More

    ದೀಪಾವಳಿಗೆ ಪಟಾಕಿ ಮಾರಾಟ-ಬಳಕೆ ನಿಷೇಧ; ಹೈಕೋರ್ಟ್​ ಆದೇಶ

    ಕೋಲ್ಕತ: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಈ ಸಲ ದೀಪಾವಳಿಗೆ ಪಟಾಕಿ ಹೊಡೆಯಬೇಕೋ ಬೇಡವೋ ಎಂಬುದು ಕೆಲವು ರಾಜ್ಯಗಳಲ್ಲಿ ಮುನ್ನೆಲೆಗೆ ಬಂದಿರುವ ನಡುವೆ ಈ ರಾಜ್ಯದಲ್ಲಿ ಪಟಾಕಿ ನಿಷೇಧದ ಕುರಿತು ಈಗಾಗಲೇ ಆದೇಶ ಹೊರಬಿದ್ದಿದೆ.

    ಪಟಾಕಿ ಸಿಡಿತದ ಹೊಗೆಯಿಂದ ಕರೊನಾ ಸೋಂಕು ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಅದಕ್ಕೆಂದೇ ಪ್ರತ್ಯೇಕ ಸಮಿತಿಯೊಂದನ್ನು ರಚಿಸಿ ಅಭಿಪ್ರಾಯ ಕೇಳಿದೆ. ಆ ಸಮಿತಿ ನೀಡುವ ವರದಿ ಮೇರೆಗೆ ಪಟಾಕಿ ಕುರಿತು ನಿರ್ಧಾರ ತಳೆಯಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

    ಇನ್ನು ದೆಹಲಿಯಲ್ಲಿ, ಪಟಾಕಿ ಹೊಡೆಯುವುದರಿಂದ ನಿಮ್ಮ ಕುಟುಂಬದವರ ಜೀವದ ಜತೆ ಚೆಲ್ಲಾಟವಾಡಿದಂತೆ. ಆದ್ದರಿಂದ ಏನೇ ಆಗಲಿ ದಯವಿಟ್ಟು ಯಾರೂ ಪಟಾಕಿ ಹೊಡೆಯಬೇಡಿ ಎಂದು ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.

    ಮತ್ತೊಂದೆಡೆ ಪಶ್ಚಿಮ ಬಂಗಾಲ ಸರ್ಕಾರ ಕೂಡ ದೀಪಾವಳಿಗೆ ಪಟಾಕಿ ಹೊಡೆಯದಂತೆ ಅಲ್ಲಿನ ಜನತೆ ಬಳಿ ಮನವಿ ಮಾಡಿಕೊಂಡಿತ್ತು. ಇದೀಗ ಅದಕ್ಕೆ ಪೂರಕ ಎಂಬಂತೆ ಕೋಲ್ಕತ ಹೈಕೋರ್ಟ್ ದೀಪಾವಳಿ ಹಾಗೂ ಕಾಳಿಪೂಜೆಗಾಗಿ ಪಟಾಕಿ ಮಾರುವುದು ಹಾಗೂ ಬಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts