More

    ಕೋವಿಡ್-19: ಕ್ಯಾಂಪಸ್ ತೊರೆದು ಊರು ಸೇರಿ ಎಂದ ಜೆಎನ್​​ಯು

    ನವದೆಹಲಿ: ರೈಲ್ವೆ ಸೇವೆ ಪುನರಾರಂಭಗೊಂಡಿದ್ದು, ಈಗ ತಮ್ಮ ಊರುಗಳಿಗೆ ಹೋಗಿ, ವಿಶ್ವವಿದ್ಯಾಲಯ ಪುನರಾರಂಭಗೊಂಡ ನಂತರ ಮರಳಿ ಬರಬೇಕೆಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಖಡಕ್ಕಾಗಿ ಹೇಳಿದೆ.
    ಜೆಎನ್‌ಯು ವಸತಿ ಕ್ಯಾಂಪಸ್ ಆಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಮಾರ್ಚ್​​​ನಲ್ಲಿ ಹಾಸ್ಟೆಲ್ ಬಿಡಲು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹೇಳಿದ ನಂತರ ಕ್ಯಾಂಪಸ್​​ ತೊರೆದು ದೆಹಲಿಯಲ್ಲೇ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಂಡಿದ್ದರು. ಅಂತಹ ಅನೇಕ ವಿದ್ಯಾರ್ಥಿಗಳು ಮುಂದಿನ ಬಹು ದಿನಗಳವರೆಗೆ ಈ ತಾತ್ಕಾಲಿಕ ವಸತಿ ವ್ಯವಸ್ಥೆ ತಮಗೆ ಅಸಾಧ್ಯವೆಂದು ಮತ್ತೆ ಹಾಸ್ಟೆಲ್​​ಗೆ ಹಿಂದಿರುಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ: ಬಂತು ನೋಡಿ ಮದುವೆ ವಸ್ತ್ರಾಭರಣಗಳಿಗೆ ತಕ್ಕ ಡಿಸೈನರ್​ ಮಾಸ್ಕ್​… !!!

    ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಮೊದಲೇ ಹಾಸ್ಟೆಲ್​​ಗಳಲ್ಲಿ ಉಳಿಯಲು ವಿನಂತಿಸಿಕೊಂಡಿದ್ದರು. ಆದರೆ, ಭಾರತೀಯ ರೈಲ್ವೆ ವಿಶೇಷ ರೈಲು ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಿದೆ. ಜೂನ್ 1 ರಿಂದ 200ಕ್ಕೂ ಹೆಚ್ಚು ರೈಲು ವ್ಯವಸ್ಥೆಯಾಗಲಿದೆ. ಅಂತಾರಾಜ್ಯ ಬಸ್ ಮತ್ತು ಟ್ಯಾಕ್ಸಿ ಸೇವೆಗಳನ್ನು ರಾಜ್ಯ ಸರ್ಕಾರಗಳು ಪ್ರಾರಂಭಿಸಿವೆ. ಇದಲ್ಲದೆ, ಕೆಲವು ರಾಜ್ಯ ಸರ್ಕಾರಗಳು ಆಯಾ ರಾಜ್ಯಗಳ ವಿದ್ಯಾರ್ಥಿಗಳ ವಾಪಸಾತಿಗೆ ಸಾರಿಗೆ ವ್ಯವಸ್ಥೆಗಳನ್ನು ಮಾಡುತ್ತಿವೆ. ಹೀಗಾಗಿ ಕ್ಯಾಂಪಸ್​ ಖಾಲಿ ಮಾಡಿ ವಿದ್ಯಾರ್ಥಿಗಳು ತಮ್ಮೂರಿಗೆ ತೆರಳಬೇಕೆಂದು ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರು ಸೋಮವಾರ ಪ್ರಕಟಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
    ಇದಲ್ಲದೆ, ಕಾಲಕಾಲಕ್ಕೆ ಹೊರಡಿಸಲಾದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ದೆಹಲಿ ಸರ್ಕಾರದ ಮಾರ್ಗಸೂಚಿಗಳ ಅನುಸಾರ ಸದ್ಯ ಲಾಕ್​ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಜೂನ್ 25 ರಂದು ಅಥವಾ ಅದರ ನಂತರ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಮರಳಬಹುದು ಎಂದು ವಿವಿ ಹೇಳಿದೆ.

    ಇದನ್ನೂ ಓದಿ:  ಹಿಟ್ಲರ್​​ಗೆ​ ಸೇರಿದ್ದೆನ್ನಲಾದ ಮೊಸಳೆ ವಿಧಿವಶ

    ದೆಹಲಿಯಲ್ಲಿ ಕೋವಿಡ್- 19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚುತ್ತಿದ್ದು,ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಹಾಸ್ಟೆಲ್‌ಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳು ಸದ್ಯ ತಮ್ಮ ಊರಿಗೆ ತೆರಳಿ ಸುರಕ್ಷಿತವಾಗಿರುವುದು ಒಳ್ಳೆಯದು ಎಂದು ಸಲಹೆ ನೀಡಲಾಗಿದೆ.

    ಕಾಳಿಂಗ ಸರ್ಪಕ್ಕೆ ನಾಡಿನಲ್ಲಿ ನಡೆಯಿತು ತಣ್ಣೀರ ಮಜ್ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts