More

    ಅಪರಾಧ, ಅಪಘಾತಗಳ ತಡೆಗೆ ರಾತ್ರಿ 11ರ ಬಳಿಕ ಅಂಗಡಿ ಮುಂಗಟ್ಟು ಬಂದ್: ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿಕೆ

    ಚನ್ನಗಿರಿ: ಪಟ್ಟಣದಲ್ಲಿ ಅಪರಾಧ, ಅಪಘಾತಗಳ ತಡೆಗೆ ರಾತ್ರಿ 11ರ ನಂತರ ಅಂಗಡಿ ಮಂಗಟ್ಟು ಹಾಗೂ ಬಾರ್‌ಗಳ ಬಾಗಿಲು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

    ಇಲ್ಲಿನ ಅಂತರಘಟ್ಟಮ್ಮ ದೇವಾಲಯ ಬಳಿ ನಿರ್ಮಿಸಿರುವ ಶುದ್ಧ ಕುಡಿವ ನೀರಿನ ಘಟಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

    ಪಟ್ಟಣದ ಹಲವೆಡೆ ತಡರಾತ್ರಿಯಾದರೂ ಅಂಗಡಿಗಳು ಮುಚ್ಚುವುದಿಲ್ಲ. ಇದು ಅಪರಾಧಗಳ ಹೆಚ್ಚಳಕ್ಕೆ ಕಾರಣವಾಗಿದೆ. ತಪ್ಪಿತಸ್ಥರನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ಆದ್ದರಿಂದ ರಾತ್ರಿ ಬೇಗ ವ್ಯಾಪಾರ ಮುಗಿಸಿಕೊಂಡು ಮನೆ ಸೇರಿಕೊಳ್ಳಬೇಕು ಎಂದು ತಿಳಿಸಿದರು.

    ಸಾವಿರಾರು ಕೋಟಿ ರೂ. ಅನುದಾನ ತಂದು ಫುಟ್‌ಪಾತ್ ನಿರ್ಮಿಸಿದರೆ ವ್ಯಾಪಾರಸ್ಥರು ಅದರ ಮೇಲೆ ಅಂಗಡಿಗಳನ್ನಿಟ್ಟುಕೊಂಡಿದ್ದಾರೆ. ಹೀಗಾದರೆ ಸುಂದರ ಪಟ್ಟಣ ನಿರ್ಮಾಣ ಕಷ್ಟಸಾಧ್ಯ ಎಂದರು.

    ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಪಟ್ಟಣ ಹಾಗೂ ಪ್ರತಿ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಅವಶ್ಯ ಇರುವೆಡೆ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

    ಪುರಸಭೆ ಸದಸ್ಯ ನಂಜುಂಡಿ ಮಾತನಾಡಿ, ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರನ್ನೇ ಕುಡಿಯಬೇಕು. ಪ್ರತಿ ವಾರ್ಡ್ ಹಾಗೂ ಶಾಲಾ ಕಾಲೇಜುಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts