More

    ಕೋವಿಡ್ 19 ಪರಿಣಾಮ: ಹಜ್ ಯಾತ್ರೆ ಅಂದು- ಇಂದು

    ನವದೆಹಲಿ: ಕೋವಿಡ್ 19 ಸಂಕಷ್ಟದ ಕಾರಣ ಜಗತ್ತನ ನಿತ್ಯ ಬದುಕಿನಲ್ಲಿ ಹಲವಾರು ಬದಲಾವಣೆಗಳಾಗಿವೆ. ಹಜ್ ಯಾತ್ರೆ ಬದಲಾದ ಪರಿಗೆ ಮೇಲಿನ ಎರಡು ಚಿತ್ರಗಳೇ ಸಾಕ್ಷಿ. ಕೋವಿಡ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ಸೌದಿ ಅರೇಬಿಯಾ ಈ ಸಲ ಯಾತ್ರಿಗಳ ಸಂಖ್ಯೆಗೂ ಮಿತಿ ಹೇರಿದೆ. ಜುಲೈ 28ರಂದು ಆರಂಭವಾದ ಯಾತ್ರೆ ಆಗಸ್ಟ್ 2ರಂದು ಕೊನೆಗೊಳ್ಳಲಿದೆ.

    ಮುಸ್ಲಿಮರ ಪವಿತ್ರ ಶ್ರದ್ಧಾ ಕೇಂದ್ರವಾದ ಮೆಕ್ಕಾದ ಕಬ್ಬಾದ ಸುತ್ತ ಯಾತ್ರಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರದಕ್ಷಿಣೆ ಬರುತ್ತಿರುವ ದೃಶ್ಯವಿರುವ ಫೋಟೊ ಇಂದು ಟ್ವಿಟರ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಗಮನಸೆಳೆದಿವೆ.

    ಇದನ್ನೂ ಓದಿ: ಸೋನಿಯಾ ಗಾಂಧಿ ಆರೋಗ್ಯ ಸ್ಥಿತಿ ತೃಪ್ತಿದಾಯಕ

    ಅಲ್ ಝರೀರಾ ವರದಿ ಪ್ರಕಾರ ಈ ಸಲ ಮೆಕ್ಕಾ ಮತ್ತು ಮದೀನಾಕ್ಕೆ ಭೇಟಿ ನೀಡಿದವರ ಸಂಖ್ಯೆ 10,000. ಸಾಮಾನ್ಯವಾಗಿ ಈ ಅವಧಿಯಲ್ಲಿ ಮೆಕ್ಕಾ ಮತ್ತು ಮದೀನಾಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ 25 ಲಕ್ಷದ ಆಸುಪಾಸು ಇರುತ್ತದೆ. ಈ ಸಲ ಕಬ್ಬಾ ಸಮೀಪ ಹೋಗುವುದಕ್ಕೆ 50 ಯಾತ್ರಿಕರ ಪುಟ್ಟ ಪುಟ್ಟ ಗುಂಪುಗಳನ್ನು ಮಾತ್ರ ಬಿಡುತ್ತಿದ್ದು, ಉಳಿದಂತೆ ಯಾತ್ರಿಕರ ಚಲನವಲನದ ಮೇಲೆ ಸರ್ಕಾರ ಕಣ್ಗಾವಲು ಇರಿಸಿದೆ. ಆರೋಗ್ಯ ಸೇವಾ ಸಿಬ್ಬಂದಿ ಈ ಕರ್ತವ್ಯದಲ್ಲಿದ್ದಾರೆ. ದಿನವೂ ಶ್ರದ್ಧಾ ಕೇಂದ್ರವನ್ನು 10 ಸಲ ಸ್ವಚ್ಛಗೊಳಿಸಲಾಗುತ್ತಿದ್ದು, 50,000 ಲೀಟರ್ ಡಿಸ್​ಇನ್​ಫೆಕ್ಟಂಟ್ ಮತ್ತು 1,050 ಲೀಟರ್​ ಏರ್​ಫ್ರೆಶ್ನರ್ ಅನ್ನು ಬಳಸಲಾಗುತ್ತಿದೆ. (ಏಜೆನ್ಸೀಸ್)

    ಜಿರಾಫೆ ಅಂದ್ರೇನೇ ಎತ್ತರ- ಅದ್ರಲ್ಲೂ ಗಿನ್ನೆಸ್ ದಾಖಲೆ ಅಂದ್ರೆ ಇನ್ನೆಷ್ಟು ಎತ್ತರ ಇರಬಹುದು ಅದು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts