More

    ಕೋವಿಡ್ ಐಸಿಯು ಪ್ರಕರಣ 237ಕ್ಕೆ ಇಳಿಕೆ: 1,039 ಹೊಸ ಸೋಂಕಿತರು, 10 ಮಂದಿ ಸಾವು

    ಬೆಂಗಳೂರು : ರಾಜಧಾನಿಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಸಂಖ್ಯೆ ಭಾನುವಾರ 237ಕ್ಕೆ ಇಳಿಮುಖವಾಗಿದೆ. ಈ ಮೂಲಕ ಸಾವಿನ ಪ್ರಮಾಣ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗುತ್ತಿದೆ.

    ನಗರದಲ್ಲಿ ಕಳೆದ ಒಂದು ತಿಂಗಳಿಂದಲೂ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಆಗಿದ್ದರೂ, ಐಸಿಯು ಚಿಕಿತ್ಸೆ ಪಡೆಯುವವರ ಸಂಖ್ಯೆ ಮಾತ್ರ 400ಕ್ಕಿಂತ ಅಧಿಕವಾಗಿತ್ತು. ಕಳೆದ 10 ದಿನಗಳಿಂದೀಚೆಗೆ ಸಕ್ರಿಯ ಸೋಂಕಿತರ ಸಂಖ್ಯೆ 18,172ಕ್ಕೆ ಇಳಿಕೆಯಾಗುವ ಮೂಲಕ ಐಸಿಯು ಚಿಕಿತ್ಸೆಗೆ ದಾಖಲಾಗುವವರ ಪ್ರಮಾಣ ಕಡಿಮೆಯಾಗಿದೆ.

    ಭಾನುವಾರ 1,039 ಹೊಸ ಸೋಂಕಿತರು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,63,665ಕ್ಕೆ ಏರಿಕೆಯಾಗಿದೆ. 669 ಮಂದಿ ಸೋಂಕಮುಕ್ತರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 3,41,424ಕ್ಕೆ ತಲುಪಿದೆ. ಮತ್ತೊಂದೆಡೆ 60 ವರ್ಷ ಮೇಲ್ಪಟ್ಟ 6 ವೃದ್ಧರು ಸೇರಿ 10 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,068ಕ್ಕೆ ಏರಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts