More

    ಸ್ನಾನ ಮಾಡಲು ಹೋದ ಪತ್ನಿ ಜತೆಯಲ್ಲೇ ಪತಿ ಸಾವು!

    ಬಾಗಲಕೋಟೆ: ಜವರಾಯ ಯಾವಗ, ಯಾವ ರೂಪದಲ್ಲಿ ಬರುತ್ತಾನೋ ಆ ದೇವರಿಗೆ ಗೊತ್ತು. ಮನೆಯಲ್ಲಿ ಸ್ನಾನ ಮಾಡಲು ಸಿದ್ಧವಾಗುತ್ತಿದ್ದ ಪತ್ನಿ ಜತೆಗೆ ಪತಿಯನ್ನೂ ಕರೆದೊಯ್ದಿದ್ದಾನೆ.

    ನವನಗರದ ಸೆಕ್ಟರ್ ನಂಬರ್ 2ರಲ್ಲಿ ಬುಧವಾರ ಬೆಳಗ್ಗೆ 60 ವರ್ಷ ಸರೋಜಾ ಅವರು ಸ್ನಾನ ಮಾಡಲು ಬೈಲರ್​ಗೆ ವಿದ್ಯುತ್ ಮೋಟಾರ್​ ಮೂಲಕ ನೀರು ತುಂಬಿಸುತ್ತಿದ್ದರು. ಈ ವೇಳೆ ಸರೋಜಾಗೆ ವಿದ್ಯುತ್ ಪ್ರವಹಿಸಿದ್ದು, ಚೀರಾಡಿದ್ದಾರೆ. ಕೂಡಲೇ ಪತ್ನಿಯ ರಕ್ಷಣೆಗೆ ಧಾವಿಸಿದ ಪತಿ ಸ್ವಾಮಿರಾವ ಮದ್ವರಾವ ಕುಲಕರ್ಣಿ(75) ಅವರಿಗೂ ವಿದ್ಯುತ್​ ತಗುಲಿದ್ದು, ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ. ಇದನ್ನೂ ಓದಿರಿ ಲೈಂಗಿಕವಾಗಿ ಬಳಸಿಕೊಂಡು ಸಾಲ ಕೊಟ್ಟ, ಆಕೆ ಹಣ ಹಿಂತಿರುಗಿಸಿದರೂ ಮತ್ತೆ ಬರುವಂತೆ ಪೀಡಿಸಿದ…

    ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ವೃದ್ಧ ದಂಪತಿ ಮೃತಪಟ್ಟ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿರಿ ಕ್ಷುಲ್ಲಕ ಕಾರಣಕ್ಕೆ ನೇಪಾಳ ಮೂಲದ ಗೃಹಿಣಿ ಆತ್ಮಹತ್ಯೆಗೆ ಶರಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts