More

    ಮೈತ್ರಿಯಿಂದ ರಾಜ್ಯದಲ್ಲಿ ಹೊಸ ಸಂಚನ ಸೃಷ್ಟಿ

    ಕೋಲಾರ: ಲೋಕಸಭಾ ಚುನಾವಣೆಗೆ ಜೆಡಿಎಸ್​&ಬಿಜೆಪಿ ಮೈತ್ರಿಯಿಂದ ರಾಜ್ಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಇದರಿಂದಾಗಿ ಈ ಬಾರಿ ರಾಜ್ಯವು ಕಾಂಗ್ರೆಸ್​ ಮುಕ್ತವಾಗುತ್ತದೆ ಎಂದು ಮಾಜಿ ಸಚಿವ ಬಂಡಪ್ಪ ಕಾಶಂಪೂರು ಹೇಳಿದರು.

    ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಮೊದಲೆ ಬಿಜೆಪಿಯೊಂದಿಗೆ ಜೆಡಿಎಸ್​ ಮೈತ್ರಿಯಾಗಿದಿದ್ದರೆ ಇಷ್ಟೊತ್ತಿಗೆ ಕಾಂಗ್ರೆಸ್​ ಮುಕ್ತ ದೇಶ ನಿರ್ಮಾಣ ಮಾಡಬಹುದಿತ್ತು. ತಡವಾಗಾದರು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
    ರಾಜ್ಯದಲ್ಲಿ ಮೈತ್ರಿಯಿಂದ ಹೊಸ ಸಂಚಲನ ಮೂಡಿದೆ. ಇದರಿಂದಾಗಿ ಕಾಂಗ್ರೆಸ್​ ಪಕ್ಷವೆ ಪಂಚರ್​ ಆಗಿದೆ. ಎನ್​ಡಿಎ ಅಭ್ಯರ್ಥಿಗಳ ಗೆಲುವಿಗಾಗಿ ಬಿಜೆಪಿ&ಜೆಡಿಎಸ್​ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದು, ಈ ಬಾರಿ ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲುವು ಖಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.
    ಕೇಂದ್ರ, ರಾಜ್ಯ ಮಟ್ಟದ ಬೆಳವಣಿಗಳ ಮೇಲೆ ಕಾಂಗ್ರೆಸ್​ ನಾಯಕರು ಮೂಗು ತೂರಿಸುತ್ತಿದ್ದಾರೆ. ನಮ್ಮ ಮೈತ್ರಿಯನ್ನು ಕಾಂಗ್ರೆಸ್​ ನಾಯಕರು ಸಹಿಸಿಕೊಳ್ಳಲಾಗುತ್ತಿಲ್ಲ. ಗ್ಯಾರೆಂಟಿಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​ ಜನರ ಕಷ್ಟಗಳಿಗೆ ಸ್ಪಂದಿಸುವಲ್ಲಿ ವಿಲವಾಗಿದೆ. ನುಡಿದಂತೆ ನಡೆದಿದ್ದೆವೆ ಎಂಬುದು ಕಾಮನ್​ ಡೈಲಾಗ್​ ಹೇಳಿಕೊಂಡು ಮತ್ತೆ ಚುನಾವಣೆಗೆ ಮುಂದಾಗಿದ್ದು, ಗಂಟ್ಟು ಮೂಟ್ಟೆ ಕಟ್ಟುತ್ತಾರೆ ಎಂದು ಹೇಳಿದರು.
    ಗ್ಯಾರೆಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ಜನರಿಗೆ 200 ಯೂನಿಟ್​ ಉಚಿತ ಮಾಡಿದರು, ಅದು ಕೆಲವರಿಗೆ ಅನುಕೂಲ ಆಗುತ್ತಿದೆ. ಮತ್ತೊಂದು ಕಡೆ ಕೈಗಾರಿಕೆಗಳಿಗೆ ಸರಬರಾಜು ಶುಲ್ಕ ಏರಿಕೆ ಮಾಡಿದ್ದಾರೆ. ಇದರಿಂದಾಗಿ ಉತ್ಪಾದನ ವಸ್ತುಗಳ ಮೇಲಿನ ದರ ಏರಿಕೆ ಮಾಡಿದ್ದಾರೆ. ಒಂದು ಕಡೆ ಅನುಕೂಲ ಮಾಡಿ, ಮತ್ತೊಂದು ಕಡೆ ಅನಾನುಕೂಲ ಮಾಡುತ್ತಿದೆ ಎಂದು ಕಿಡಿಕಾರಿದರು.
    ಎಚ್​.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಮಂದಿ ರೈತರ ಸಾಲ ಮನ್ನಾ ಮಾಡಿದರು. ಇದರಿಂದ ರಾಜ್ಯದ ಖಜಾನೆ ಖಾಯಿಲಾಗಲಿಲ್ಲ. ಅವೈಜ್ಞಾನಿಕವಾಗಿ ಗ್ಯಾರೆಂಟಿಗಳನ್ನು ಜಾರಿಗೆ ತಂದು ಸರ್ಕಾರ ನಡೆಸಲು ಸಿದ್ದರಾಮಯ್ಯ ಅವರ ಸರ್ಕಾರ ಪರಿತಪ್ಪಿಸುತ್ತಿದೆ. ವಿನಾಕಾರಣ ಕಾಂಗ್ರೆಸ್​ ಕೇಂದ್ರ ಸರ್ಕಾರವನ್ನು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ವಚನ ಭ್ರಷ್ಟರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
    ರಾಜ್ಯದಲ್ಲಿ 7 ಸಚಿವರು ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್​ ಗಿಟ್ಟಿಸಿಕೊಂಡಿದ್ದಾರೆ. ಅವರ ಹಾಗೆ ಜೆಡಿಎಸ್​, ಬಿಜೆಪಿ ನಡೆಸಿಕೊಂಡಿಲ್ಲ. ಕೋಲಾರದಲ್ಲೂ ಮೈತ್ರಿ ಅಭ್ಯರ್ಥಿ ಗೆಲುವಿಗೆ ಪೂರಕ ವಾತಾವರಣವಿದ್ದು, ಮತದಾರರು ಅಶೀರ್ವಾದಿಸಬೇಕು ಎಂದು ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು, ಶಫರಡ್​ ಇಂಡಿಯಾ ಅಧ್ಯಕ್ಷ ನಾಗರಾಜ್​, ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಮುಖಂಡರಾದ ಸಿಎಂಆರ್​ ಶ್ರೀನಾಥ್​, ಜೇಟ್​ ಅಶೋಕ್​, ನಾಗಭೂಷಣ್​ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts