More

    ಭೂ ರಹಿತರಿಗೆ ಸಾಗುವಳಿ ಚೀಟಿ, ಪಟ್ಟಾ ನೀಡಿ

    ಸಿಂಧನೂರು: ತಾಲೂಕಿನ ಜವಳಗೇರಾ ನಾಡಗೌಡರ ವಿರುದ್ಧ ಸಿಪಿಐ(ಎಂಎಲ್)ರೆಡ್ ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ-ಎಐಕೆಕೆಎಸ್ ನೇತೃತ್ವದ ಹೋರಾಟ ಸೋಮವಾರ 66ನೇ ದಿನ ಪೂರೈಸಿದ ಪ್ರಯುಕ್ತ ವಿಮುಕ್ತಿ ದೇವದಾಸಿ ಮಹಿಳಾ ವೇದಿಕೆಯ ಸಂಚಾಲಕ ಚಂದುಲಿಂಗ ಕಲಾಲಬಂಡಿ, 18 ಜನ ಮಹಿಳೆಯರೊಂದಿಗೆ ಬುತ್ತಿ ರೊಟ್ಟಿ ನೀಡುವುದರೊಂದಿಗೆ ಬೆಂಬಲ ನೀಡಿದರು.

    ವಿಮುಕ್ತಿ ದೇವದಾಸಿ ಮಹಿಳಾ ವೇದಿಕೆಯಿಂದ ಬೆಂಬಲ

    ದಲಿತ, ಹಿಂದುಳಿದ ಭೂ ರಹಿತ ಬಡವರ ಪರವಾದ ಹೋರಾಟಕ್ಕೆ ಬೆಂಬಲ ನೀಡಲಾಗುವುದು. ಪ್ರತಿಯೊಂದು ಹಂತದಲ್ಲಿ ಕುಷ್ಟಗಿ ಹಾಗೂ ಸಿಂಧನೂರು ತಾಲೂಕಿನ ದೇವದಾಸಿ ಮಹಿಳಾ ಸಂಘಟನೆಯ ಹೋರಾಟಕ್ಕೆ ಕೈ ಜೋಡಿಸಲಾಗುತ್ತದೆ. ಕೂಡಲೇ ಜಿಲ್ಲಾಡಳಿತ, ತಾಲೂಕು ಆಡಳಿತ ದಿ.ಸಿದ್ದಲಿಂಗಮ್ಮ ಅವರ ಹೆಚ್ಚುವರಿ ಸರ್ಕಾರಿ ಭೂಮಿಯನ್ನು ಭೂ ರಹಿತರಿಗೆ ಸಾಗುವಳಿ ಚೀಟಿ, ಪಟ್ಟಾ ನೀಡಲೇಬೇಕೆಂದು ಒತ್ತಾಯಿಸಿದರು.

    ಇದನ್ನೂ ಓದಿ: ರಶ್ಮಿಕಾಗೆ ಸೆಡ್ಡು ಹೊಡೆದು ನ್ಯಾಷನಲ್​ ಕ್ರಶ್​ ಆದ ತೃಪ್ತಿ ದಿಮ್ರಿ

    ದಲಿತಪರ ಹಿರಿಯ ಹೋರಾಟಗಾರ ಟಿ.ರತ್ನಾಕರ್, ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಪ್ರಮುಖರಾದ ಎಂ.ಗಂಗಾಧರ, ಹನುಮಂತ ಗೋಡ್ಯಾಳ, ಮುದಿಯಪ್ಪ, ಎಚ್.ಆರ್.ಹೊಸಮನಿ, ಪರಶುರಾಮ, ದರಗಯ್ಯ, ಶಂಕ್ರಪ್ಪ, ಈರಮ್ಮ, ಚೈತ್ರಾ, ದಾವಲಸಾಬ, ಅಪ್ಪಣ್ಣ, ಲಕ್ಷ್ಮೀ, ದುರುಗಣ್ಣ, ಹನುಮಂತ, ರೇಣುಕಮ್ಮ, ಸುಮಲತಾ, ರುಕ್ಮಿಣೇಮ್ಮ, ಕಲ್ಲಮ್ಮ, ಬಿಭೀ ಪಾತಿಮಾ, ಸಂಗಮ್ಮ, ನೂರ ಜಹಾನ್ ಬೇಗಂ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts