More

    ಧಾರ್ಮಿಕ ಭಾಷಣಕ್ಕೆ ಕೋರ್ಟ್ ಅನುಮತಿ

    ಮಡಿಕೇರಿ:

    ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಪ್ರವಚನ(ಭಾಷಣ)ಕ್ಕೆ ಅವಕಾಶವಿಲ್ಲವೆಂದು ಆದೇಶ ನೀಡುವ ಮೂಲಕ ಸಂವಿಧಾನ ದತ್ತವಾದ ಧಾರ್ಮಿಕ ಹಕ್ಕನ್ನು ಕಸಿದು ಕೊಂಡಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ನಡೆಯುವ ರಾಜಕೀಯ ರಹಿತ ಭಾಷಣಕ್ಕೆ ಹೈಕೋರ್ಟ್ ಬುಧವಾರ ಅವಕಾಶ ನೀಡಿದೆ. ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಅರುಣ್ ಶ್ಯಾಂ, ಸುಯೋಗ್ ಹೇರಳೆ ಹಾಗೂ ಮೂಲತಃ ಕೊಡಗಿನವರಾದ ಹೈಕೋರ್ಟ್ ಯುವ ವಕೀಲ ಶಾಂತೆಯಂಡ ನಿಶಾಂತ್ ಕುಶಾಲಪ್ಪ ಅವರ ಮೂಲಕ ಜಿಲ್ಲೆಯ ಹಿಂದು ಜಾಗರಣ ವೇದಿಕೆ ಹೈಕೋರ್ಟ್‌ನಲ್ಲಿ ರಿಟ್ ಪಿಟಿಶನ್ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಉಚ್ಛ್ಚನ್ಯಾಯಾಲಯ ಚುನಾವಣಾ ಆಯೋಗದ ನಿರ್ಬಂಧ ಪರಿಶೀಲಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ನಡೆಯುವ ರಾಜಕೀಯ ರಹಿತ ಭಾಷಣಕ್ಕೆ ಅವಕಾಶ ನೀಡಿದೆ. ರಾಜ್ಯ ಉಚ್ಛನ್ಯಾಯಾಲಯದ ಆದೇಶಾನುಸಾರ ಶನಿವಾರ (ಮಾ.೩೦) ಮಾದಾಪುರದಲ್ಲಿ ನಡೆಯಲಿರುವ ರಾಮನವಮಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯುವ ವಾಗ್ಮಿ ಹಾರಿಕ ಮಂಜುನಾಥ್ ಭಾಷಣ ಮಾಡಲಿದ್ದಾರೆ. ಹಿಂದು ಜಾಗರಣ ವೇದಿಕೆ ಜಿಲ್ಲಾ ಸಮಿತಿ ಸದಸ್ಯ ಸುನಿಲ್ ಮಾದಾಪುರ ಇವರ ಹೆಸರಲ್ಲಿ ಹೈಕೋರ್ಟ್ ವಕೀಲರು ಸಲ್ಲಿಸಿರುವ ರಿಟ್ ಪಿಟೀಷನ್‌ಗೆ ಹೈಕೋರ್ಟ್ ಈ ಆದೇಶ ನೀಡಿದೆ.
    ಮಾ.೩೦ರ ಶನಿವಾರ ಮಾದಪುರದಲ್ಲಿ ಮಧ್ಯಾಹ್ನ ೨ ಗಂಟೆಯಿಂದ ಶೋಭಾ ಯಾತ್ರೆ ಆರಂಭಗೊಂಡು ಸಂಜೆ ೫ ಗಂಟೆಗೆ ಮಾದಾಪುರ ಬಸ್ ನಿಲ್ದಾಣದಲ್ಲಿ ಬೃಹತ್ ಸಭೆ ನಡೆಯಲಿದೆ. ಯುವ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಾದಾಪುರದ ಕಾಫಿ ಬೆಳೆಗಾರರ ಮಂಡೆಟ್ಟಿರ ಅನಿಲ್ ಪೊನ್ನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts