More

    ಆಸ್ಪತ್ರೆಗೆ ದಾಖಲಾಗಲು ಕೋವಿಡ್ ಪಾಸಿಟಿವ್ ರಿಪೋರ್ಟ್ ಕಡ್ಡಾಯವಲ್ಲ: ಕೇಂದ್ರದ ಹೊಸ ಮಾರ್ಗದರ್ಶಿ ಸೂತ್ರಗಳು

    ನವದೆಹಲಿ: ಇನ್ಮುಂದೆ ಕೋವಿಡ್ ಪಾಸಿಟಿವ್ ವರದಿ ಬರದಿದ್ದರೂ, ಒಂದು ವೇಳೆ ಯಾರಿಗಾದರೂ ಖಾಯಿಲೆ ಲಕ್ಷಣಗಳಿದ್ದರೇ ಅಂತಹವರನ್ನು ಆಸ್ಪತ್ರೆಗಳು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ. ಸಚಿವಾಲಯ ಬಿಡುಗಡೆ ಮಾಡಿರುವ ಹೊಸ ಮಾರ್ಗದರ್ಶಿ ಸೂತ್ರಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

    ಕೆಲ ಪ್ರಕರಣಗಳಲ್ಲಿ ಕೋವಿಡ್ ಲಕ್ಷಣಗಳಿದ್ದರೂ ಕೋವಿಡ್ ಪಾಸಿಟಿವ್ ಬರುತ್ತಿಲ್ಲ. ಇದರಿಂದ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಆತನನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ಇದಲ್ಲದೇ ದೇಶದಲ್ಲಿ ಯಾವುದೇ ರೋಗಿಗೆ ಔಷಧ ಇಲ್ಲ, ಆಕ್ಸಿಜನ್ ಇಲ್ಲ ಎಂದು ಆಸ್ಪತ್ರೆಗಳು ಹೇಳುವಂತಿಲ್ಲ ಎಂದು ಕೂಡ ಸಚಿವಾಲು ಹೇಳಿದೆ. ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಯಾವುದೇ ಭೇದಭಾವ ಮಾಡದೇ ಅಂದರೆ ಆತನ ಸ್ಥಳ ಹಾಗೂ ಐಡಿ ಕಾರ್ಡ್​​ ಎಂದು ವಿಚಾರಿಸದೇ ಚಿಕಿತ್ಸೆ ನೀಡಬೇಕು ಎಂದು ಹೇಳಿದೆ.

    ಅವಶ್ಯಕತೆ ಇದ್ದವರಿಗೆ ಬೆಡ್​ಗಳನ್ನು ನೀಡಲೇಬೇಕು. ಬೆಡ್​ ಅವಶ್ಯಕತೆ ಇಲ್ಲದವರನ್ನು ಬಿಡುಗಡೆ ನೀತಿ ಮೇಲೆ ಕ್ರಮ ಕೈಗೊಂಡು ಬಿಡುಗಡೆ ಮಾಡಬೇಕು ಎಂದು ಹೇಳಿದೆ.

    ಜೈಲಿನಲ್ಲಿ ಜನದಟ್ಟಣೆ : ಚಿಕ್ಕ ಅಪರಾಧಗಳಲ್ಲಿ ಬಂಧನ ಬೇಡ ಎಂದ ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts