More

    ಬಿಜೆಪಿ ವಿರುದ್ಧ ನಿರಂತರ ಹೋರಾಟ ಘೋಷಿಸಿದ ಸಿಪಿಐ

    ಚಿತ್ರದುರ್ಗ: ಜನರ ದಿಕ್ಕು ತಪ್ಪಿಸುತ್ತಿರುವ ಕೋಮುವಾದಿ ಬಿಜೆಪಿ ವಿರುದ್ಧದ ನಮ್ಮ ಹೋರಾಟ ನಿರಂತರವಾಗಿರುತ್ತದೆಂದು ಸಿಪಿಐ ರಾಜ್ಯಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು. ನಗರದ ರೈತ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪಕ್ಷದ 18ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಧರ್ಮ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿ,ಲವ್‌ಜಿಹಾದ್,ಹಿಜಾಬ್,ಹಲಾಲ್‌ಕಟ್ ಇತ್ಯಾದಿ ವಿವಾದಗಳನ್ನು ಸೃಷ್ಟಿ ಸುವ ಮೂಲಕ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ. ಈವರೆಗೆ ರಾಮನ ಹೆಸರಿನಲ್ಲಿ ಮತ ಸೆಳೆಯುವ ಕುತಂತ್ರ ನಡೆಸುತ್ತಿದ್ದ ಬಿ ಜೆಪಿ,ಈಗ ಗಣಪತಿಯನ್ನು ಮುಂದಿಟ್ಟುಕೊಂಡು ಯುವ ಪೀಳಿಗೆಯ ಮತಕ್ಕೆ ಕೈಹಾಕಿದೆ. ಇದರ ವಿರುದ್ದ ಜನರನ್ನು ಜಾಗೃತಗೊಳಿಸು ವುದು ನಮ್ಮ ಹೋರಾಟದ ಉದ್ದೇಶವಾಗಿದೆ.

    ಸೆ.25ರಿಂದ ಮೂರು ದಿನಗಳ ಹಾಸನದಲ್ಲಿ ನಡೆಯುವ ರಾಜ್ಯಮಟ್ಟದ ಕಮ್ಯುನಿಸ್ಟ್ ಸಮ್ಮೇಳನದಲ್ಲಿ ಜನರ ಸಮಸ್ಯೆಗಳ ಕುರಿತು ಚ ರ್ಚಿಸುವುದಾಗಿ ಹೇಳಿದರು. ಮಂಡಳಿ ಜಿಲ್ಲಾ ಕಾರ್ಯದರ್ಶಿ ಸಿ.ವೈ. ಶಿವರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ದೊಡ್ಡುಳ್ಳಾರ್ತಿ ಕರಿಯಣ್ಣ, ಜಿ.ಸಿ.ಸುರೇಶ್‌ಬಾಬು ಅವರು ಮಾತನಾಡಿದರು.

    ಹಿರಿಯೂರು ಸಕ್ಕರೆ ಕಾರ್ಖಾನೆ ಹಾಗೂ ಹಟ್ಟಿ ಚಿನ್ನದ ಗಣಿ ಆರಂಭಿಸಬೇಕು,ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ಉಳಿಸಲು ಹೋ ರಾಟ,ಸರ್ಕಾರಿ ಆಸ್ಪತ್ರೆಗಳ ಖಾಸಗಿಯವರಿಗೆ ವಹಿಸದೆ ಅವುಗಳನ್ನು ಅಭಿವೃದ್ಧಿ ಪಡಿಸಬೇಕು,ಬಡವರಿಗೆ ನಿವೇಶನ,ಮನೆ ಸಿಗಬೇಕು. ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟ ಇತ್ಯಾದಿ ನಿರ್ಣಯಗಳನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾ ಯಿತು.

    ಟಿ.ಆರ್.ಉಮಾಪತಿ,ಜಾಫರ್ ಷರೀಫ್,ಬಿ.ಪಿ.ನಿರ್ಮಲ,ಎನ್.ಸಿ.ಕುಮಾರಸ್ವಾಮಿ,ಬಿ.ಬಸವರಾಜಪ್ಪ,ಎಸ್.ಸಿ.ಕುಮಾರ್,ಜಯ ರಾಮರೆಡ್ಡಿ,ಪಿ.ತಿಪ್ಪೇರುದ್ರಪ್ಪ,ಎಂ.ಬಿ.ಜಯದೇವಮೂರ್ತಿ,ಸತ್ಯಕೀರ್ತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts