More

    ಕಲಾಪದಲ್ಲಿ ಪಾಲ್ಗೊಳ್ಳುವ ಎಲ್ಲ ಸಂಸದರಿಗೂ ಕೋವಿಡ್ ಟೆಸ್ಟ್​ ಕಡ್ಡಾಯ; ಸೆ.14ರಿಂದ ಅ.1ರ ವರೆಗೆ ಅಧಿವೇಶನ

    ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳುವ ಲೋಕಸಭಾ ಸದಸ್ಯರು ಕೋವಿಡ್​ ಪರೀಕ್ಷೆಗೆ ಒಳಗೊಳ್ಳುವುದು ಕಡ್ಡಾಯವಾಗಿದೆ ಎಂದು ಸ್ಪೀಕರ್​ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ.

    ಕಲಾಪಕ್ಕಾಗಿ ಸಂಸತ್​ ಭವನದಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದೆ. ಎಲ್ಲ ಸಂದರಿಗೂ ಆರ್​ಟಿ-ಪಿಸಿಆರ್​ ಪರೀಕ್ಷೆ ಮಾಡಿಸಲಾಗವುದು. ಇದರ ಫಲಿತಾಂಶ ಗೊತ್ತಾಗಲು 24- 48 ಗಂಟೆ ಬೇಕಾಗಲಿದೆ ಎಂದು ಸ್ಪೀಕರ್​ ಮಾಹಿತಿ ನೀಡಿದರು. ಸಂಸದರು ಮಾತ್ರವಲ್ಲದೇ, ಅಧಿವೇಶನದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ವರದಿಗಾರರು ಕೂಡ ಕೋವಿಡ್​ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

    ಇದನ್ನೂ ಓದಿ; ಹೀಗಿರಲಿದೆ ಲಾಕ್​ಡೌನ್​ ನಂತರದ ನಮ್ಮ ಮೆಟ್ರೋ ರೈಲು ಸವಾರಿ? 300-350 ಜನರಿಗಷ್ಟೇ ಅವಕಾಶ 

    ಸೆ.14ರಂದು ಸಂಸತ್​ ಕಲಾಪ ಆರಂಭವಾಗಲಿದ್ದು, ಅಕ್ಟೋಬರ್​ 1ರವರೆಗೆ ಮುಂದುವರಿಯಲಿದೆ. ರಾಜ್ಯಸಭೆ ಹಾಗೂ ಲೋಕಸಭೆಗಳು ಪ್ರತ್ಯೇಕ ಪಾಳಿಗಳಲ್ಲಿ ಕಲಾಪ ನಡೆಸಲಿವೆ. ಲೋಕಸಭೆ ಕಲಾಪ ಬೆಳಗ್ಗೆ 9ಕ್ಕೆ ಆರಂಭವಾದರೆ, ರಾಜ್ಯಸಭೆ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. ಚರ್ಚೆಗೆ ಹೆಚ್ಚಿನ ಕಾಲಾವಕಾಶ ಬೇಕಾಗಿದ್ದರೆ, ವಾರಾಂತ್ಯದಲ್ಲೂ ಮುಂದುವರಿಯುವ ಸಾಧ್ಯತೆಗಳಿವೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಕೋವಿಡ್​ ತಪಾಸಣೆಗಾಗಿ ಲೋಕಸಭೆಯಲ್ಲಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ಈ ಅಧಿವೇಶನದಲ್ಲಿ ಒಟ್ಟು 11 ವಿಧೇಯಕಗಳು ಮಂಡನೆಯಾಗಲಿವೆ ಎಂದು ಹೇಳಲಾಗಿದೆ.

    ಕೋವಿಡ್​ಗಷ್ಟೇ ಅಲ್ಲ, ಎಲ್ಲ ಬಗೆ ಕರೊನಾಗೂ ಇದು ರಾಮಬಾಣ; ಕೇಂಬ್ರಿಡ್ಜ್​ ವಿವಿಯಿಂದ ಸಜ್ಜಾಗ್ತಿದೆ ಲಸಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts