More

    ಕೆಎಫ್​ಸಿ ಪಾದರಕ್ಷೆ ಬಿಡುಗಡೆ ಮಾಡಿದ ಕ್ರೋಕ್ಸ್​; ನೋಡಲಷ್ಟೇ ಅಲ್ಲ, ವಾಸನೆಯೂ ಪಕ್ಕಾ ಫ್ರೈಡ್ ಚಿಕನ್​​ನಂತೆ !

    ಫ್ರೈಡ್​ ಚಿಕನ್​ ಪ್ರೇಮಿಗಳಿಗೆ ಇಷ್ಟವಾಗುವ ಸುದ್ದಿ ಇದು. ಇದೀಗ ಕ್ರೋಕ್ಸ್​​ನಿಂದ ಕೆಎಫ್​ಸಿ ಮಾದರಿಯ ಪಾದರಕ್ಷೆಗಳು ತಯಾರಿಸಲ್ಪಟ್ಟಿವೆ. ಈ ಚಪ್ಪಲಿಗಳನ್ನು ನೋಡಿದರೆ ನಿಮಗೆ ಎಕ್ಸೈಟ್​ ಆಗುವುದರಲ್ಲಿ ಎರಡು ಮಾತಿಲ್ಲ.

    ಇದು ನೋಡಲಷ್ಟೇ ಅಲ್ಲ, ಪಕ್ಕಾ ಫ್ರೈಡ್​ ಚಿಕನ್​ನ ಪರಿಮಳವನ್ನು ಹೊಂದಿದೆ. ಇವತ್ತು ಕ್ರೋಕ್ಸ್​ ಆನ್​ಲೈನ್​ನಲ್ಲಿ ಒಂದು ಜತೆ ಪಾದರಕ್ಷೆ ಫೋಟೋಗಳನ್ನು ಬಿಡುಗಡೆ ಮಾಡಿತ್ತು. ಆದರೆ ಈ ಮಾದರಿಯ ಪಾದರಕ್ಷೆಗಳನ್ನು ಸೀಮಿತ ಸಂಖ್ಯೆಯಲ್ಲಿ ಸಿದ್ಧಪಡಿಸಲಾಗಿತ್ತು. ಕ್ರೋಕ್ಸ್​ ಫೋಟೋ ಬಿಡುಗಡೆ ಮಾಡಿದ 30 ನಿಮಿಷಗಳಲ್ಲಿ ಎಲ್ಲ ಚಪ್ಪಲಿಗಳೂ ಮಾರಾಟವಾಗಿವೆ. ಇನ್ನೂ ಯಾರಿಗಾದರೂ ಬೇಕೆಂದರೆ ಸ್ವಲ್ಪ ದಿನ ಕಾಯಲೇ ಬೇಕು ಎಂದು ಕ್ರೋಕ್ಸ್​ ಹೇಳಿದೆ.

    ಈ ಚಪ್ಪಲಿಯ ಹೆಸರು ಕೆಎಫ್​ಸಿx ಕ್ರೋಕ್ಸ್​ ಕ್ಲಾಸಿಕ್​ ಕ್ಲೋಗ್ಸ್​. ಪಾದರಕ್ಷೆ ಕೆಂಪು ಮತ್ತು ಬಿಳಿ ಮಿಶ್ರಿತ ಅಟ್ಟೆಯನ್ನು ಹೊಂದಿದ್ದು, ಮೇಲೆಲ್ಲ ಪೂರ್ತಿ ಫ್ರೈಡ್​ ಚಿಕನ್​ ಪ್ರಿಂಟ್​ ಇದೆ. ಹಾಗೇ ಪಾದರಕ್ಷೆಯ ಮೇಲ್ಮೈ, ಬದಿಗಳಲ್ಲಿ ಮಧ್ಯೆ ಮಧ್ಯೆ ರಂಧ್ರಗಳಿವೆ. ಈ ಪಾದರಕ್ಷೆಯ ಬೆಲೆ 60 ಡಾಲರ್​ಗಳು.

    ಕೇಂಟಕಿ ಫ್ರೈಡ್​ ಚಿಕನ್​xಕ್ರೋಕ್ಸ್​ ಕ್ಲಾಸಿಕ್​ ಕ್ಲಾಗ್ಸ್​ ಪಾದರಕ್ಷೆಗಳನ್ನು ಜು.28ಕ್ಕೆ ಬಿಡುಗಡೆ ಮಾಡುವುದಾಗಿ ಈ ಹಿಂದೆಯೇ ಕ್ರೋಕ್ಸ್​ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿತ್ತು.

    ಈ ಪಾದರಕ್ಷೆಯನ್ನು ಇಟಾಲಿಯನ್ ಲಕ್ಸೂರಿ ಫ್ಯಾಶನ್​ ಹೌಸ್​ ಬೊಟ್ಟೆಗಾ ವೆನೆಟಾ ವಿನ್ಯಾಸಗೊಳಿಸಿದೆ. (ಏಜೆನ್ಸೀಸ್​)

    ಹ್ಯಾಪಿ ಬರ್ಥ್​ಡೇ ಹೇಳೋಕೆ ಒಬ್ಬರೇ ಒಬ್ಬರು ಇರಲಿಲ್ಲ … ಸೋನು ಭಾವುಕ ನುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts