More

    ಬೆಳೆವಿಮೆ, ಪರಿಹಾರ ನೀಡಲು ಒತ್ತಾಯ

    ಚಳ್ಳಕೆರೆ: ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ರೈತರಿಗೆ ಬೆಳೆ ಪರಿಹಾರ, ವಿಮೆ ಹಣ ಶೀಘ್ರ ಬಿಡುಗಡೆ ಮಾಡಬೇಕು ಎಂದು ಅಖಂಡ ಕರ್ನಾಟಕ ರೈತಸಂಘದ ತಾಲೂಕಾಧ್ಯಕ್ಷ ಕೆ.ಚಿಕ್ಕಣ್ಣ ಒತ್ತಾಯಿಸಿದ್ದಾರೆ.

    ವಾರ್ಷಿಕವಾಗಿ ವಾಡಿಕೆ ಮಳೆ ರೈತರಿಗೆ ಅನುಕೂಲವಾಗುತ್ತಿಲ್ಲ. 10 ವರ್ಷಗಳಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗಿವೆ. ಇದರಿಂದ ರೈತರು ಸಾಲಗಾರರಾಗಿದ್ದಾರೆ. ರಾಜ್ಯದ 196 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿರುವ ಸರ್ಕಾರ, ಕೂಡಲೇ ರೈತರ ನೆರವಿಗೆ ಬರಬೇಕು. ಕೈಗಾರಿಕೆ ಇಲಾಖೆಯಲ್ಲಿ ಆರಂಭ ಮಾಡುವ ಕೈಗಾರಿಕೆಗಳ ಸ್ಥಾಪನೆಗೆ ಮೂರು ವರ್ಷಗಳ ಕಾಲ ಶೇ.30ರಷ್ಟು ಸಬ್ಸಿಡಿ, ಮೂರು ವರ್ಷದ ತನಕ ಉಚಿತ ವಿದ್ಯುತ್, ತೆರಿಗೆ ವಿನಾಯಿತಿ ನೀಡುವ ರೀತಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಯೋಜನೆಯಡಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts