More

    ಸಗಣಿ-ಗಂಜಲ ಬಳಸಿದ್ರೆ ಕೋವಿಡ್​ ಬರಲ್ಲ!

    ಮೈಸೂರು: ನಾಟಿ ಹಸುವಿನ ಸಗಣಿ ಮತ್ತು ಗಂಜಲವನ್ನು ಆಯುರ್ವೇದದಲ್ಲಿ ಹಲವು ಕಾಯಿಲೆಗಳ ನಿವಾರಣೆಗೆ ಬಳಸುವುದು ಸಾಮಾನ್ಯ. ಇದೀಗ ಅದೇ ಸಗಣಿ, ಗಂಜಲ ಉಪಯೋಗಿಸಿಕೊಂಡು ಕರೊನಾ ಸೋಂಕನ್ನು ನಿಮೂರ್ಲನೆ ಮಾಡಬೇಕು ಎಂದು ಜಾಗೃತಿ ಅಭಿಯಾನ ನಗರದಲ್ಲಿ ಪ್ರಾರಂಭಗೊಂಡಿದೆ.

    ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಕಲಾಕೂಟವು ಈ ಅಭಿಯಾನ ಹಮ್ಮಿಕೊಂಡಿದೆ. ಇದನ್ನೂ ಓದಿರಿ ಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್​ ಸೋಂಕು!

    ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ವಿಚಾರವಾದಿ ಪ್ರೊ.ಕೆ.ಎಸ್​.ಭಗವಾನ್​ ಅವರ ನಿವಾಸದ ಎದುರು ಬುಧವಾರ ಈ ಜಾಗೃತಿ ಅಭಿಯಾನ ಪ್ರಾರಂಭಿಸಲು ಉದ್ದೇಶಿಸಲಾಗಿತ್ತಾದರೂ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಕ್ರಮಕ್ಕೆ ತಡೆಯೊಡ್ಡಿದರು.

    ನಂತರ ಶಾರದಾದೇವಿ ನಗರದಲ್ಲಿರುವ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್​. ಶಿವರಾಮು ಅವರ ನಿವಾಸದ ಎದುರು ಕಾರ್ಯಕ್ರಮ ನಡೆಯಿತು. ಶಿವರಾಮು ಅವರ ಮನೆ ಮುಂದೆ ಸಗಣಿ, ಗಂಜಲವನ್ನು ಹಾಕಿ ಸಾರಿಸಲಾಯಿತು.

    ಇದನ್ನೂ ಓದಿರಿ ಆಗರ್ಭ ಶ್ರೀಮಂತನ ಏಕೈಕ ಪುತ್ರನಿಂದ ಸನ್ಯಾಸ ದೀಕ್ಷೆ ಸ್ವೀಕಾರ

    ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಹಸಿರು ಕರ್ನಾಟಕದ ರೂವಾರಿ ಡಾ.ವಿ.ಎಸ್​. ಸೋಮಶೇಖರ್​ಗೌಡ, 1968ರಲ್ಲಿ ಪ್ಲೇಗ್​ ಕಾಣಿಸಿಕೊಂಡ ಸಂದರ್ಭದಲ್ಲಿ ನಮ್ಮ ಹಿರಿಯರು ಮನೆ ಮದ್ದು ಕಂಡುಕೊಂಡರು. ಹಸುವಿನ ಸಗಣಿ, ಗಂಜಲ, ಅರಿಶಿಣ, ಬೇವಿನ ಸೊಪ್ಪು ಮಿಶ್ರಣ ಮಾಡಿ ಮನೆಯನ್ನು ಸಾರಿಸುತ್ತಿದ್ದರು. ಹೀಗಾಗಿ ಪ್ಲೇಗ್​ ನಿಯಂತ್ರಣಕ್ಕೆ ಬಂತು. ಇದೀಗ ನಾವೂ ಕೂಡ ಇದೇ ಮಾರ್ಗವನ್ನು ಕರೊನಾ ನಿಯಂತ್ರಣಕ್ಕೆ ಬಳಸುವುದು ಉತ್ತಮ ಎಂದರು.

    ಕೆ.ಎಸ್​.ಶಿವರಾಮು ಮಾತನಾಡಿ, ಬೇವಿನ ಸೊಪ್ಪು, ಅರಿಶಿನ, ಸಗಣಿ ಮಿಶ್ರಣ ಮಾಡಿ ಮನೆಯ ಮುಂದೆ ಸಾರಿಸಿದರೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಕಡಿಮೆ. ಮನೆ ಹಾಗೂ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಡಬೇಕು. ವೈಯಕ್ತಿಕವಾಗಿ ನಾವು ಕೂಡ ಶುಚಿಯಾಗಿದ್ದರೆ ಕರೊನಾ ನಿಮೂರ್ಲನೆ ಮಾಡಬಹುದು ಎಂದು ಹೇಳಿದರು.

    ಇನ್ನೂ ಒಂದು ವಾರ ಮಾರುಕಟ್ಟೆಗಳು ಬಂದ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts