More

    ಸಾಲುಮರದ’ ತಿಮ್ಮಕ್ಕನ ಬಗ್ಗೆ ಹರ್ಭಜನ್​ ಸಿಂಗ್​ ಮೆಚ್ಚುಗೆ ಮಾತು…

    ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್‌ರತ್ನ ಪ್ರಶಸ್ತಿ ತಮ್ಮ ಹೆಸರು ಶಿಫಾರಸು ಮಾಡಿರುವುದನ್ನು ವಾಪಸ್ ಪಡೆಯುವಂತೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮನವಿ ಸಲ್ಲಿಸಿ ಸುದ್ದಿಯಲ್ಲಿದ್ದರು. ಪಂಜಾಬ್ ಸರ್ಕಾರ ತಮ್ಮ ಹೆಸರು ವಾಪಸ್ ಪಡೆದ ಬೆನ್ನಲ್ಲೇ ಹರಡಿದ ಗೊಂದಲಗಳಿಗೆ ಹರ್ಭಜನ್, ಶನಿವಾರ ಸರಣಿ ಟ್ವೀಟ್‌ಗಳ ಮೂಲಕ ಸ್ಪಷ್ಟನೆ ನೀಡಿ ಪ್ರಶಸ್ತಿ ಸ್ವೀಕರಿಸಲು ತಾನು ಅರ್ಹನಲ್ಲ ಎಂದಿದ್ದರು. ಇದೀಗ ಇದೇ ಟರ್ಬನೇಟರ್​ ಕರ್ನಾಟಕವನ್ನು ನೆನಪು ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಪವನ್​ ಕಲ್ಯಾಣ್​ ಅಭಿಮಾನಿಗಳ ವಿರುದ್ಧ ದೂರು ನೀಡಿದ ಟಾಲಿವುಡ್ ಕಾಮಿಡಿಯನ್​ ಅಲಿ!

    ಸಾಲು ಮರದ ತಿಮ್ಮಕ್ಕ ಅವರ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡು, ‘ಇವರು ಇಲ್ಲಿಯವರೆಗೂ 73 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಅವುಗಳನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಇವರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಕೇವಲ ಒಂದೇ ಒಂದು ಸಸಿಯನ್ನಾದರೂ ನಾವು ನೆಡೋಣ. ಧನ್ಯವಾದಗಳು ಅಜ್ಜಿ’ ಎಂದು ಹರ್ಭಜನ್​ ಟ್ವಿಟ್​ ಮಾಡಿದ್ದಾರೆ.

    ಹೀಗೆ ಹರ್ಭಜನ್​ ತಿಮ್ಮಕ್ಕ ಅವರ ಫೋಟೋ ಹಾಕಿಕೊಳ್ಳುತ್ತಿದ್ದಂತೆ, ಸಾಕಷ್ಟು ಕನ್ನಡಿಗರು ಅವರ ಬಗ್ಗೆ ಟ್ವಿಟ್​ ಮಾಡುವ ಮೂಲಕವೇ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಪಡೆದ ಹೆಮ್ಮೆಯ ಕನ್ನಡಿಗರು ಎಂದು ಕೆಲವರು ಕಮೆಂಟ್​ ಮಾಡಿದರೆ, ನಿಮ್ಮ ಈ ಒಂದು ಟ್ವಿಟ್​ನಿಂದ ಕರ್ನಾಟಕದ ತಿಮ್ಮಕ್ಕ ವಿಶ್ವಖ್ಯಾತಿ ಪಡೆದುಕೊಳ್ಳಲಿದ್ದಾರೆ. ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ.

    ಖೇಲ್‌ರತ್ನ ಪ್ರಶಸ್ತಿ ರೇಸ್‌ನಿಂದ ಹಿಂದೆ ಸರಿದ ಹರ್ಭಜನ್ ಸಿಂಗ್, ಕಾರಣವೇನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts