More

    ಡಾಂಬರ್ ರಸ್ತೆಯ ಹಲವೆಡೆ ಬಿರುಕು

    ಶಿರಸಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತಾಲೂಕಿನ ದಾಸನಕೊಪ್ಪ ಗ್ರಾಮದಿಂದ ಕಂಡ್ರಾಜಿ ಗ್ರಾಮದವರೆಗೆ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕೈದು ತಿಂಗಳ ಹಿಂದಷ್ಟೇ ನಿರ್ವಿುಸಿರುವ ಡಾಂಬರ್ ರಸ್ತೆ ಹಲವೆಡೆ ಬಿರುಕು ಬಿಟ್ಟಿದ್ದು, ಕೆಲವೆಡೆ ಕುಸಿದಿದೆ. ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
    ತಾಲೂಕಿನ ದಾಸನಕೊಪ್ಪದಿಂದ ಬಂಕನಾಳ, ಉಮ್ಮಡಿ, ಕೋಟೆಕೊಪ್ಪ, ದನಗನಹಳ್ಳಿ ಮಾರ್ಗವಾಗಿ ಕಂಡ್ರಾಜಿಯವರೆಗಿನ 10.35 ಕಿ.ಮೀ ರಸ್ತೆಯನ್ನು ಸುಮಾರು 9.5 ಕೋಟಿ ರೂ. ಮೊತ್ತದಲ್ಲಿ ನಿರ್ವಿುಸಲಾಗಿದೆ. ಕುಮಟಾ ತಾಲೂಕಿನ ಎಚ್.ಆರ್. ನಾಯ್ಕ ಎನ್ನುವವರು ಕಾಮಗಾರಿಯ ಗುತ್ತಿಗೆಯನ್ನು ಪಡೆದಿದ್ದರು.
    ಕೆಲ ತಿಂಗಳ ಹಿಂದೆ ರಸ್ತೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಜನರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಕಾಮಗಾರಿ ಮುಗಿಸಿ ನಾಲ್ಕೈದು ತಿಂಗಳ ಒಳಗೆ ಕೆಲವೆಡೆ ರಸ್ತೆ ಬಿರುಕು ಬಿಟ್ಟಿದೆ. ಇನ್ನು ಕೆಲವೆಡೆ ರಸ್ತೆ ಕುಸಿದಿದ್ದು, ಕಾಮಗಾರಿ ಸಂದರ್ಭದಲ್ಲಿಯೇ ಸ್ಥಳೀಯರು ಗುತ್ತಿಗೆದಾರನನ್ನು ಎಚ್ಚರಿಸಿದ್ದರು. ಆದರೂ ಕಡಿಮೆ ಪ್ರಮಾಣದ ಜಲ್ಲಿ ಮತ್ತು ಡಾಂಬರ್ ಬಳಸುವ ಮೂಲಕ ನಿರ್ದಿಷ್ಟ ಗುಣಮಟ್ಟವನ್ನು ಕಾಯ್ದುಕೊಳ್ಳದೆ ಕಾಮಗಾರಿ ಮುಂದುವರಿಸಿದ್ದರ ಪರಿಣಾಮ ರಸ್ತೆ ಹಾಳಾಗಿದೆ ಎಂದು ದೂರಿದ್ದಾರೆ.
    ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗಲಿ ಎಂದು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ರಸ್ತೆ ಮಾಡಲಾಗಿದೆ. ಆದರೆ, ಕಾಮಗಾರಿ ಸರಿಯಾಗಿ ಮಾಡದ ಪರಿಣಾಮ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಇದರಿಂದ ಜನರು ಬೇಸರಗೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ, ಹಾಳಾದ ಭಾಗದಲ್ಲಿ ರಸ್ತೆಯನ್ನು ಸರಿಪಡಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


    10.35 ಕಿಲೋ ಮೀಟರ್ ರಸ್ತೆಯಲ್ಲಿ 8.7 ಕಿಲೋ ಮೀಟರ್ ಕಾಮಗಾರಿ ಮುಗಿದಿದೆ. ಹಿಂದೆ ಇದ್ದ ರಸ್ತೆ ಮೇಲೆ ಕಾಮಗಾರಿ ಮಾಡಿಲ್ಲ. ಹೊಸದಾಗಿ ಕೆಲವೆಡೆ ರಸ್ತೆ ನಿರ್ವಣವಾಗಿದ್ದು, ಕೆಲವೆಡೆ ಮಣ್ಣು ಸರಿಯಿಲ್ಲದ ಜಾಗದಲ್ಲಿ ಬಿರುಕು ಬಿಟ್ಟಿದೆ. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿದ್ದು, ಸರಿಪಡಿಸಲಾಗುವುದು. ಇಲ್ಲಿ ಕಳಪೆ ಕಾಮಗಾರಿಯಾಗಿಲ್ಲ. ಹೊಸದಾಗಿ ರಸ್ತೆ ನಿರ್ವಿುಸಿದ್ದರಿಂದ ಇಂತಹ ಸಮಸ್ಯೆ ಕಂಡು ಬಂದಿದೆ.
    | ಶರಣ ಬಸಪ್ಪ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಶಿರಸಿ ವಿಭಾಗದ ಎಇಇ


    ಹಲವು ವರ್ಷದಿಂದ ರಸ್ತೆ ನಿರ್ಮಾಣ ಆಗಬೇಕು ಎನ್ನುವುದು ಜನರ ಬೇಡಿಕೆ ಆಗಿತ್ತು. ಆದರೆ, ನಿರ್ವಣವಾದ ಕೆಲದಿನದಲ್ಲೇ ರಸ್ತೆ ಹಾಳಾಗಿರುವುದು ಬೇಸರ ತಂದಿದೆ. ಕಳಪೆ ಕಾಮಗಾರಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೆಲಸ ಮಾಡುವಾಗಲೆ ಅಧಿಕಾರಿಗಳಿಗೆ, ಗುತ್ತಿಗೆ ಪಡೆದವರಿಗೆ ತಿಳಿಸಿದ್ದರೂ ಈ ಬಗ್ಗೆ ಗಮನಹರಿಸಿಲ್ಲ.
    | ಶಶಿಕುಮಾರ ನಾಯ್ಕ
    ಬಂಕನಾಳ ಗ್ರಾಮ ಪಂಚಾಯಿತಿ ಸದಸ್ಯ</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts