More

    ಚೀನಾ ಪ್ರಯೋಗಾಲಯದ ಎಡವಟ್ಟು ಇಡೀ ವಿಶ್ವಕ್ಕೆ ದುಬಾರಿಯಾಗಿದ್ದು ಹೇಗೆ? ತನಿಖೆ ಶುರು ಮಾಡಿದೆ ಅಮೆರಿಕ

    ನವದೆಹಲಿ: ಸರ್ವವ್ಯಾಪಿ ರೋಗ ಕೋವಿಡ್​-19 ಜಗತ್ತಿನಾದ್ಯಂತ ಹರಡಿದ್ದು ಚೀನಾದಿಂದಲೇ ಎಂಬುದು ಸರ್ವವಿಧಿತ. ಆದರೆ, ಚೀನಾದಲ್ಲಿ ಇದು ಹರಡಿದ್ದು ಹೇಗೆ ಎಂಬ ಪ್ರಶ್ನೆ ಆರಂಭದಿಂದಲೂ ಎಲ್ಲರನ್ನು ಕಾಡುತ್ತಿದೆ. ಇದಕ್ಕೆ ಹಲವು ಥಿಯರಿಗಳು ಕೂಡ ಹುಟ್ಟಿಕೊಂಡಿವೆ.

    ಚೀನಾದ ವುಹಾನ್​ ಕರೊನಾದ ಜನ್ಮಸ್ಥಾನ ಹಾಗಂತಾ ಚೀನಾ ಸರ್ಕಾರ ಕೂಡ ಒಪ್ಪಿಕೊಂಡಿದೆ. ಇಲ್ಲಿಯೇ ಮೊದಲು ಕಾಣಿಸಿಕೊಂಡ ಕರೊನಾ ವೈರಸ್​ ಇತರೆಡೆಗಳಿಗೆ ಹಬ್ಬಿತು. ವುಹಾನ್​ನಲ್ಲಿ ವನ್ಯಜೀವಿಗಳನ್ನು ಜೀವಂತವಾಗಿಟ್ಟು ಮಾರಾಟ ಮಾಡುವ, ಗ್ರಾಹಕರು ಕೇಳಿದಾಗ ಸ್ಥಳದಲ್ಲಿಯೇ ಅವನ್ನು ಕತ್ತರಿಸಿ ನೀಡುವ ಬಹುದೊಡ್ಡ ಮಾರುಕಟ್ಟೆ ಇದೆ. ಇದನ್ನು ವೆಟ್​ ಮಾರ್ಕೆಟ್​ ಎಂದೂ ಕರೆಯಲಾಗುತ್ತದೆ. ಇಲ್ಲಿ ಬಾವಲಿ, ಚಿಪ್ಪುಹಂದಿ, ಹಂದಿ, ಇಲಿ, ಕಪ್ಪೆ, ಮೊಸಳೆ, ವಿವಿಧ ಜಾತಿಯ ಮೀನುಗಳು, ಅಪರೂಪದ ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತದೆ. ಇಲ್ಲಿನ ಬಾವಲಿಗಳ ಮೂಲಕವೇ ಕರೊನಾ ವೈರಸ್​ ಹಬ್ಬಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಏಕೆಂದರೆ, ಸಾಮಾನ್ಯವಾಗಿ ಬಾವಲಿಗಳ ದೇಹದಲ್ಲಿ ಕರೊನಾ ವೈರಸ್​ ಅಡಗಿರುತ್ತದೆ. ಇವುಗಳ ಮೂಲಕವೇ ಮನುಷ್ಯರಿಗೆ ಹರಡಿದೆ ಎಂಬ ವಾದ ಮಂಡಿಸಲಾಗಿತ್ತು.

    ಆದರೆ, ಈಗ ಬರುತ್ತಿರುವ ವರದಿಗಳೆಂದರೆ ವುಹಾನ್​ನಲ್ಲಿರುವ ವೈರಲ್​ ಇನ್​ಸ್ಟಿಟ್ಯೂಟ್​ನಿಂದಲೇ ಕರೊನಾ ವೈರಸ್​ ಸೋರಿಕೆಯಾಗಿದೆ ಎಂಬುದು. ಇಲ್ಲಿ ಬಾವಲಿಗಳಲ್ಲಿರುವ ಕರೊನಾ ವೈರಸ್​ ಬಗ್ಗೆ ಅಧ್ಯಯನ ನಡೆಸಲಾಗುತ್ತಿತ್ತಿದೆ. ಇಲ್ಲಿದ್ದ ಸಂಶೋಧನಾರ್ಥಿಯೊಬ್ಬಳು ಸೋಂಕಿಗೆ ಒಳಗಾಗಿದ್ದಾಳೆ. ಬಳಿಕ ಅದು, ಆಕೆಯ ಗೆಳೆಯನಿಗೂ ವ್ಯಾಪಿಸಿದೆ. ಆತ ವುಹಾನ್​ ವೆಟ್​ ಮಾರ್ಕೆಟ್​ಗೆ ಭೇಟಿ ನೀಡಿದ್ದ. ಅಲ್ಲಿಂದ ಇದು ಸಾರ್ವತ್ರಿವಾಗಿ ಹಬ್ಬಲು ಶುರುವಾಗಿದೆ ಎಂದು ಅಂತಾರಾಷ್ಟ್ರೀಯ ಮಧ್ಯಮಗಳು ವರದಿ ಮಾಡುತ್ತಿವೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಕೂಡ ಇದನ್ನು ಸಮರ್ಥಿಸಿದ್ದಾರೆ. ಇದನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

    ಅಮೆರಿಕ ಮೊದಲೇ ಎಚ್ಚರಿಕೆ ನೀಡಿತ್ತು: ಕರೊನಾ ಸೋಂಕಿನ ಬಗ್ಗೆ ಅಧ್ಯಯನ ನಡೆಸುತ್ತಿರುವ ವುಹಾನ್​ ಸಂಶೋಧನಾ ಸಂಸ್ಥೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳಿಲ್ಲ ಎಂದು 2018ರಲ್ಲಿಯೇ ಅಮೆರಿಕ ಎಚ್ಚರಿಸಿತ್ತು. ಇಲ್ಲಿಂದ ಕೆಲವೇ ಕಿ.ಮೀ ದೂರದಲ್ಲಿ ವುಹಾನ್​ ಮಾರುಕಟ್ಟೆಯಿದೆ. ತನ್ನಿಂದಾದ ತಪ್ಪುಗಳನ್ನು ಮುಚ್ಚಿಕೊಳ್ಳಲು ಚೀನಾ ಸರ್ಕಾರ ಯತ್ನಿಸುತ್ತಿದೆ. ವೆಟ್​ ಮಾರ್ಕೆಟ್​ ಮೇಲೆ ದೋಷಾರೋಪಿಸಿದೆ ಎಂದು ಸ್ಥಳೀಯ ವರ್ತಕರೇ ಹೇಳುತ್ತಿದ್ದಾರೆ.

    ಅಂತಾರಾಷ್ಟ್ರಿಯ ಮಟ್ಟದಲ್ಲಿ ಹಲವು ತನಿಖೆಗಳು ವುಹಾನ್ ಪ್ರಯೋಗಾಲಯದಿಂದಲೇ ಕರೊನಾ ವೈರಸ್​ ಸೋರಿಕೆಯಾಗಿದೆ ಎಂಬುದನ್ನು ತೋರಿಸುತ್ತಿವೆ. ಒಟ್ಟಿನಲ್ಲಿ ಚೀನಾ ಮಾಡಿದ ಯಡವಟ್ಟು ಇಡೀ ವಿಶ್ವಕ್ಕೆ ಭಾರಿ ದುಬಾರಿಯಾಗಿ ಪರಿಣಮಿಸಿದೆ.

    ಪಂಜಾಬ್​ನ ‘ತಬ್ಲಿಘಿ ಜಮಾತ್​’ ಎಂದು ಕರೆದಿದ್ದು ಯಾವ ವಿಶ್ವವಿದ್ಯಾಲಯವನ್ನು? ಆ ವಿವಿ ಮಾಡಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts