎನ್.ಸುಧಾರಾಣಿ, ಸಹ ಸಂಯೊಜಕ ಡಾ. ಭರತ್‌ಕುಮಾರ್ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts