More

    ಮತ್ತೊಂದು ಐಎಂಎ ಪ್ರಕರಣವಿದು…! ಅಧಿಕ ಬಡ್ಡಿ ಆಮಿಷ; 2,000 ಕೋಟಿ ರೂ. ಸಂಗ್ರಹಿಸಿ ಮೋಸ

    ಬೆಂಗಳೂರು: ಥೇಟ್​ ಐಎಂಎ ರೀತಿಯಲ್ಲೇ ವಂಚನೆ ಎಸಗಿದ ಪ್ರಕರಣವಿದು. ರಾಜ್ಯದಲ್ಲೂ ಶಾಖೆಗಳನ್ನು ಹೊಂದಿರುವ ಫೈನಾನ್ಸ್​ ಕಂಪನಿಯೊಂದು ಅಧಿಕ ಬಡ್ಡಿ ನೀಡುವುದಾಗಿ 2,000 ಕೋಟಿ ರೂ.ಗೂ ಅಧಿಕ ಠೇವಣಿ ಸಂಗ್ರಹಿಸಿ ಭಾರಿ ವಂಚನೆ ಮಾಡಿದೆ. ಅನಿವಾಸಿ ಭಾರತೀಯರು ಸೇರಿ ಸಾವಿರಾರು ಜನರು ಇದರಿಂದ ವಂಚನೆಗೆ ಒಳಗಾಗಿದ್ದಾರೆ.

    ಕೇರಳ ಮೂಲದ ಪಾಪ್ಯುಲರ್​ ಫೈನಾನ್ಸ್​ ಕಂಪನಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಣವನ್ನು ವಿದೇಶಗಳಿಗೆ ರವಾನಿಸಿದ್ದಲ್ಲದೇ, ಮೊದಲು ಠೇವಣಿ ಮಾಡಿದ ಗ್ರಾಹಕರಿಗೆ ಹೊಸಬರಿಂದ ಹಣವನ್ನು ನೀಡುತ್ತ ವಂಚನೆ ಮಾಡುತ್ತಿದೆ. ಅಲ್ಲದೇ, ಅಕ್ರಮ ಕಂಪನಿಗಳಲ್ಲೂ ಹಣ ಹೂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಪೊಲೀಸರು ತಿಳಿಸಿದ್ದಾರೆ.

    ಕೇರಳವೊಂದರಲ್ಲೇ 274 ಶಾಖೆಗಳನ್ನು ಹೊಂದಿರುವ ಈ ಕಂಪನಿ, ಗ್ರಾಹಕರಿಂದ 2,000 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿದೆ ಎನ್ನಲಾಗಿದೆ. ಕರ್ನಾಟಕ, ಹರಿಯಾಣ, ತಮಿಳುನಾಡು, ಮಹಾರಾಷ್ಟ್ರಗಳಲ್ಲೂ ಈ ಕಂಪನಿ ಶಾಖೆಗಳನ್ನು ಹೊಂದಿದೆ. ಕೋವಿಡ್​ ಕಾರಣದಿಂದಾಗಿ ಸದ್ಯ ಸಮಗ್ರ ತನಿಖೆ ನಡೆಸಲಾಗಿಲ್ಲ.

    ಇದನ್ನೂ ಓದಿ; ಪ್ರಧಾನಿ ನರೇಂದ್ರ ಮೋದಿ ಈವರೆಗೆ ನೀಡಿದ ದೇಣಿಗೆ ಎಷ್ಟು ಗೊತ್ತೆ?

    ಕರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಗ್ರಾಹಕರು ಠೇವಣಿ ಹಣವನ್ನು ಮರಳಿ ಪಡೆಯಲು ಮುಂದಾದಾಗ ಕಂಪನಿಯ ವಂಚನೆ ಬೆಳಕಿಗೆ ಬಂದಿದೆ. ಜತೆಗೆ ಅವಧಿ ಮುಗಿದ ಬಳಿಕವೂ ಭರವಸೆ ನೀಡಿದ್ದ ಹಣ ನೀಡದಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಜತೆಗೆ ಕಳೆದ ವಾರ ಕಂಪನಿ ತನ್ನೆಲ್ಲ ಶಾಖೆಗಳನ್ನು ಬಂದ್​ ಮಾಡಿದೆ. ಹೀಗಾಗಿ ಸಾವಿರಾರು ಗ್ರಾಹಕರು ತೊಂದರೆಗೆ ಸಿಲುಕಿದ್ದಾರೆ.

    ಕಂಪನಿಯ ಪ್ರವರ್ತಕರಾದ ಥಾಮಸ್​ ಡೇನಿಯಲ್​ ರಾಯ್​ ಹಾಗೂ ಪತ್ನಿ ಪ್ರಭಾ ಮೊದಲಿಗೆ ತಲೆಮರೆಸಿಕೊಂಡಿದ್ದರು. ಇದೀಗ ಪೊಲೀಸರಿಗೆ ಶರಣಾಗಿದ್ದಾರೆ. ಜತೆಗೆ ಲುಕ್​ಔಟ್​ ನೋಟಿಸ್​ ನೀಡಿದ್ದರಿಂದ ದುಬೈಗೆ ಪರಾರಿಯಾಗುತ್ತಿದ್ದ ಡೇನಿಯಲ್​ನ ಹಿರಿಯ ಮಗಳು, ಕಂಪನಿಯ ಮುಖ್ಯಾಧಿಕಾರಿಯೂ ಆದ ರೀನು ಮರಿಯಮ್​ ಥಾಮಸ್​ನನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

    ಕಂಪನಿಯ ಪ್ರವರ್ತಕರು ಹೆಚ್ಚಿನ ಹಣವನ್ನು ವಿದೇಶಗಳಿಗೆ ಸಾಗಿಸಿದ್ದಾರೆ. ಗ್ರಾಹಕರು ಕಂಪನಿಯಲ್ಲಿಟ್ಟಿದ್ದ ಚಿನ್ನವನ್ನು ಬೇರೆಡೆ ಒತ್ತೆಯಿಟ್ಟಿದ್ದಾರೆ. ಆಸ್ತಿಗಳನ್ನು ಅಡವಿಟ್ಟು ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಸಾಲ ಪಡೆದಿದ್ದಾರೆ. ರಾಯ್​ ಕುಟುಂಬದವರು ನೆಲೆಸಿರುವ ಯುಎಇ ಹಾಗೂ ಆಸ್ಟ್ರೇಲಿಯಾದಲ್ಲಿ ಭಾರಿ ಮೊತ್ತದ ಹಣವನ್ನು ಠೇವಣಿಯಾಗಿಟ್ಟಿದ್ದಾರೆ ಎಂದು ತನಿಖಾಧಿಕಾರಿ ಪಿ.ಎಸ್​. ರಾಜೇಶ್​ ಹೇಳಿದ್ದಾರೆ.

    ಇದನ್ನೂ ಓದಿ; ಫ್ಲ್ಯಾಟ್​ನ ಕಿಟಕಿ ಹಾಕದೇ ಊರಿಗೆ ಹೋಗಿದ್ದ; ಐದು ತಿಂಗಳ ಬಳಿಕ ಮನೆ ನೋಡಿದವನಿಗೆ ಕಾದಿತ್ತು ಶಾಕ್​…!

    ಗೋಲ್ಡ್​ ಲೋನ್​ ನೀಡುವ ಪಾಪ್ಯುಲರ್​ ಫೈನಾನ್ಸ್​ ಕಂಪನಿಯನ್ನು 1965ರಲ್ಲಿ ಸ್ಥಾಪಿಸಲಾಗಿದೆ. ಆದರೆ, ಆರ್​ಬಿಐ ಅನುಮತಿ ಇಲ್ಲದೇ ಗ್ರಾಹಕರಿಂದ ಹಣವನ್ನು ಠೇವಣಿಯಾಗಿ ಪಡೆಯುತ್ತಿದ್ದ ಕಾರಣ 2014ರಲ್ಲಿ ವಹಿವಾಟನ್ನು ಸ್ಥಗಿತಗೊಳಿಸಲಾಗಿತ್ತು.

    ಬಳಿಕ ಬೇರೊಂದು ರೂಪದಲ್ಲಿ ವಹಿವಾಟು ಆರಂಭಿಸಿದ ರಾಯ್​ ಮತ್ತು ಆತನ ಕುಟುಂಬದವರು ಪಾಫ್ಯುಲರ್​ ಫೈನಾನ್ಸ್​ ಕಂಪನಿ ಹೆಸರು ಬಳಸಿಕೊಂಡೇ ವಂಚನೆ ಎಸಗಲು ಮುಂದಾದರು. ಅಕ್ರಮ ಕಂಪನಿಗಳಲ್ಲಿ ಷೇರು ಕೊಳ್ಳುವಂತೆ ಜನರನ್ನು ಪುಸಲಾಯಿಸಿದರು. ಅದನ್ನು ಠೇವಣಿ ಎಂದು ಪರಿಗಣಿಸಿ ಭಾರಿ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗ್ರಾಹಕರ ಬ್ಯಾಂಕ್​ ಖಾತೆಗೆ ಬರಲ್ಲ ಎಲ್​ಪಿಜಿ ಸಬ್ಸಿಡಿ ಹಣ; ಕಾರಣವೇನು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts