ಸಿನಿಮಾ

ಕಾವೇರಿ ಕ್ರಿಕೆಟರ್ಸ್ ತಂಡ ಚಾಂಪಿಯನ್

ಮಡಿಕೇರಿ:
ಗೋಣಿಕೊಪ್ಪ ಜಿ. ಎಂ. ಪಿ ಶಾಲಾ ಮೈದಾನಲ್ಲಿ ನಡೆದ ಗೋಣಿಕೊಪ್ಪಲು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಕಪ್ ಪಂದ್ಯಾವಳಿಯ ಅಂತಿಮ ಪಂದ್ಯಾಟದಲ್ಲಿ ಕಾವೇರಿ ಕ್ರಿಕೆಟರ್ಸ್ ತಂಡ ಚಾಂಪಿಯನ್ ಆಗಿದೆ. ಭಗವತಿ ಕ್ರಿಕೆಟರ್ಸ್ ರನ್ನರ್ ಆಫ್ ಸ್ಥಾನ ಪಡೆದುಕೊಂಡಿತು.

ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಾವೇರಿ ಕ್ರಿಕೆಟರ್ಸ್ ತಂಡ ೫ವಿಕೆಟ್ ನಷ್ಟಕ್ಕೆ ೩೮ರನ್ ಗಳಿಸಿ ಭಗವತಿ ಕ್ರಿಕೆಟರ್ಸ್ ತಂಡಕ್ಕೆ ೩೯ ರನ್ ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಭಗವತಿ ಕ್ರಿಕೆಟರ್ಸ್ ತಂಡ ನಾಲ್ಕು ಓವರ್ ಗಳಿಗೆ ೩ ವಿಕೆಟ್ ನಷ್ಟಕ್ಕೆ ೨೬ರನ್ ಗಳನ್ನು ಗಳಿಸಿ೧೩ ರನ್ ಗಳ ಸೋಲು ಅನುಭವಿಸಿ, ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿತು.

ವಿಜೇತ ತಂಡಕ್ಕೆ ೧ ಲಕ್ಷ ರೂ. ನಗದು, ರನ್ನರ್ ಅಪ್ ಸ್ಥಾನ ಪಡೆದ ತಂಡಕ್ಕೆ ೫೦ ಸಾವಿರ ರೂ. ನಗದು ಮೂರನೇ ಸ್ಥಾನ ಪಡೆದ ಬಿ ವೈ ಸಿ ಕಾಕುರ್ ತಂಡಕ್ಕೆ ೧೫,೫೫೫ ರೂ. ನಗದು ಹಾಗೂ ನಾಲ್ಕನೇ ಸ್ಥಾನ ಪಡೆದ ಚಾಣಕ್ಯ ಬಿಟ್ಟಂಗಾಲ ತಂಡಕ್ಕೆ ೧,೧೧೧ನಗದು ನೀಡಲಾಯಿತು. ವಿಜೇತ ಎಲ್ಲಾ ತಂಡಗಳಿಗೂ ಟ್ರೋಫಿ ವಿತರಿಸಲಾಯಿತು.

Latest Posts

ಲೈಫ್‌ಸ್ಟೈಲ್