More

    ಲಸಿಕೆ ಪಡೆಯುವ 95 ಸಾವಿರ ಮಂದಿಯ ಪಟ್ಟಿ ಸಿದ್ಧ : ವೃದ್ಧರು, ಕೋಮಾರ್ಬಿಡ್‌ಗಳಿಗೆ ಹೆಚ್ಚುವರಿ ಲಸಿಕೆ

    ಬೆಂಗಳೂರು : ಮೊದಲ ಹಂತದ ಕೋವಿಡ್ ಲಸಿಕೆ ಪಡೆಯುವ 95 ಸಾವಿರ ಕರೊನಾ ಯೋಧರ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಅವಧಿಯನ್ನು ನ.30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

    ದೇಶದಲ್ಲಿ ಆಂತರಿಕವಾಗಿ ಎರಡು ಹಾಗೂ ಜಾಗತಿಕವಾಗಿ ಏಳು ಸೇರಿ ಒಟ್ಟು 9 ಕೋವಿಡ್ ಲಸಿಕೆಗಳ ಸಂಶೋಧನೆ ಅಂತಿಮ ಹಂತದಲ್ಲಿದ್ದು, ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಶೀಘ್ರದಲ್ಲಿ ಸೋಂಕಿಗೆ ಲಸಿಕೆ ಬರುವ ಸಾಧ್ಯತೆಯಿದ್ದು, ಮೊದಲ ಹಂತದಲ್ಲಿ ಕರೊನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವ 95 ಸಾವಿರ ವಾರಿಯರ್‌ಗಳ ಹೆೆಸರು, ವೃತ್ತಿ, ವಿಳಾಸದ ಮಾಹಿತಿ ಸಂಗ್ರಹಿಸಲಾಗಿದೆ. ಈಗ ಪಟ್ಟಿ ಕಳುಹಿಸಲು ನ.30ರವರೆಗೆ ಅವಕಾಶವಿದ್ದು ಮತ್ತೊಮ್ಮೆ ಪಟ್ಟಿ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ವಿಜಯವಾಣಿಗೆ ತಿಳಿಸಿದ್ದಾರೆ.

    ಲಸಿಕೆ ಹಾಕುವವರ ನಿಯೋಜನೆ: ಲಸಿಕೆ ಸಂಗ್ರಹಕ್ಕೆ ಈಗಾಗಲೇ ದಾಸಪ್ಪ ಆಸ್ಪತ್ರೆ ಗುರುತಿಸಿ ರೆಫ್ರಿಜಿರೇಟರ್, ಕೋಲ್ಡ್ ಸ್ಟೋರೇಜ್ ಸೇರಿ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್ಸ್, ಅಂಗನವಾಡಿ ಮತ್ತು ಆಶಾ ಕಾರ್ಕರ್ತರು, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಲಸಿಕೆಯನ್ನು ಪಲ್ಸ್ ಪೊಲಿಯೋ ಮಾದರಿಯಲ್ಲಿ ಶಿಥಿಲೀಕರಣದ ಬಾಕ್ಸ್ ಸಿದ್ಧಪಡಿಸಿ ಸರಬರಾಜು ಮಾಡಲಾಗುವುದು. ಜತೆಗೆ, ಲಸಿಕೆ ಹಾಕುವವರನ್ನು ಕೂಡ ಗುರುತಿಸಲಾಗಿದೆ. ಲಸಿಕೆ ಬಂದ ನಂತರ ಸಮಪರ್ಕಕ ವಿತರಣೆಗೆ ಪಾಲಿಕೆ ಸಿದ್ಧವಾಗುತ್ತಿದೆ ಎಂದು ಮಾಹಿತಿ ನಿಡಿದರು.

    ದೀರ್ಘಕಾಲಿಕ ರೋಗಿಗಳಿಗೆ ಹೆಚ್ಚುವರಿ ಲಸಿಕೆ: ಮೊಲದ ಹಂತದಲ್ಲಿ ಕೇಂದ್ರ ಸರ್ಕಾರ 95 ಸಾವಿರ ಕೋವಿಡ್ ಲಸಿಕೆ ನೀಡುವುದಾಗಿ ತಿಳಿಸಿದೆ. ಒಂದು ವೇಳೆ ಹೆಚ್ಚುವರಿ ಲಸಿಕೆಗಳನ್ನು ಸರಬರಾಜು ಮಾಡಿದಲ್ಲಿ ದೀರ್ಘಕಾಲಿಕವಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ (ಕೋಮಾರ್ಬಿಡ್) ಮತ್ತು ವೃದ್ಧರಿಗೆ ಕರೊನಾ ಲಸಿಕೆ ಹಾಕಲಾಗುತ್ತದೆ. ಇಲ್ಲವಾದಲ್ಲಿ 2ನೇ ಹಂತದಲ್ಲಿ ಅವರಿಗೆ ಲಸಿಕೆ ನೀಡಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

    ಪತ್ರಕರ್ತರಿಗೆ ಲಸಿಕೆ ನೀಡಲು ಪ್ರಸ್ತಾವನೆ : ಮುದ್ರಣ ಮತ್ತು ದೃಶ್ಯ ಮಾಧ್ಯಮದ ವರದಿಗಾರರು ಕರೊನಾ ವಾರಿಯರ್ಸ್‌ ಆಗಿದ್ದು, ಅವರಿಗೂ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕೇಂದ್ರ ಸರ್ಕಾರ ನೀಡಿದ ಸೂಚನೆಗೆ ಅನುಗುಣವಾಗಿ ಪಟ್ಟಿಯನ್ನು ಸಿದ್ಧಪಡಿಸಿ ಕಳಿಸಲಾಗುತ್ತದೆ. ಪತ್ರಕರ್ತರಿಗೂ ಲಸಿಕೆ ನೀಡುವ ಬಗ್ಗೆ ನಾವು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು ಚಿಂತನೆ ನಡೆಸುತ್ತೇವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts