More

    ಬೆಳೆ ವಿಮೆ ಪಾವತಿಗೆ ಜಾಗೃತಿ ಮೂಡಿಸಿ: ಅಧಿಕಾರಿಗಳಿಗೆ ಚಳ್ಳಕೆರೆ ಶಾಸಕ ರಘುಮೂರ್ತಿ ಸೂಚನೆ

    ಚಳ್ಳಕೆರೆ: ಮಳೆಯ ಕೊರತೆಯಿಂದಾಗಿ ನಿರೀಕ್ಷಿತ ಶೇಂಗಾ ಬಿತ್ತನೆ ಆಗಿಲ್ಲ. ರೈತರಲ್ಲಿ ಪರ್ಯಾಯ ಬೆಳೆಯತ್ತ ಜಾಗೃತಿ ಮೂಡಿಸಬೇಕು. ಸಕಾಲಕ್ಕೆ ಬೆಳೆ ವಿಮೆ ಕಟ್ಟುವಂತೆ ತಿಳಿಸಿ ಬೆಳೆ ಹಾನಿಯ ಪರಿಹಾರವಾದರೂ ಸಿಗುವಂತೆ ಅವಕಾಶ ಮಾಡಬೇಕು ಎಂದು ಶಾಸಕ ಟಿ. ರಘುಮೂರ್ತಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬೆಳೆ ವಿಮೆ ಅವಧಿ ವಿಸ್ತರಿಸುವಂತೆ ಕೃಷಿ ಇಲಾಖೆ ಆಯುಕ್ತರಿಗೆ ದೂರವಾಣಿ ಮೂಲಕ ತಿಳಿಸಿದರು.

    ಕಿಸಾನ್ ಸಮ್ಮಾನ್ ಯೋಜನೆ ದುರ್ಬಳಕೆ ಆಗುತ್ತಿದ್ದು, ಸಾಣೀಕೆರೆ, ಬೆಳಗೆರೆ ಗ್ರಾಮದ 7 ರೈತರ ಪಹಣಿ ಬಳಸಿಕೊಂಡು ಬೇರೆಯವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿಸಿಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್‌ಕುಮಾರ್ ಅವರಿಗೆ ಸೂಚಿಸಿದರು.

    ಕೆಲ ಗ್ರಾಮಗಳಲ್ಲಿ ಸ್ಮಶಾನ ಸಮಸ್ಯೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ. ಇದರಿಂದ ಗ್ರಾಮ ಸಭೆಗಳಲ್ಲಿ ಜನರ ಪ್ರಶ್ನೆಗಳಿಗೆ ಉತ್ತರ ಕೊಡಲಾಗುತ್ತಿಲ್ಲ. ನೀರಿನ ಘಟಕ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರರ ನಿರ್ಲಕ್ಷ್ಯ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪಿಆರ್‌ಡಿ ಎಇಇ ದಯಾನಂದ ಸ್ವಾಮಿ ಅವರಿಗೆ ಸೂಚಿಸಿದರು.

    ತಹಸೀಲ್ದಾರ್ ಎನ್. ರಘುಮೂರ್ತಿ, ತಾಪಂ ಇಒ ಹನುಮಂತಪ್ಪ, ಎಇಒ ಸಂತೋಷ್, ತಾಲೂಕು ಮಟ್ಟದ ಅಧಿಕಾರಿಗಳು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts