More

    8 ಸಿಂಹಗಳಿಗೆ ಕರೊನಾ ಪಾಸಿಟಿವ್​, ಜೀವಿ ಸಂಕುಲ ತಲ್ಲಣ: ಪ್ರಾಣಿಗಳಲ್ಲಿ ಕಂಡು ಬಂದ ರೋಗ ಲಕ್ಷಣ ಹೀಗಿದೆ…

    ಹೈದರಾಬಾದ್​: ಮಹಾಮಾರಿ ಕರೊನಾ ಸೋಂಕಿಗೆ ಜಗತ್ತು ತಲ್ಲಣಗೊಂಡಿದ್ದು, ಇಡೀ ಮನುಕುಲ ತತ್ತರಿಸಿದೆ. ಲಕ್ಷಾಂತರ ಮಂದಿ ಬಲಿಯಾಗಿದ್ದು, ಸಾವು-ನೋವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭಾರತದಲ್ಲೂ ಕೋವಿಡ್​ ಮರಣಮೃದಂಗ ಭಾರಿಸುತ್ತಿದೆ. ಇಂತಹ ಸಂಕಷ್ಟ ಕಾಲದಲ್ಲಿ ದೇಶದ ಜನತೆಗೆ ಆಘಾತಕಾರಿ ಸುದ್ದಿ ಬಂದಿದೆ.

    ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಕರೊನಾ ಸೋಂಕು ಬರುತ್ತೆ! ಹೌದು, ಹೈದರಾಬಾದ್​ನ ನೆಹರು ಜೂಲಾಜಿಕಲ್​ ಪಾರ್ಕ್​ನ 8 ಏಷ್ಯಾನ್​ ಸಿಂಹಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ನಾಲ್ಕು ಹೆಣ್ಣು, ನಾಲ್ಕು ಗಂಡು ಸಿಂಹಳಿವೆ. ಪ್ರಾಣಿಗಳಲ್ಲಿ ಕರೊನಾ ಸೋಂಕು ಪತ್ತೆಯಾಗಿರುವುದು ಭಾರತದಲ್ಲಿ ಇದೇ ಮೊದಲು.

    ಕಳೆದ ವಾರ ಸಿಂಹಗಳು ಜ್ವರ, ಒಣಕೆಮ್ಮು ಮತ್ತು ನೆಗಡಿಯಿಂದ ಬಳಲುತ್ತಿದ್ದವು. ಹಾಗಾಗಿ ಇವುಗಳ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಿ Centre for Cellular and Molecular Biology (CCMB) ಕೇಂದ್ರದಲ್ಲಿ ಕರೊನಾ ಪರೀಕ್ಷೆ ಮಾಡಲಾಗಿದ್ದು, ವರದಿಯು ಪಾಸಿಟಿವ್​ ಬಂದಿದೆ. ಸಿಂಹಗಳನ್ನು ಐಸೋಲೇಷನ್​ಗೆ ಒಳಪಡಿಸಲಾಗಿದ್ದು, ಇತರ ಪ್ರಾಣಿಗಳ ಸಂಪರ್ಕಕ್ಕೆ ಒಳಗಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ ಮೃಗಾಲಯಕ್ಕೆ ಬಾಗಿಲು ಹಾಕಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಏರಲಾಗಿದೆ ಎಂದು ಮೃಗಾಲಯದ ನಿರ್ವಹಣಾಧಿಕಾರಿ ಭದ್ರಾದೇವಿ ತಿಳಿಸಿದ್ದಾರೆ.

    ಸಿಂಹಗಳ ಆರೋಗ್ಯ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸಿಂಹಗಳು ಸ್ಪಂದಿಸುತ್ತಿದ್ದು, ಚೇತರಿಕೆ ಕಂಡು ಬರುತ್ತಿದೆ. ನಿಯಮಿತವಾಗಿ ಆಹಾರ ಸೇವುತ್ತಿವೆ.ಮೃಗಾಲಯ ಸಿಬ್ಬಂದಿ ಎಚ್ಚರಿಕೆಯಿಂದ ಕಾಳಜಿ ಮಾಡುತ್ತಿದ್ದಾರೆ ಎಂದು ಸಿಸಿಎಂಬಿ ನಿರ್ದೇಶಕ ಡಾ. ರಾಕೇಶ್​ ಮಿಶ್ರ ತಿಳಿಸಿದ್ದಾರೆ.

    2020ರ ಏಪ್ರಿಲ್​ನಲ್ಲಿ ನ್ಯೂ ಯಾರ್ಕ್​​ ನಗರದ ಬ್ರಾಂಕ್ಸ್​ ಮೃಗಾಲಯದಲ್ಲಿ ನಾಲ್ಕು ವರ್ಷದ ಹೆಣ್ಣು ಹುಲಿಗೆ ಸೋಂಕು ಸೋಂಕು ತಗುಲಿದ್ದು ದೃಢಪಟ್ಟಿತ್ತು. ಇದೀಗ ಭಾರತದಲ್ಲೂ ಕಾಡು ಪ್ರಾಣಿಗಳಲ್ಲಿ ಕರೊನಾ ಸೋಂಕು ಹರಡಿದರೆ ಇಡೀ ಜೀವಿ ಸಂಕುಲಕ್ಕೆ ದೊಡ್ಡ ಆಪತ್ತು ತಪ್ಪಿದ್ದಲ್ಲ. ಪ್ರಾಣಿಗಳಿಗೆ ಕರೊನಾ ಪರೀಕ್ಷೆ ಮಾಡಲು ದೇಶದಲ್ಲಿ 4 ಕೇಂದ್ರಗಳಿವೆ. ಅದರಲ್ಲಿ ಸಿಸಿಎಂಬಿ ಕೂಡ ಒಂದು.

    ಅಪಘಾತ: ಸಾವಿನಲ್ಲೂ ಸಾರ್ಥಕತೆ ಮೆರೆದ ಚಿತ್ರದುರ್ಗ ಉಪವಿಭಾಗಾಧಿಕಾರಿ ವಿ.ಪ್ರಸನ್ನ!

    ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

    ಬೆಡ್​ ಬ್ಲಾಕ್​ ದಂಧೆಯ ಬ್ರಹ್ಮಾಂಡ ಬಿಚ್ಚಿಟ್ಟ ತೇಜಸ್ವಿ ಸೂರ್ಯ: ಭ್ರಷ್ಟಾಚಾರ ಅಲ್ಲ ಇದು ಮರ್ಡರ್… ಇವರೆಲ್ಲ ಹುಳ ಬಿದ್ದು ಸಾಯ್ತಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts