ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭರವಸೆಯ ಬ್ಯಾಟ್ಸ್‌ಮನ್ ಪೃಥ್ವಿ ಷಾ, ಸೆ.19 ರಿಂದ ಆರಂಭಗೊಳ್ಳಲಿರುವ 13ನೇ ಐಪಿಎಲ್‌ಗೆ ಭರ್ಜರಿ ಸಿದ್ಧತೆಯಲ್ಲಿದ್ದಾರೆ. ಅಭ್ಯಾಸದ ಸಹ-ಆಟಗಾರ ಅಕ್ಷರ್ ಪಟೇಲ್ ಜತೆಗೂಡಿ ಮಾಡಿರುವ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಆ ವಿಡಿಯೋ ತಂಡದ ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ವಿಶೇಷ ಏನಂದರೆ, ನಟಿ ಪ್ರಾಚಿ ಸಿಂಗ್ ಕಾಮೆಂಟ್ ಹಾಕಿರುವುದು. ಪ್ರಾಚಿ ಸಿಂಗ್ ಹಾಗೂ ಕ್ರಿಕೆಟ್ ಪೃಥ್ವಿ ಷಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸು ಗುಸು ಸುದ್ದಿ ಇದೀಗ ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: VIDEO: 7 ತಿಂಗಳ ಬಳಿಕ ಪತ್ನಿ ಸಾನಿಯಾ ಮಿರ್ಜಾ ಭೇಟಿಯಾದ ಕ್ರಿಕೆಟಿಗ ಶೋಯಿಬ್ ಮಲಿಕ್
ಇನ್‌ಸ್ಟಾಗ್ರಾಂನಲ್ಲಿ ಪೃಥ್ವಿ ಷಾ ಹಾಕುವ ಪ್ರತಿಯೊಂದು ವಿಡಿಯೋ ಹಾಗೂ ಇತರ ಪೋಸ್ಟ್‌ಗಳಿಗೆ ಪ್ರಾಚಿ ತಪ್ಪದೇ ಕಾಮೆಂಟ್ ಮಾಡುತ್ತಿದ್ದಾರೆ. ಇದರಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪೃಥ್ವಿ ಷಾ ಪ್ರಸಕ್ತ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಶಿಖರ್ ಧವನ್ ಜತೆಗೂಡಿ ಇನಿಂಗ್ಸ್ ಆರಂಭಿಸಲಿದ್ದಾರೆ. ಶಾಲಾ ಟೂರ್ನಿಯೊಂದರಲ್ಲಿ ಪೃಥ್ವಿ ಷಾ 546 ರನ್ ಸಿಡಿಸಿದ್ದರು. ಬಳಿಕ ಪೃಥ್ವಿ ಷಾ ಸಾರಥ್ಯದಲ್ಲಿ 2018ರಲ್ಲಿ ಭಾರತ ತಂಡ 19 ವಯೋಮಿತಿ ವಿಶ್ವಕಪ್ ಗೆದ್ದುಕೊಂಡಿತ್ತು. ರಣಜಿ ಹಾಗೂ ಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಗಮನಸೆಳೆದಿದ್ದರು.
ಇದನ್ನೂ ಓದಿ: ಕಂಗನಾ ವಿರುದ್ಧ ಡ್ರಗ್ಸ್ ಸೇವನೆ ಆರೋಪ- ತನಿಖೆ ನಡೆಸೋಕೆ ಮುಂಬೈ ಪೊಲೀಸ್ಗೆ ಠಾಕ್ರೆ ಸರ್ಕಾರದ ಆದೇಶ
ಕಳೆದ ಒಂದು ವರ್ಷದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಷಾ, ಆಸ್ಟ್ರೇಲಿಯಾ ಪ್ರವಾಸದಿಂದ ವಾಪಸಾಗಿದ್ದರು. ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದು ಅಮಾನತು ಶಿಕ್ಷೆ ಅನುಭವಿಸಿದ್ದರು.
https://www.instagram.com/p/CEWv3hkABNv/?utm_source=ig_web_copy_link
https://www.instagram.com/p/CE1f_qdA05T/?utm_source=ig_web_copy_link