More

    ಊಟ ಸೇವಿಸದೆ ಸೋಂಕಿತರ ಪ್ರತಿಭಟನೆ : ಹೊನ್ನಾನಾಯಕನಹಳ್ಳಿ ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆಗೆ ಆಕ್ರೋಶ

    ಚನ್ನಪಟ್ಟಣ : ಹೊನ್ನಾನಾಯಕನಹಳ್ಳಿಯ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಸೋಂಕಿತರು ಭಾನುವಾರ ಪ್ರತಿಭಟನೆ ನಡೆಸಿದರು.
    ಕೇರ್ ಸೆಂಟರ್‌ನಲ್ಲಿ ಬಿಸಿನೀರಿನ ವ್ಯವಸ್ಥೆ ಇಲ್ಲ, ಔಷಧ ಪಡೆಯಲು ಬಹುದೂರ ಹೋಗಬೇಕು ಹಾಗೂ ನೀಡುವ ಊಟವನ್ನು ಬಿಸಾಡಿ ಹೋಗಲಾಗುತ್ತದೆ ಎಂದು ಆರೋಪಿಸಿದ ಸೋಂಕಿತರು, ಕೇಂದ್ರದ ಮುಂಭಾಗ ಧರಣಿ ನಡೆಸಿದರು. ಅಧಿಕಾರಿಗಳು ಆಗಮಿಸಿ ಮನವಿ ಸ್ವೀಕರಿಸುವವರೆಗೂ ಊಟ, ತಿಂಡಿ ಸೇವಿಸುವುದಿಲ್ಲ ಎಂದು ಪಟ್ಟು ಹಿಡಿದರು.

    ಈ ಸಂಬಂಧ ಶಾಸಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೂ ದೂರವಾಣಿ ಮೂಲಕ ದೂರು ನೀಡಿದರು. ಮಾಹಿತಿ ತಿಳಿಯುತ್ತಲೇ ಸೆಂಟರ್‌ಗೆ ಭೇಟಿ ನೀಡಿದ ತಹಸೀಲ್ದಾರ್ ಎಲ್.ನಾಗೇಶ್ ಎದುರು ಸಮಸ್ಯೆ ತೆರೆದಿಟ್ಟರು. ಹಾಗೂ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದರು.

    ಸಮಸ್ಯೆಗೆ ಆಸ್ಪದ ಕೊಡುವುದಿಲ್ಲ : 
    ಪ್ರತಿಭಟನೆ ಸಂಬಂಧ ಪತ್ರಿಕೆಗೆ ಮಾಹಿತಿ ನೀಡಿದ ತಹಸೀಲ್ದಾರ್ ಎಲ್.ನಾಗೇಶ್, ಕೆಲ ಸಣ್ಣ-ಪುಟ್ಟ ಸಮಸ್ಯೆಗಳಿಂದ ಸೋಂಕಿತರು ಅಸಮಾಧಾನಗೊಂಡಿದ್ದರು. ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಲಾಗಿದೆ. ಕೇರ್ ಸೆಂಟರ್‌ಗಳ ಬಗ್ಗೆ ತಾಲೂಕು ಆಡಳಿತ ಹೆಚ್ಚಿನ ಗಮನಹರಿಸುತ್ತಿದೆ. ಗುಣಮಟ್ಟದ ಊಟವನ್ನು ಖುದ್ದಾಗಿ ಸರಬರಾಜು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನಿಗಾವಹಿಸಲಾಗುತ್ತದೆ. ಹೊನ್ನಾನಾಯಕನಹಳ್ಳಿಯಲ್ಲಿರುವ ಎರಡು ಹಾಸ್ಟೆಲ್‌ಗಳ ಪ್ರಾಂಶುಪಾಲರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಅವರಿಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದರು.

    ಎಚ್‌ಡಿಕೆ ಮನವೊಲಿಕೆ :  ಕೇರ್ ಸೆಂಟರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರೊಂದಿಗೆ ಮಾಜಿ ಸಿಎಂ ಎಚ್‌ಡಿಕೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮನವೊಲಿಸಿದರು. ಪ್ರತಿಭಟನೆಯ ಮಾಹಿತಿ ತಿಳಿಯುತ್ತಲೇ ತಹಸೀಲ್ದಾರ್ ಅವರನ್ನು ಸ್ಥಳಕ್ಕೆ ಕಳುಹಿಸಿದ ಅವರು, ತಹಸೀಲ್ದಾರ್ ದೂರವಾಣಿ ಮೂಲಕ ವಿಡಿಯೋ ಕಾಲ್‌ನಲ್ಲಿ ಪ್ರತಿಭಟನಾಕಾರರ ಜೊತೆ ಮಾತನಾಡಿದರು. ಈ ವೇಳೆ ಎಚ್‌ಡಿಕೆಗೂ ಇಲ್ಲಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ತಾಲೂಕು ಆಡಳಿತ ಸೂಕ್ತವಾಗಿ ಕೆಲಸ ನಿರ್ವಹಿಸುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳು ಸಹಜ. ಆದರೆ, ಯಾವುದೇ ಸಮಸ್ಯೆಗಳನ್ನು ಕೂಡಲೇ ಗಮನಕ್ಕೆ ತಂದರೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts