More

    ಎಲೆಕ್ಷನ್‌ಗೆ ಬಿಜೆಪಿ ಕೊಟ್ಟ ದುಡ್ಡನ್ನು ಯೋಗೇಶ್ವರ್ ಲಪಟಾಯಿಸಿದ್ರು: ವಿಶ್ವನಾಥ್‌ ವಾಕ್ಸಮರ

    ಬೆಂಗಳೂರು: ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ ಅವರನ್ನು ನೂರಕ್ಕೆ ನೂರರಷ್ಟು ಮಂತ್ರಿ ಮಾಡೇ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ ಬೆನ್ನಲ್ಲೇ, ‘ನನ್ನ ಸೋಲಿಗೆ ಯೋಗೇಶ್ವರ್ ಕಾರಣ’ ಎಂದು ಮೇಲ್ಮನೆ ಸದಸ್ಯ ಎಚ್. ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.

    ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸೇರಿದಂತೆ ಕೆಲವು ಶಾಸಕರ ವಿರೋಧದ ನಡುವೆಯೂ ಮುಖ್ಯಮಂತ್ರಿ ಯೋಗೇಶ್ವರ್ ಅವರನ್ನು ಮಂತ್ರಿ ಮಾಡೇ ಮಾಡುತ್ತೇವೆ ಎಂದು ಕಡ್ಡಿ ಮುರಿದಂತೆ ಹೇಳಿ ಹುಬ್ಬೇರುವಂತೆ ಮಾಡಿದರೆ, ಇತ್ತ ಎಚ್. ವಿಶ್ವನಾಥ್ ತಮ್ಮ ಸೋಲಿಗೆ ಯೋಗೇಶ್ವರ್ ಕಾರಣ ಎಂದು ಹರಿಹಾಯ್ದಿದ್ದಾರೆ. ಪಕ್ಷ ಚುನಾವಣೆಗೆ ಕೊಟ್ಟ ಹಣವನ್ನು ಯೋಗೇಶ್ವರ್ ಮತ್ತು ಎನ್.ಆರ್. ಸಂತೋಷ್ ಲಪಟಾಯಿಸಿದರು. ನನ್ನ ಸೋಲಿಗೆ ಇದು ಕೂಡ ಕಾರಣ. ಇದಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಪಕ್ಷದ ಅಧ್ಯಕ್ಷರಿಗೆ ದೂರು ನೀಡಿದ್ದೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಹುಣಸೂರಿನಲ್ಲಿ ನನಗೆ ಟಿಕೆಟ್ ಕೊಡುವ ಮುನ್ನ ಯೋಗೇಶ್ವರ್ ತಾನೇ ಅಭ್ಯರ್ಥಿ ಅಂತ ಬಿಂಬಿಸಿಕೊಂಡು ಸೀರೆ ಹಂಚಿ ಡ್ಯಾಮೇಜ್ ಮಾಡಿದ್ದ ಎಂದು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ಮಂತ್ರಿಯಾಗಬೇಕೆಂಬ ಖುಷಿಯಲ್ಲಿದ್ದ ವಿಶ್ವನಾಥ್ ಆಸೆಗೆ ಹೈಕೋರ್ಟ್ ತಣ್ಣೀರೆರಚಿರುವ ಬೆನ್ನಲ್ಲೇ ವಿಶ್ವನಾಥ್ ಕೆರಳಿ ಕೆಂಡವಾಗಿದ್ದಾರೆ. ಚುನಾವಣೆಗೆ ಕೊಟ್ಟ ಹಣ ಲಪಟಾಯಿಸಿರುವುದನ್ನು ಬಹಿರಂಗಪಡಿಸುವ ಮೂಲಕ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ. ಸಿ.ಪಿ.ಯೋಗೇಶ್ವರ್ ಜತೆಗೆ ಎನ್.ಆರ್. ಸಂತೋಷ್ ಹೆಸರನ್ನೂ ಉಲ್ಲೇಖಿಸಿರುವ ವಿಶ್ವನಾಥ್ ಇಬ್ಬರೂ ಸೇರಿ ಚುನಾವಣೆಗೆ ಕೊಟ್ಟ ಹಣವನ್ನು ಬೇಕಾದ ಹಾಗೆ ಬಳಸಿಕೊಂಡರು ಎಂದು ಆರೋಪಿಸಿದ್ದಾರೆ.

    ವಿಶ್ವನಾಥ್ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಸಾ.ರಾ.ಮಹೇಶ್, ಹೈಕೋರ್ಟ್ ತೀರ್ಪು ವಿಶ್ವನಾಥ್‌ಗೆ ದೇವರು ಕೊಟ್ಟ ಶಿಕ್ಷೆ. ಕಾರ್ಯಕರ್ತರಿಗೆ ಮೋಸ ಮಾಡಿದರೆ ದೇವರೂ ಕೂಡ ಕ್ಷಮಿಸುವುದಿಲ್ಲ. ಚಾಮುಂಡಿ ದೇವಿ ನ್ಯಾಯ ದೇವತೆ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿದ್ದಾಳೆ. ವಿಶ್ವನಾಥ್ ನೋಡಿದರೆ ಅಯ್ಯೋ ಪಾಪ ಎನ್ನಿಸುತ್ತದೆ ಎಂದು ಕಿಚಾಯಿಸಿದ್ದಾರೆ. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಶ್ವನಾಥ್, ಅವನ್ಯಾರ‌್ರಿ ಸಾ.ರಾ.ಮಹೇಶ್ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಅವನ ಬಗ್ಗೆ ನಾನು ಮಾತನಾಡುವುದಿಲ್ಲ. ಕೊಚ್ಚೆಗೆ ಪದೇ ಪದೆ ಕಲ್ಲೆಸೆಯುವುದಿಲ್ಲ. ನನ್ನ ಬಿಳಿ ವಸವನ್ನು ಕೊಳೆ ಮಾಡಿಕೊಳ್ಳೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ವಿಶ್ವನಾಥ್ ಅತಂತ್ರಸ್ಥಿತಿಗೆ ಇನ್ನೊಬ್ಬ ಸಚಿವಾಕಾಂಕ್ಷಿ ಕಾರಣ: ಶಾಸಕ ಸಾ.ರಾ. ಮಹೇಶ್

    ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು!

    ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts