More

    ಕ್ರಿಕೆಟ್ ಪಂದ್ಯ ಆಯೋಜಿಸಿ ಬಾಲಕನ ಚಿಕಿತ್ಸೆಗೆ 4 ಲಕ್ಷ ರೂಪಾಯಿ ನೆರವು

    ಕುಂದಾಪುರ: ಬೈಂದೂರು ತಾಲೂಕು ನಾಡಾ ಗ್ರಾಮ ರಾಮನಗರ ಫ್ರೆಂಡ್ಸ್ ಸೇನಾಪುರ ಯುವಕರು ಅನಾರೋಗ್ಯ ಪೀಡಿತ ಬಾಲಕನ ಚಿಕಿತ್ಸೆಗೆ ಬರೋಬ್ಬರಿ 4 ಲಕ್ಷ ರೂ. ಸಂಗ್ರಹಿಸಿ ಕೊಡುವ ಮೂಲಕ ಮಾನವೀಯತೆ ತೋರಿದ್ದಾರೆ.
    ಪಡುಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ರಿಷಿಕ್ ಆಚಾರ್ಯ (6) ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದು, ತಂದೆ ತಾಯಿ ಕೂಲಿ ಕಾರ್ಮಿಕರಾಗಿದ್ದು ಚಿಕಿತ್ಸೆ ವೆಚ್ಚ ಭರಿಸಲಾಗದೆ ಅಸಹಾಯಕರಾಗಿದ್ದರು. ಬಾಲಕನ ಚಿಕಿತ್ಸೆಗೆ ಧನ ಸಹಾಯ ಮಾಡುವಂತೆ ವಿಜಯವಾಣಿ ಮಾನವೀಯ ವರದಿ ಮಾಡಿತ್ತು.

    ನಾಡಾ ರಾಮನಗರ ಫ್ರೆಂಡ್ಸ್ ಯುವಕರು ಬಾಲಕನ ಚಿಕಿತ್ಸೆಗೆ ಸಹಕರಿಸಲು ನಿಶ್ಚಯಿಸಿ, ಸಹಾಯಾರ್ಥ ಕ್ರಿಕೆಟ್ ಪಂದ್ಯಾಟ ಮೂಲಕ ಬರೋಬ್ಬರಿ 4,04,444 ಲಕ್ಷ ರೂ. ಸಂಗ್ರಹಿಸಿದ್ದು, ಅಷ್ಟೂ ಹಣವನ್ನು ಬಾಲಕನ ಚಿಕಿತ್ಸೆಗೆ ನೀಡಿದ್ದಾರೆ. ಸಂಗ್ರಹಿಸಿದ ಹಣವನ್ನು ಭಾನುವಾರ ಗಣ್ಯರ ಮೂಲಕ ರಿಷಿಕ್ ಆಚಾರ್ಯ ತಾಯಿ ಸುಮಂಗಲಾ ಅವರಿಗೆ ಹಸ್ತಾಂತರಿಸಲಾಯಿತು.

    ಸತೀಶ್ ಕೆ. ರಾಮನಗರ ಸಹಾಯಧನ ವಿತರಣೆ ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೀರ್ತಿ ಕಿರಣ್ ಡಿಸೋಜ, ಕುಂದಾಪುರ ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಕೆನಡಿ ಪಿರೇರಾ, ಮುಖ್ಯಶಿಕ್ಷಕಿ ಸರಿತಾ ಪಾಯಸ್, ಗ್ರಾಪಂ ಸದಸ್ಯ ಸುಧಾಕರ ಶೆಟ್ಟಿ, ಜಯ ಪೂಜಾರಿ, ಉದ್ಯಮಿಗಳಾದ ಅಶೋಕ್ ಶೆಟ್ಟಿ ಸಂಸಾಡಿ, ಜೋಸೆಫ್ ಬ್ಯಾರೋಸ್, ಡೇಜಿ ಬ್ಯಾರೋಸ್, ಸಂತೋಷ್ ಡಿಸೋಜ, ಸತೀಶ ಬಡಾಬಲು, ರಾಮಚಂದ್ರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಟ್ರಸ್ಟಿ ಗೋಪಾಲಕೃಷ್ಣ ನಾಡ, ಗ್ರಾಪಂ ಮಾಜಿ ಸದಸ್ಯ ಸಂದೀಪ ಪೂಜಾರಿ ಉಪಸ್ಥಿತರಿದ್ದರು.
    ಶಂಭು ಗುಡ್ಡಮ್ಮಾಡಿ ಕಾರ‌್ಯಕ್ರಮ ನಿರೂಪಿಸಿ, ರಾಮ ಕೆ. ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts