More

    ಕರೋನಾಗೆ ಬಳಸುವ ವ್ಯಾಕ್ಸಿನ್​ ರಕ್ತದ ಕ್ಯಾನ್ಸರ್​ ಗುಣಪಡಿಸುತ್ತಾ.?!

    ನವದೆಹಲಿ: ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ ಕೋವಿಡ್​ ವ್ಯಾಕ್ಸಿನ್​ ರಕ್ತದ ಕ್ಯಾನ್ಸರ್​ ಇರುವ ರೋಗಿಗಳಿಗೆ ಬೇಗನೆ ಗುಣಮುಖವಾಗಲು ಸಹಾಯ ಮಾಡುತ್ತದೆ.

    ಇದೀಗ ಫ್ರೀಬರ್ಗ್ಯಾಂಡ್ ವಿಶ್ವವಿದ್ಯಾಲಯ ಮತ್ತು LMU ಮ್ಯೂನಿಚ್‌ನ ವೈದ್ಯಕೀಯ ಕೇಂದ್ರದ ವೈದ್ಯರ ತಂಡ, ಕೋವಿಡ್-19 ವಿರುದ್ಧ ಒಟ್ಟು ಮೂರು ವ್ಯಾಕ್ಸಿನೇಷನ್‌ಗಳನ್ನು ಪಡೆದ ರಕ್ತದ ಕ್ಯಾನ್ಸರ್ ರೋಗಿಗಳನ್ನು ಅಧ್ಯಯನ ಮಾಡಿದ್ದಾರೆ. ಇವರ ಶರೀರದಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆ ಹೇಗೆ ಆಗಿದೆ ಎನ್ನುವುದನ್ನು ವಿವರವಾಗಿ ನಿರೂಪಿಸಿದ್ದಾರೆ.

    ರಕ್ತದ ಕ್ಯಾನ್ಸರ್ ಹೊಂದಿರುವ ಜನರು ಸಾಮಾನ್ಯವಾಗಿ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುತ್ತಾರೆ. ಹೀಗಾಗಿ ಇದು ಕೋವಿಡ್ -19ನಿಂದ ಹೆಚ್ಚಿನ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಹಲವಾರು ಕ್ಯಾನ್ಸರ್ ಚಿಕಿತ್ಸೆಗಳು ರೋಗಿಗಳಲ್ಲಿ ರೋಗನಿರೋಧಕ ಶಕ್ತಿಯೇ ಇಲ್ಲದಂತೆ ಮಾಡುತ್ತದೆ.

    ಇದರಿಂದ ಕೋವಿಡ್ -19 ವ್ಯಾಕ್ಸಿನೇಷನ್ ಮಾಡಿಸಿಕೊಂಡ ನಂತರ ಕರೋನಾ ವೈರಸ್​ ವಿರುದ್ಧ ಯಾವುದೇ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ರೋಗಿಗಳು ಸಮರ್ಥರಾಗಿ ಇರುವುದಿಲ್ಲ. ಆದರೆ, ಮತ್ತೊಂದೆಡೆ, ವ್ಯಾಕ್ಸಿನೇಷನ್ ದೀರ್ಘಾವಧಿಯ ರೋಗನಿರೋಧಕ ಶಕ್ತಿಗೆ ಕಾರಣವಾಗುವ T ಸೆಲ್​ ಕೋಶಗಳನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ಈ ಅಧ್ಯಯನ ತೋರಿಸಿದೆ.

    ಕೋವಿಡ್-19 ವ್ಯಾಕ್ಸಿನೇಷನ್‌ಗೆ T ಸೆಲ್ ಪ್ರತಿಕ್ರಿಯೆ
    ಡಾ. ಆಂಡ್ರಿಯಾ ಕೆಪ್ಲರ್-ಹಫ್ಕೆಮೆಯರ್ ವಿವರಿಸಿದ ಅಧ್ಯಯನ ಎರಡು ರೀತಿಯ ರಕ್ತದ ಕ್ಯಾನ್ಸರ್ ಹೊಂದಿರುವ ರೋಗಿಗಳ ಮೇಲೆ ಕೇಂದ್ರೀಕರಿಸಿದೆ. ಬಿ-ಸೆಲ್ ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾ ಎನ್ನುವುದು ಅವೆರಡರ ಹೆಸರು. ಅಧ್ಯಯನದಲ್ಲಿ ಭಾಗಿ ಆದ ಬಹುತೇಕ ಎಲ್ಲರಲ್ಲೂ ಕೋವಿಡ್-19 ವ್ಯಾಕ್ಸಿನೇಷನ್​ಗೆ T ಸೆಲ್ ಬಲಗೊಂಡ ಪ್ರತಿಕ್ರಿಯೆ ಕಂಡುಬಂದಿದೆ.
    ಒಟ್ಟಿನಲ್ಲಿ ಮನುಷ್ಯ ಏನೋ ಕಂಡುಹಿಡಿದು ಅದರಿಂದ ಮತ್ತೆ ಇನ್ನೇನನ್ನೋ ಪಡೆಯುತ್ತಿದ್ದಾನೆ. ಕರೋನಾಗಾಗಿ ಕಂಡುಹಿಡಿದ ವ್ಯಾಕ್ಸೀನ್​ ಬಹುಷಃ ಇನ್ನಷ್ಟು ಅಧ್ಯಯನದ ನಂತರ ರಕ್ತದ ಕ್ಯಾನ್ಸರ್​ಅನ್ನು ಗುಣಪಡಿಸುವಲ್ಲಿ ಸಹಕಾರಿ ಆಗಬಹುದೋ ಏನೋ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts