More

    ಕೋವಿಶೀಲ್ಡ್​ ಬೆಲೆ ಕಡಿತ : ಒಂದು ಡೋಸ್​ಗೆ 300 ರೂ.

    ಪುಣೆ : ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ತೆರೆಯಲ್ಪಡುವ ಕರೊನಾ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳು ಕರೊನಾ ಲಸಿಕೆಯ ವೆಚ್ಚವನ್ನು ತಾವೇ ಭರಿಸಿ ಜನರಿಗೆ ಉಚಿತ ಲಸಿಕೆ ಒದಗಿಸುವುದಾಗಿ ಘೋಷಿಸಿವೆ. ಈ ಸಂದರ್ಭದಲ್ಲಿ ಭಾರತದ ಎರಡು ಕರೊನಾ ಲಸಿಕೆಗಳಲ್ಲಿ ಹೆಚ್ಚಾಗಿ ನೀಡಲ್ಪಡುತ್ತಿರುವ ಕೋವಿಶೀಲ್ಡ್​ಲಸಿಕೆಯು ರಾಜ್ಯ ಸರ್ಕಾರಗಳಿಗೆ ಮುಂಚೆ ಘೋಷಿಸಿದ್ದಕ್ಕಿಂತ ಶೇ.25 ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

    ಕೋವಿಶೀಲ್ಡ್​​ಅನ್ನು ಉತ್ಪಾದಿಸುವ ದೇಶದ ಅತಿದೊಡ್ಡ ಲಸಿಕೆ ಉತ್ಪಾದಕ ಸೀರಮ್​ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಡಾರ್ ಪೂನವಾಲಾ, “ಲೋಕೋಪಕಾರಿ ಭಾವನೆಯಿಂದ ಪ್ರತಿ ಡೋಸ್​ಗೆ 400 ರೂ. ಗಳಿಂದ 300 ರೂ.ಗಳಿಗೆ ದರವನ್ನು ಇಳಿಸುತ್ತಿದ್ದೇನೆ. ಇದು ಸಾವಿರಾರು ಕೋಟಿ ರಾಜ್ಯದ ಹಣವನ್ನು ಉಳಿಸುತ್ತದೆ. ಇದರಿಂದ ಹೆಚ್ಚು ವ್ಯಾಕ್ಸಿನೇಷನ್‌ಗೆ ಅವಕಾಶ ಉಂಟಾಗಿ, ಅಸಂಖ್ಯಾತ ಜೀವಗಳನ್ನು ಉಳಿಸಲು ಸಹಾಯಕವಾಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಆಕ್ಸಿಜನ್ ಕೊರತೆಗೆ ಮಿಡಿದ ಮಾರುತಿ ಸುಜುಕಿ ; ಮೇ 1 ರಿಂದ 9 ಕಾರ್ಖಾನೆಗಳು ಬಂದ್ !

    ಒಟ್ಟಿನಲ್ಲಿ ಕೋವಿಶೀಲ್ಡ್​ ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್​ಗೆ 150 ರೂ. ದರದಲ್ಲಿ, ರಾಜ್ಯ ಸರ್ಕಾರಗಳಿಗೆ 300 ರೂ.ನಂತೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗಳ ದರದಲ್ಲಿ ಲಭ್ಯವಾಗಲಿದೆ. ಮತ್ತೊಂದು ಮೇಡ್​ ಇನ್​ ಇಂಡಿಯಾ ಲಸಿಕೆಯಾದ ಭಾರತ್ ಬಯೋಟೆಕ್​​ನ ಕೋವಾಕ್ಸಿನ್​ನ ದರ ಕೇಂದ್ರ ಸರ್ಕಾರಕ್ಕೆ 150 ರೂ.ಗಳಷ್ಟೇ ಇದ್ದರೂ, ರಾಜ್ಯ ಸರ್ಕಾರಗಳಿಗೆ 600 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ನಂತೆ ನಿಗದಿಯಾಗಿದೆ. (ಏಜೆನ್ಸಿಸ್)

    ಕರೊನಾ ಕರ್ಫ್ಯೂ ಉಲ್ಲಂಘಿಸಿ ಶೂಟಿಂಗ್ ! ನಟ ಜಿಮ್ಮಿ ಶೇರ್​​ಗಿಲ್ ಸೇರಿ 35 ಜನರ ಮೇಲೆ ಕೇಸ್

    ಕರೊನಾ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್​​ ಬೇಕೆ ? ಬೆಂಗಳೂರಿನಲ್ಲಿ ಈ ವಿಧಾನ ಅನುಸರಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts