More

    ಹೊಸ ಶಿಕ್ಷಣ ನೀತಿ ವಿರೋಧಿಸಿ ಧರಣಿ

    ಗಜೇಂದ್ರಗಡ: ಹೊಸ ಶಿಕ್ಷಣ ನೀತಿ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಸಿಪಿಐ(ಎಂ) ತಾಲೂಕು ಸಮಿತಿ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

    ಸಿಪಿಐ (ಎಂ) ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಮೊದಲು ಸಾಧಕ-ಬಾಧಕಗಳನ್ನು ವಿರೋಧ ಪಕ್ಷಗಳು, ದೇಶದ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪಾಲಕರ ಜೊತೆಗೆ ವಿಸõತವಾಗಿ ಚರ್ಚೆ ನಡೆಸಬೇಕಾಗಿತ್ತು. ಆದರೆ, ಕೇಂದ್ರ ಸರ್ಕಾರ ಎಲ್ಲರನ್ನೂ ಧಿಕ್ಕರಿಸಿ ಹೊಸ ಶಿಕ್ಷಣ ನೀತಿ ನೀತಿ ಜಾರಿಗೊಳಿಸುತ್ತಿದೆ. ಅಧಿಕಾರದಲ್ಲಿ ಉಳಿಯಲು ಪಕ್ಷದ ಹೈಕಮಾಂಡ್ ಅನ್ನು ಓಲೈಸುವ ಅನಿವಾರ್ಯತೆಗೆ ಸಿಕ್ಕ ರಾಜ್ಯ ಸರ್ಕಾರ ತರಾತುರಿಯಲ್ಲಿ ಶಿಕ್ಷಣ ನೀತಿಯ ಜಾರಿಗೆ ಆದೇಶ ಹೊರಡಿಸಿರುವುದು ಖಂಡನೀಯ. ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿಯ ಭಾರತಕ್ಕೆ ಏಕರೂಪದ ಶಿಕ್ಷಣ ಹೊಂದಿಕೊಳ್ಳುವುದಿಲ್ಲ. ಶಿಕ್ಷಣ ವ್ಯವಸ್ಥೆಯನ್ನು ಸ್ಥಳೀಯವಾದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಪರಿಸ್ಥಿತಿ ನೋಡಿಕೊಂಡು ರೂಪಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ನೇರವಾಗಿ ದೆಹಲಿಯಿಂದ ಹೊಸ ಶಿಕ್ಷಣ ನೀತಿಯನ್ನು ರಾಜ್ಯಗಳ ತಲೆ ಮೇಲೆ ಹೇರಿದೆ. ಕೇಂದ್ರ ಸರ್ಕಾರ ಒಕ್ಕೂಟ ಧರ್ಮದ ವ್ಯವಸ್ಥೆ ಪಾಲಿಸಬೇಕು ಎಂದರು.

    ಶಿರಸ್ತೇದಾರ್ ವೀರಣ್ಣ ಅಡಗತ್ತಿ ಅವರಿಗೆ ಮನವಿ ಸಲ್ಲಿಸಲಾಯಿತು. ಬಾಲು ರಾಠೋಡ, ಪೀರು ರಾಠೋಡ, ಮೈಬುಸಾಬ್ ಹವಾಲ್ದಾರ, ರೇವಣಪ್ಪ ರಾಠೋಡ, ಪ್ರಕಾಶ ಹುಲ್ಲಣ್ಣವರ, ರುದ್ರಪ್ಪ ರಾಠೋಡ, ಭೀಮಪ್ಪ ಲಮಾಣಿ, ಹನುಮವ್ವ ಮಾತಿನ, ಈರವ್ವ ಮಾಳೋತ್ತರ, ಚಂದವ್ವ ಮಾಳೋತ್ತರ, ಯಲ್ಲಪ್ಪ ರಾಜೂರ, ಶಂಕ್ರಪ್ಪ ಮಾಳೋತ್ತರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts