More

    ಬೆಳೆ ವಿಮೆ ನೋಂದಣಿ ಆರಂಭ

    ಚನ್ನರಾಯಪಟ್ಟಣ: 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕು ವ್ಯಾಪ್ತಿಯ ರೈತರು ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು ಎಂದು ಪ್ರಭಾರ ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ತಿಳಿಸಿದ್ದಾರೆ.

    ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳಿಂದ ಮಾಹಿತಿ ಹಾಗೂ ವಿಮೆ ಕಂತು ನೋಂದಣಿ ಅರ್ಜಿ ಪಡೆದು ಬ್ಯಾಂಕ್‌ಗಳಲ್ಲಿ ನಿಗದಿತ ಹಣ ಸಂದಾಯ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ಪಹಣಿ, ಖಾತೆ ಹೊಂದಿರುವ ರೈತರು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪುಸ್ತಕದ ಪ್ರತಿಗಳನ್ನು ಲಗತ್ತಿಸಬೇಕು.

    ತಲಾ ಒಂದು ಎಕ್ಕರೆಯಂತೆ ಅಲಸಂದೆ (ಮಳೆಯಾಶ್ರಿತ) ಬೆಳೆಗೆ 208 ರೂ. ಎಳ್ಳು (ಮಳೆ) 200 ರೂ. ಮತ್ತು ಆಲೂಗಡ್ಡೆ(ನೀರಾವರಿ) ಬೆಳೆಗೆ 2900 ರೂ.ನಂತೆ ದರ ನಿಗದಿಯಾಗಿದ್ದು, ಜು.15ರೊಳಗೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು.

    ಮುಸುಕಿನ ಜೋಳ (ಮಳೆಯಾಶ್ರಿತ) ಒಂದು ಎಕರೆಗೆ 400 ರೂ. ನಿಗದಿಪಡಿಸಲಾಗಿದ್ದು, ಜು.31ರಂದು ಅಂತಿಮ ದಿನವಾಗಿದೆ. ಒಂದು ಎಕರೆ ಹುರಳಿ 144 ರೂ., ರಾಗ(ಮಳೆಯಾಶ್ರಿತ) 304 ರೂ. ಹಾಗೂ ನೀರಾವರಿಯ ರಾಗಿ ಬೆಳೆಗೆ 368 ರೂ. ಮತ್ತು ಭತ್ತಕ್ಕೆ 688 ರೂ. ನಿಗದಿಯಾಗಿದ್ದು, ಆ.14ರವರೆಗೆ ಸಮಯವಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts