More

    ಸೌಜನ್ಯ ಸಾವಿನ ಪ್ರಕರಣ ಮರುತನಿಖೆ ಮಾಡಿ

    ಸೌಜನ್ಯ ಸಾವಿನ ಪ್ರಕರಣವನ್ನು ಮರುತನಿಖೆ ಮಾಡಬೇಕಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.


    ನಂಜರಾಜ ಬಹದ್ದೂರ್ ಛತ್ರದಲ್ಲಿ ಸಮಾವೇಶಗೊಂಡ ವಿದ್ಯಾರ್ಥಿಗಳು, ಹೋರಾಟಗಾರರು, ಪ್ರಗತಿಪರರು ನೊಂದ ಕುಟುಂಬದ ಪರ ನ್ಯಾಯಕ್ಕಾಗಿ ಆಗ್ರಹಿಸಿದರು. ಮರು ತನಿಖೆಗೆ ಆಗ್ರಹಿಸುವ ಪ್ಲೇಕಾರ್ಡ್‌ಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ವಿನೋಬಾ ರಸ್ತೆ ಮಾರ್ಗವಾಗಿ ಸಾಗಿದ ಪ್ರತಿಭಟನಾ ರ‌್ಯಾಲಿ ಗಾಂಧಿ ವೃತ್ತದವರೆಗೆ ಸಾಗಿತು. ಅಲ್ಲಿ ಮಾನವ ಸರಪಳಿ ರಚಿಸಿದರು. ಸಂಚಾರಕ್ಕೆ ಅಡಚಣೆಯಾದ್ದರಿಂದ ಪೊಲೀಸರು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

    ಪ್ರಗತಿಪರ ಚಿಂತಕರಾದ ಜಿ.ಪಿ.ಬಸವರಾಜು, ಎಚ್.ಜನಾರ್ದನ್, ಪ್ರೊ.ಕಾಳಚನ್ನೇಗೌಡ, ನಾ.ದಿವಾಕರ, ಅಹಿಂದ ಜವರಪ್ಪ, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ರಂಗಕರ್ಮಿಗಳಾದ ಮೈಮ್ ರಮೇಶ್, ಸಿ.ಬಸವಲಿಂಗಯ್ಯ, ರತಿರಾವ್, ಒಡನಾಡಿಯ ಪರಶು, ಸ.ರ.ಸುದರ್ಶನ, ಪ್ರೊ.ಪಂಡಿತಾರಾಧ್ಯ, ಚ.ಸರ್ವಮಂಗಳಾ, ಕೆ.ಆರ್.ಸುಮತಿ, ಕೆ.ಆರ್.ಗೋಪಾಲಕೃಷ್ಣ, ಉಗ್ರನರಸಿಂಹೇಗೌಡ, ಸರಸ್ವತಿ, ಕಲ್ಲಹಳ್ಳಿ ಕುಮಾರ್ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts