More

    ಗುರುಪುರ ಬಡಕರೆಗುತ್ತಿನ ಮನೆಗೆ ಕ್ರಿಕೆಟಿಗ ಮನೀಶ್ ಪಾಂಡೆ, ಪತ್ನಿ ಆಶ್ರಿತಾ ಶೆಟ್ಟಿ ಭೇಟಿ

     ಗುರುಪುರ: ಭಾರತ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಹಾಗೂ ಅವರ ಪತ್ನಿ ಆಶ್ರಿತಾ ಶೆಟ್ಟಿ ಸೋಮವಾರ ಗುರುಪುರ ಬಡಕರೆಯಲ್ಲಿರುವ ಆಶ್ರಿತಾರ ಗುತ್ತಿನಮನೆ ಹಾಗೂ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನ, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೈವ, ದೇವರ ದರ್ಶನ ಪಡೆದರು. ದೇವಸ್ಥಾನದ ಅರ್ಚಕ ಜಿ.ಕೆ.ಕೃಷ್ಣ ಭಟ್ ಅವರು ಪಾಂಡೆ ದಂಪತಿಗೆ ದೇವರ ಪ್ರಸಾದ ವಿತರಿಸಿದರು.

    ಪಾಂಡೆ ದಂಪತಿಯೊಂದಿಗೆ ಆಶ್ರಿತಾ ಶೆಟ್ಟಿಯವರ ಮಾವ, ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಬಡಕರೆಗುತ್ತು, ಅವರ ಪತ್ನಿ ಚೇತನಾ ಜೆ.ಶೆಟ್ಟಿ ಕಡಂದಲೆ, ಬೆಳ್ಳಿಬೆಟ್ಟುಗುತ್ತು ಸತೀಶ್ ಕಾವ, ಗುರುಪುರ ಪಂಚಾಯಿತಿ ಸದಸ್ಯ ಸುನಿಲ್ ಜಲ್ಲಿಗುಡ್ಡೆ ಹಾಗೂ ಪಾಂಡೆ ಅಭಿಮಾನಿ ಮಕ್ಕಳು ಇದ್ದರು.

    ಗುರುಪುರ ಬಡಕರೆಗುತ್ತಿನ ಮನೆಗೆ ಕ್ರಿಕೆಟಿಗ ಮನೀಶ್ ಪಾಂಡೆ, ಪತ್ನಿ ಆಶ್ರಿತಾ ಶೆಟ್ಟಿ ಭೇಟಿ

    ಹರಿಣಗಳ ನಾಡಿನಲ್ಲಿ ಭಾರತ ಸರಣಿ ಗೆಲುವು: ಮನೀಶ್ ಪಾಂಡೆ ವಿಶ್ವಾಸದ ಮಾತು

    ಗುರುಪುರ: ರವಿಶಾಸ್ತ್ರಿ ಕೋಚ್ ಆಗಿದ್ದಾಗ ಭಾರತ ಕೆಲವು ದ್ವಿಪಕ್ಷೀಯ ಸರಣಿ ಗೆದ್ದಿದೆ. ಅವರ ಅವಧಿಯಲ್ಲಿ ಭಾರತ ತಂಡ ಮಹತ್ವದ ಸಾಧನೆ ಮಾಡಿದೆ. ಪ್ರಸಕ್ತ ರಾಹುಲ್ ದ್ರಾವಿಡ್ ಕೋಚ್. ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ಟ್ರಾಟರ್ಜಿ ಇರುತ್ತದೆ. ಈಗ ದಕ್ಷಿಣ ಆಫ್ರಿಕಾದಲ್ಲಿರುವ ಭಾರತ ತಂಡ ಟೆಸ್ಟ್ ಮತ್ತು ಏಕದಿನ ಸರಣಿ ಗೆಲ್ಲುವ ವಿಶ್ವಾಸವಿದೆ ಎಂದು ಕ್ರಿಕೆಟಿಗ ಮನೀಶ್ ಪಾಂಡೆ ಹೇಳಿದರು.

    ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭ ‘ವಿಜಯವಾಣಿ’ ಜತೆ ಮಾತನಾಡಿದರು. ಹರಿಣಗಳ ನಾಡಿನಲ್ಲಿ ಮೊದಲ ಟೆಸ್ಟ್‌ನಲ್ಲಿ ಕೆ.ಎಲ್.ರಾಹುಲ್ ಉತ್ತಮ ಆರಂಭ ಪಡೆದಿದ್ದು, ಅವರು ಭಾರತ ತಂಡದ ಆಧಾರ ಸ್ತಂಭ. ಅವರೊಬ್ಬ ಆಕರ್ಷಕ ಬ್ಯಾಟ್ಸ್‌ಮೆನ್. ಈ ಬಾರಿ ಖಂಡಿತವಾಗಿಯೂ ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲುವಿನ ಬರ ನೀಗಿಸಲಿದೆ ಎಂದು ಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

    ಪ್ರಸಕ್ತ ಭಾರತ ಕ್ರಿಕೆಟ್ ತಂಡದಲ್ಲಿ ತಮಗೆ ಸ್ಥಾನ ಲಭಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಂಡೆ, ಕೋಚ್ ದ್ರಾವಿಡ್ ಮುಂದಾಳತ್ವದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾದಲ್ಲಿ ಏಕದಿನ ಸರಣಿ ಗೆದ್ದಾಗ ಮತ್ತು ಟಿ-20 ಡ್ರಾ ಮಾಡಿಕೊಂಡಾಗ ನಾನು ತಂಡದ ಸದಸ್ಯನಾಗಿದ್ದೆ. ಅಲ್ಲಿ ನಮ್ಮ ಸಾಧನೆ ಉತ್ತಮವಾಗಿತ್ತು. ಮುಂದೆ ನಡೆಯಲಿರುವ ರಣಜಿಯಲ್ಲಿ ಕಠಿಣ ಪರಿಶ್ರಮಗೈದು, ಮತ್ತೊಮ್ಮೆ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಗುರಿ ಹಾಗೂ ವಿಶ್ವಾಸ ಇಟ್ಟುಕೊಂಡಿದ್ದೇನೆ ಎಂದರು.

    ‘ಐಪಿಎಲ್ ಮತ್ತು ರಣಜಿ ಕ್ರಿಕೆಟ್ ಮೂಲಕವೇ ಮತ್ತೊಂದು ಬಾರಿ ಭಾರತ ತಂಡದ ಕದ ತಟ್ಟಲಿದ್ದೇನೆ. ಭಾರತಕ್ಕಾಗಿ ಆಡುವುದು ಶ್ರೇಷ್ಠ. ಅವಕಾಶಕ್ಕಾಗಿ ಕಾಯುತ್ತೇನೆ’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts