More

    ಆಗಸ್ಟ್​ 15ಕ್ಕೆ ಬರುವುದಿಲ್ಲ ಕೊವ್ಯಾಕ್ಸಿನ್​, ಅದಕ್ಕಾಗಿ 2021ರವರೆಗೆ ಕಾಯಿರಿ ಎಂದ ಕೇಂದ್ರ ಸರ್ಕಾರ

    ನವದೆಹಲಿ: ಕೋವಿಡ್​-19 ಪಿಡುಗಿನಿಂದ ಸ್ವಾತಂತ್ರ್ಯ ಕೊಡಿಸಲು ಆಗಸ್ಟ್​ 15ಕ್ಕೆ ಮಾರುಕಟ್ಟೆಗೆ ಕೊವ್ಯಾಕ್ಸಿನ್​ ರೋಗನಿರೋಧಕ ಚುಚ್ಚುಮದ್ದು ದಾಂಗುಡಿ ಇಡಲಿದೆ ಎಂದು ಕಾತರದಿಂದ ಕಾಯುತ್ತಿದ್ದ ದೇಶದ ಜನತೆ ಇಲ್ಲೊಂದು ನಿರಾಶದಾಯಕ ಸುದ್ದಿ ಇದೆ.

    ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಲಿಮಿಟೆಡ್​ನ ಕೊವ್ಯಾಕ್ಸಿನ್​ ರೋಗನಿರೋಧಕ ಚುಚ್ಚುಮದ್ದು ಆಗಸ್ಟ್​ 15ಕ್ಕೆ ಬಿಡುಗಡೆಯಾಗುವುದಿಲ್ಲ. ಇದಕ್ಕಾಗಿ 2021ರವರೆಗೆ ಕಾಯುವಂತೆ ಕೇಂದ್ರ ವಿಜ್ಞಾನ ಸಚಿವಾಲಯ ಭಾನುವಾರ ತಿಳಿಸಿದೆ.

    ಇದನ್ನೂ ಓದಿ: ಅಪ್ಪ-ಅಮ್ಮನಿಗೂ ಸೋಂಕು: 17 ದಿನದ ಕಂದನಿಗೆ ವೈದ್ಯರ ಕಣ್ಣೀರ ವಿದಾಯ!

    ಇದಕ್ಕೂ ಮುನ್ನ ಈಗಾಗಲೆ ಪ್ರಾಣಿಗಳ ಮೇಲಿನ ಪ್ರಯೋಗದಲ್ಲಿ ಕೊವ್ಯಾಕ್ಸಿನ್​ ರೋಗನಿರೋಧಕ ಚುಚ್ಚುಮದ್ದು ಕೋವಿಡ್​ ಚಿಕಿತ್ಸೆಗೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಆದ್ದರಿಂದ, ಮಾನವರ ಮೇಲೆ ಅದನ್ನು ಪ್ರಯೋಗಿಸಲು ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಲಿಮಿಟೆಡ್​ಗೆ ಅನುಮತಿ ನೀಡಲಾಗಿದೆ. ಪರೀಕ್ಷೆಗೆ ಎಲ್ಲ ರೀತಿಯಲ್ಲೂ ಸಹಕರಿಸಬೇಕು. ಇದನ್ನು ಆಗಸ್ಟ್​ 15ರ ಸ್ವಾತಂತ್ರ್ಯೋತ್ಸವದಂದು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ತಿಳಿಸಿತ್ತು.

    ಆದರೆ, ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಝೈಡಲ್​ ಕ್ಯಾಡಿಲಾ ಹೆಲ್ತ್​ಕೇರ್​ನ ಝೈಕೋವ್​-ಡಿ ಸೇರಿ ಒಟ್ಟು 140ಕ್ಕೂ ಹೆಚ್ಚು ಕರೊನಾ ರೋಗನಿರೋಧಕ ಚುಚ್ಚುಮದ್ದುಗಳ ಪರೀಕ್ಷೆಗಳು ವಿವಿಧ ಹಂತದಲ್ಲಿವೆ. ಆದರೆ ಇವು ಯಾವುವೂ 2021ಕ್ಕಿಂತ ಮೊದಲು ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇಲ್ಲ. ಪರಿಪೂರ್ಣ ಪರೀಕ್ಷೆ ಒಳಪಟ್ಟ ನಂತರವಷ್ಟೇ ಈ ರೋಗನಿರೋಧಕ ಚುಚ್ಚುಮದ್ದುಗಳು ಮಾರುಕಟ್ಟೆಗೆ ಬರಲಿವೆ. ಆದ್ದರಿಂದ, ಕೊವ್ಯಾಕ್ಸಿನ್​, ಝೈಕೋವ್​-ಡಿ ಸೇರಿ ಎಲ್ಲ ಬಗೆಯ ಕೋವಿಡ್​ ರೋಗನಿರೋಧಕ ಚುಚ್ಚುಮದ್ದುಗಳಿಗಾಗಿ 2021ರವರೆಗೆ ಕಾಯುವುದು ಅನಿವಾರ್ಯವಾಗಿದೆ ಎಂದು ವಿಜ್ಞಾನ ಸಚಿವಾಲಯ ಹೇಳಿದೆ.

    ಜಮ್ಮು ಮತ್ತು ಕಾಶ್ಮೀರದ ಪುಲ್ವಮಾದಲ್ಲಿ ತಪ್ಪಿದ ಮತ್ತೊಂದು ಭಾರಿ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts