More

    ದೇಶದಲ್ಲಿ ಒಂದೇ ದಿನ 97500ಕ್ಕೂ ಹೆಚ್ಚು ಕರೊನಾ ಕೇಸ್ ದಾಖಲು!

    ನವದೆಹಲಿ: ಕರೊನಾ ಸೋಂಕಿನ ಪ್ರಸರಣ ವೇಗ ವಿಶ್ವದ ಹಲವು ದೇಶಗಳಲ್ಲಿ ತಗ್ಗಿದ್ದರೂ ಭಾರತದಲ್ಲಿ ಮಾತ್ರ ವೇಗವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಶುಕ್ರವಾರ ಒಂದೇ ದಿನ ದೇಶದಲ್ಲಿ 97,500ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಇದು ಈವರೆಗಿನ ಏಕದಿನ ಏರಿಕೆಯಲ್ಲಿ ಗರಿಷ್ಠ ದಾಖಲೆಯಾಗಿದೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 46.6 ಲಕ್ಷಕ್ಕೂ ಹೆಚ್ಚಾಗಿದೆ. 24 ಗಂಟೆಗಳಲ್ಲಿ 1,201 ಸೋಂಕಿತರು ಮತರಾಗಿದ್ದು, ಒಟ್ಟಾರೆ ಮತರ ಸಂಖ್ಯೆ 77,500ರ ಗಡಿ ದಾಟಿದೆ.

    ಕೊವಾಕ್ಸಿನ್‌ನಿಂದ ಪ್ರಾಣಿಗಳಿಗೆ ರೋಗನಿರೋಧಕ ಶಕ್ತಿ

    ಭಾರತ್ ಬಯೋಟೆಕ್ ಸಂಸ್ಥೆ ಮತ್ತು ಐಸಿಎಂಆರ್ ಜಂಟಿಯಾಗಿ ತಯಾರಿಸಿರುವ ಕರೊನಾ ಔಷಧ ಕೊವಾಕ್ಸಿನ್ ಪ್ರಾಣಿಗಳ ಮೇಲೆ ಉತ್ತಮ ಲಿತಾಂಶ ತೋರಿದೆ. 20 ಮಂಗಗಳ ಮೇಲೆ ಔಷಧ ಪ್ರಯೋಗ ಮಾಡಲಾಗಿದೆ. ನಾಲ್ಕು ಗುಂಪು ಮಾಡಿದ್ದು, ಅದರಲ್ಲಿ ಮೂರು ಗುಂಪಿನ ಮೇಲೆ ಬೇರೆ ಬೇರೆ ಔಷಧವನ್ನು ಪ್ರಯೋಗಿಸಲಾಗಿದೆ. 14 ದಿನಗಳ ನಂತರ ಮತ್ತೊಮ್ಮೆ ಔಷಧ ನೀಡಲಾಗಿದೆ. ಕೊವಾಕ್ಸಿನ್ ಪಡೆದ ಮಂಗಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಯಾವ ಮಂಗವೂ ನ್ಯುಮೋನಿಯಾದಂಥ ಸಮಸ್ಯೆಗೆ ಒಳಗಾಗಿಲ್ಲ. ಯಾವುದೇ ದುಷ್ಪರಿಣಾಮ ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ. ಸದ್ಯ ಈ ಔಷಧವನ್ನು ವಿವಿಧ ರಾಜ್ಯಗಳ 12 ಕೇಂದ್ರಗಳಲ್ಲಿ ಮನುಷ್ಯರ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ಇಮ್ಯುನೋಲಜಿ (ಎನ್‌ಐಐ) ತಯಾರಿಸಿರುವ ಕರೊನಾ ಔಷಧವನ್ನು ಇಲಿ ಮೇಲೆ ಪ್ರಯೋಗಿಸಲಾಗಿದೆ. ಈ ಪ್ರಯೋಗದಲ್ಲಿ ಔಷಧ ಉತ್ತಮ ಲಿತಾಂಶ ನೀಡಿದೆ ಎಂದು ಎನ್‌ಐಐನ ನಿರ್ದೇಶಕರಾದ ಅಮೂಲ್ಯ ಪಾಂಡಾ ತಿಳಿಸಿದ್ದಾರೆ. ಪ್ರಯೋಗಕ್ಕೆ ಒಳಗಾದ ಇಲಿಯಲ್ಲಿ ಉತ್ತಮ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ಎನ್‌ಐಐ ಕ್ಯಾನ್ಸರ್‌ಗೂ ಔಷಧವನ್ನು ಕಂಡುಹಿಡಿದಿದ್ದು, ಅದು ಈಗ ಮೂರನೇ ಹಂತದ ಪ್ರಯೋಗದಲ್ಲಿದೆ ಎಂದು ತಿಳಿಸಲಾಗಿದೆ.

    ವಿಶ್ವದಲ್ಲಿ ಕರೊನಾ ಸೋಂಕಿತ ದೇಶಗಳ ಪಟ್ಟಿಯಲ್ಲಿ 66 ಲಕ್ಷ ಪ್ರಕರಣಗಳೊಂದಿಗೆ ಅಮೆರಿಕ ಮೊದಲನೇ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನ ಮತ್ತು ಬ್ರೆಜಿಲ್ ಮೂರನೇ ಸ್ಥಾನದಲ್ಲಿದೆ. ಸಾವಿನ ಪಟ್ಟಿಯಲ್ಲಿ 1.97 ಲಕ್ಷ ಮತರೊಂದಿಗೆ ಅಮೆರಿಕ ಮೊದಲನೇ ಸ್ಥಾನ, 1.30 ಲಕ್ಷ ಮತರೊಂದಿಗೆ ಬ್ರೆಜಿಲ್ ಎರಡನೇ ಸ್ಥಾನ ಮತ್ತು ಭಾರತ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.
    ಇದನ್ನೂ ಓದಿ: ವೇದಿಕೆ ಮೇಲೆ ಸಚಿವರ ಕೂದಲು ಕತ್ತರಿಸಿದ…60,000 ರೂ.ಪಡೆದ !

    ದೇಶದಲ್ಲಿ ಸೋಂಕಿನ ಜತೆಗೆ ಗುಣಮುಖ ಪ್ರಮಾಣವೂ ಹೆಚ್ಚಳವಾಗುತ್ತಿದೆ. ಒಂದೇ ದಿನದಲ್ಲಿ 81,500 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಅದರಲ್ಲಿ ಶೇಕಡ 60 ಪಾಲನ್ನು ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶ- ಈ ಐದು ರಾಜ್ಯಗಳು ಹೊಂದಿವೆ. ಇದುವರೆಗೆ 36 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದು, 9.58 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಗುಣಮುಖ ಪ್ರಮಾಣ ಶೇ.77.77ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸೋಂಕಿತರಲ್ಲಿ ನಾಲ್ಕನೇ ಮೂರು ಭಾಗದಷ್ಟು ಜನರು ಗುಣಮುಖರಾಗಿದ್ದಾರೆ. ಮರಣ ಪ್ರಮಾಣ ಶೇ.1.6ಕ್ಕೆ ಇಳಿಕೆಯಾಗಿದೆ. ಬೇರೆಲ್ಲ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ ಕಡಿಮೆ ಮರಣ ಪ್ರಮಾಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
    ಸಕ್ರಿಯ ಪ್ರಕರಣಗಳ ಶೇ.70 ಪಾಲನ್ನು ಕೇವಲ ಒಂಬತ್ತು ರಾಜ್ಯಗಳು ಹೊಂದಿವೆ. ಮತರ ಸಂಖ್ಯೆಯಲ್ಲೂ ಶೇ.69 ಪಾಲನ್ನು ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ದೆಹಲಿ ಮತ್ತು ಆಂಧ್ರಪ್ರದೇಶ ಹಂಚಿಕೊಂಡಿವೆ.

    ಇದನ್ನೂ ಓದಿ: ಸಿರಗುಪ್ಪದಲ್ಲಿ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮದ್ಯದಂಗಡಿ ಮಚ್ಚಿಸಿದ ಅಬಕಾರಿ ಇಲಾಖೆ

    ಈ ಮಧ್ಯೆ, ಸೇರಂ ಇನ್‌ಸ್ಟಿಟ್ಯೂಟ್ ನಡೆಸುತ್ತಿರುವ ಕರೊನಾ ಔಷಧ ಪ್ರಯೋಗಕ್ಕೆ ಸ್ವಯಂಸೇವಕರ ನೇಮಕಾತಿಯನ್ನು ಸ್ಥಗಿತಗೊಳಿಸುವಂತೆ ಭಾರತದ ಔಷಧ ನಿರ್ವಹಣಾ ಮಂಡಳಿ (ಡಿಜಿಸಿಐ) ಆದೇಶಿಸಿದೆ. ಆಕ್ಸ್‌ರ್ಡ್ ವಿಶ್ವವಿದ್ಯಾಲಯ ತಯಾರಿಸಿರುವ ಕೋವಿಶೀಲ್ಡ್ ಔಷಧದ ಪ್ರಯೋಗಕ್ಕೆ ಒಳಗಾದ ವ್ಯಕ್ತಿಯೊಬ್ಬರ ಮೇಲೆ ಔಷಧ ದುಷ್ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಪ್ರಯೋಗವನ್ನು ಸ್ಥಗಿತಗೊಳಿಸವಂತೆ ಹೇಳಲಾಗಿದೆ. ಆಕ್ಸ್‌ರ್ಡ್ ವಿವಿ ಮತ್ತು ಅಸಾಜೆನೆಕಾ ಸಂಸ್ಥೆ ತಯಾರಿಸಿರುವ ಕೋವಿಶೀಲ್ಡ್ ಔಷಧವನ್ನು ಭಾರತದಲ್ಲಿ ಎಸ್‌ಐಐ ತಯಾರಿಸುತ್ತಿದ್ದು, ಪ್ರಯೋಗ ನಡೆಸುತ್ತಿದೆ. ದೇಶದಲ್ಲಿ 2ನೇ ಹಂತದ ಪ್ರಯೋಗ ನಡೆಸಲಾಗುತ್ತಿದೆ. ಈ ಮಧ್ಯೆ ಬ್ರಿಟನ್‌ನಲ್ಲಿ ಔಷಧ ಪ್ರಯೋಗಕ್ಕೆ ಒಳಗಾದವರಲ್ಲಿ ತೊಂದರೆ ಕಾಣಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಭಾರತದಲ್ಲಿ ಔಷಧ ಪ್ರಯೋಗಕ್ಕೆ ಒಳಗಾಗಿರುವವರ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಎಸ್‌ಐಐಗೆ ಡಿಜಿಸಿಐ ಆದೇಶಿಸಿದೆ. ಮೂರನೇ ಹಂತದ ಪ್ರಯೋಗ ಮುಂದಿನ ವಾರದಲ್ಲಿ ಆರಂಭವಾಗಬೇಕಿದ್ದು, ಇದೀಗ ಅದಕ್ಕೂ ತಡೆ ನೀಡಲಾಗಿದೆ. (ಏಜೆನ್ಸೀಸ್)

    ಹೆಮ್ತಾಬಾದ್ ಬಿಜೆಪಿ ಶಾಸಕನ ಡೆತ್ ಕೇಸ್​ ಚಾರ್ಜ್​ಶೀಟ್ ಸಲ್ಲಿಸಿದ ಸಿಐಡಿ; ಸಿಬಿಐ ತನಿಖೆಗೆ ಆಗ್ರಹಿಸಿದೆ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts