More

    ಭಾರತೀಯತೆ ಹೊಂದಿದ ಪಠ್ಯಗಳ ರಚನೆ ಅತ್ಯಗತ್ಯ: ಪುನರುತ್ಥಾನ ವಿದ್ಯಾಪೀಠದ ಕುಲಪತಿ ಇಂದುಮತಿ ಕಟ್ದಾರೆ ಹೇಳಿಕೆ

    ಬೆಂಗಳೂರು: ಭಾರತೀಯ ಜ್ಞಾನ ಸಂಪತ್ತನ್ನು ಹೈಜಾಕ್ ಮಾಡುವ ಕೆಲಸ ನಡೆಯುತ್ತಿದ್ದು, ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆವಹಿಸುವ ಅಗತ್ಯವಿದೆ ಎಂದು ಅಹಮದಾಬಾದ್‌ನ ಪುನರುತ್ಥಾನ ವಿದ್ಯಾಪೀಠದ ಕುಲಪತಿ ಇಂದುಮತಿ ಕಟ್ದಾರೆ ಹೇಳಿದ್ದಾರೆ.

    ವಿದ್ಯಾಕ್ಷೇತ್ರ ಗುರುಕುಲ ಹಾಗೂ ಪುನರುತ್ಥಾನ ವಿದ್ಯಾಪೀಠ ಸಹಯೋಗದಲ್ಲಿ ಪೂರ್ಣಪ್ರಮತಿ- ಪರಿಪೂರ್ಣ ಕಲಿಕಾತಾಣ ಸಂಸ್ಥೆ ಜಯನಗರದ ಯುವಪಥದಲ್ಲಿ ಆಯೋಜಿಸಲಾಗಿದ್ದ ‘ಭಾರತೀಯ ಶಿಕ್ಷಣದ ಪುನರುತ್ಥಾನ’ ವಿದ್ವತ್ ಸಮ್ಮೇಳನದಲ್ಲಿ ಮಾತನಾಡಿದರು. ವಿಶ್ವದಲ್ಲೇ ಅತ್ಯಂತ ಪುರಾತನ ಮತ್ತು ಅತ್ಯುತ್ತಮ ಶಿಕ್ಷಣಪದ್ಧತಿಯನ್ನು ಹೊಂದಿದ್ದ ಭಾರತವು ಇಂದು ಸಂಕುಚಿತ ಮತ್ತು ಪಾಶ್ಚಿಮಾತ್ಯ ಚಿಂತನಗಳಿಂದ ಪ್ರಭಾವಕ್ಕೊಳಗಾಗಿ ತನ್ನ ಮೂಲ ಉದ್ದೇಶ ಮತ್ತು ಸತ್ವವನ್ನು ಕಳೆದುಕೊಂಡಿದೆ. ಭಾರತ ಜ್ಞಾನ ರಾಷ್ಟ್ರವಾಗಿದ್ದು, ಅದನ್ನು ಮರಳಿ ಪ್ರತಿಷ್ಠಾಪನೆ ಮಾಡಬೇಕಿದೆ. ಹೀಗಾಗಿ, ಭಾರತೀಯತೆ ಹೊಂದಿದ ಪಠ್ಯಗಳ ರಚನೆಯಾಗಬೇಕಾಗಿದೆ. ಭಾರತೀಯ ಶಿಕ್ಷಣದ ಪುನರುತ್ಥಾನ ಮಾಡಬೇಕೆಂದರೆ ಯುದ್ಧದ ರೀತಿ ಕಹಳೆ ಮೊಳಗಿಸಬೇಕಿದೆ ಎಂದರು.

    ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ಜ್ಞಾನದ ಕುರಿತು ಉಪದೇಶ ಮಾಡಿದ ರಾಷ್ಟ್ರ ನಮ್ಮದು. ಆ ಬಗ್ಗೆ ನಮಗೆ ಹೆಮ್ಮೆ ಇರಬೇರಬೇಕಿತ್ತು. ಆದರೆ,ಇಂದಿಗೂ ಬ್ರಿಟಿಷ್ ಶಿಕ್ಷಣದ ನೀತಿಯ ಸಂಕೋಲೆಯಲ್ಲೆ ಇದ್ದೇವೆ. ಬ್ರಿಟಿಷ್ ಶಿಕ್ಷಣ ನೀತಿಯಿಂದ ಭಾರತೀಯರು ಹೊರಬರಬೇಕು.ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ಪ್ರಾಚೀನ ಜ್ಞಾನದ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕಿದೆ. ವೇದ ವಿಶ್ವದ ಜ್ಞಾನಕೋಶವಾಗಿದೆ. ವೇದ ತಿಳಿಸದೇ ಇದ್ದ ವಿಷಯವೇ ಇಲ್ಲ. ವೇದ ಸರ್ವವನ್ನೂ ಒಳಗೊಂಡಿದೆ. ಅನಾದಿಕಾಲದಿಂದಲೂ ಜ್ಞಾನದ ತವರೂರು ಎಂದು ಭಾರತ ಕರೆಯಿಸಿಕೊಂಡಿದೆ ಎಂದರು. ನಮ್ಮಲ್ಲಿ ಅಪಾರ ಜ್ಞಾನದ ಸಂಪತ್ತು ಇದ್ದರೂ ಅದನ್ನು ಸೂಕ್ತವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ರಾಷ್ಟ್ರ ರಕ್ಷಣೆಗೆ ಪ್ರಾಚೀನ ಜ್ಞಾನದ ಪ್ರತಿಷ್ಠಾಪನೆ ಆಗಬೇಕು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಚೀನ ಜ್ಞಾನದ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು.ಅಯೋಧ್ಯೆಯ ರಾಮನ ಸನ್ನಿಧಿಯಲ್ಲಿಯೂಪ್ರಾಚೀನ ಜ್ಞಾನದ ಶಿಕ್ಷಣ ಕೇಂದ್ರ ನಿರ್ಮಾಣವಾಗಬೇಕು. ಕರ್ನಾಟಕದಲ್ಲಿ ದಕ್ಷಿಣ ಭಾರತದ ಪ್ರಾಚೀನ ಜ್ಞಾನದ ಶಿಕ್ಷಣ ಕೇಂದ್ರ ನಿರ್ಮಾಣ ಮಾಡುವ ಕೆಲಸ ನಡೆಯಬೇಕು ಎಂದು ಶ್ರೀಗಳು ಒತ್ತಾಯಿಸಿದರು.

    ಪಟಾಕಿ ಗೋದಾಮು ಸ್ಫೋಟಿಸಿ ಮೂವರು ಮೃತ್ಯು

    ಭಾರತೀಯ ಶಿಕ್ಷಣ ವಾಪಸ್ಸಾಗಲಿ:
    ಭಾರತೀಯ ಶಿಕ್ಷಣ ಅಂದರೆ ಎನು ಎಂಬ ವೈಚಾರಿಕ ಸ್ಪಷ್ಟತೆ ಬಾರದ ಹೊರತು ಭಾರತೀಯ ಶಿಕ್ಷಣದ ಪುನರುತ್ಥಾನ ಸಾಧ್ಯವಿಲ್ಲ. ಪಠ್ಯ ವಿಷಯವೇ ಬೇರೆ, ಪಠ್ಯಕ್ರಮವೇ ಬೇರೆ. ಔರಂಗಜೇಬ ಸೇರಿ ಹಲವರನ್ನು ಪಠ್ಯದಲ್ಲಿ ತೆಗೆದುಹಾಕಿ ಅವರ ಜಾಗದಲ್ಲಿ ಶಿವಾಜಿ ಮಹಾರಾಜನ ಸೇರಿ ಇತರನ್ನು ತಂದು ಹಾಕಿದ ಮಾತ್ರಕ್ಕೆ ಭಾರತೀಯ ಶಿಕ್ಷಣದ ಪುನರುತ್ಥಾನ ಆಗುವುದಿಲ್ಲ ಎಂದು ಕೂಡಲಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಹೇಳಿದರು. ಹಿಂದೆ ಶಿಕ್ಷಣ ಸಂಸ್ಥೆಗಳು ಇಲ್ಲದೆಯೇ ಅಪ್ಪನ ಬಳಿ ಪಾಠ ಕಲಿತು ಪಂಡಿತರಾಗಿರುತ್ತಿದ್ದರು. ಪಂಡಿತರು ಎನ್ನುವುದಕ್ಕೆ ಅವರ ಅಪ್ಪನ ಬಳಿ ಓದಿದ್ದು ಮಾತ್ರ ಸಾಕ್ಷಿ ಆಗಿತ್ತು. ಪಂರಂಪರೆಗೆ ಮಹತ್ವ ಇತ್ತೆ ಹೊರತು ಯಾವ ಸಂಸ್ಥೆಯಲ್ಲಿ ಕಲಿತಿದ್ದಾರೆ, ಪ್ರಮಾಣಪತ್ರ ಇದೆ ಎನ್ನುವುದು ಮಹತ್ವಯಾಗಿರಲಿಲ್ಲ. ಆದರೆ, ಈಗ ಪ್ರಮಾಣಪತ್ರ ಇಲ್ಲದೆ ಅವರು ಪಂಡಿತರು ಅಲ್ಲ ಅಭಿಪ್ರಾಯಕ್ಕೆ ಬರಲಾಗಿದೆ. ಹಾಗಾಗಿ, ನಾವು ಭಾರತೀಯ ಶಿಕ್ಷಣವನ್ನು ಮತ್ತೆ ವಾಪಸ್ ತರಬೇಕು. ಕುಟುಂಬಗಳ ಒಳಗೆ ಗುರುಕುಲ ಪದ್ಥತಿ ಬರಬೇಕು ಎಂದು ಶ್ರೀಗಳು ಸಲಹೆ ನೀಡಿದರು.

    1051 ಪುಸ್ತಕಗಳ ಲೋಕಾರ್ಪಣೆ: ಪುನರುತ್ಥಾನ ವಿದ್ಯಾಪೀಠ ಹೊರತಂದಿರುವ 1051 ಪುಸ್ತಕಗಳನ್ನು ಏಕಕಾಲದಲ್ಲಿ ಲೋಕಾರ್ಪಣೆ ಮಾಡಲಾಯಿತು. ಮೇಲುಕೋಟೆಯ ಸಂಸ್ಕೃತಿ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ.ಎಂ.ಎ. ಆಳ್ವಾರ್, ಕರ್ನಾಟಕ ಸಂಸ್ಕೃತಿ ವಿವಿಯ ವೇದಾಂತ ದರ್ಶನ ವಿಭಾಗದ ಆಚಾರ್ಯ ಶ್ರೀವೀರನಾರಾಯಣ ಪಾಂಡುರಂಗಿ, ವಿಭು ಅಕಾಡೆಮಿ ಸಂಸ್ಥಾಪಕಿ ಡಾ.ವಿ.ಬಿ.ಆರತಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts