More

    ನಕಲಿ ಅಧಿಕಾರಿಗಳ ಬಂಧನ

    ಬೈಲಹೊಂಗಲ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಎಂದು ಹೇಳಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಜಿಲ್ಲಾ ಪೊಲೀಸರು ಸೋಮವಾರ ಬಂಧಿಸಿದ್ದು, ಬಂಧಿತರಿಂದ ಒಂದು ಕಾರ್ ವಶಪಡಿಸಿಕೊಂಡಿದ್ದಾರೆ.

    ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದ ವಿಶಾಲ ಬಾವೆಪ್ಪ ಪಾಟೀಲ(42), ಬೆಂಗಳೂರಿನ ಸಹಕಾರ ನಗರದ ಶ್ರೀನಿವಾಸ ಅಶ್ವತ್ಥ ನಾರಾಯಣ (38) ಬಂಧಿತರು.

    ಬೈಲಹೊಂಗಲ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಬಿ.ಆರ್.ಹುಲಗಣ್ಣವರ ಎಂಬುವರಿಗೆ ಕರೆ ಮಾಡಿದ್ದ ಬಂಧಿತರು, ‘ನೀವು ಬೇನಾಮಿ ಆಸ್ತಿ ಸಂಪಾದನೆ ಮಾಡಿದ್ದೀರಿ ಎಂದು ಎಸಿಬಿಗೆ ದೂರು ಬಂದಿದೆ. ಸದ್ಯದಲ್ಲೇ ನೀವು ನಿವೃತ್ತರಾಗಲಿದ್ದು, ನಿಮ್ಮ ಮೇಲೆ ದಾಳಿ ನಡೆಸಿ ಕೇಸ್ ಹಾಕಿದರೆ ಪಿಂಚಣಿ ಬರುವುದಿಲ್ಲ. ಹಾಗಾಗಿ 5 ಲಕ್ಷ ರೂ. ಕೊಡಿ. ಕೇಸ್ ಮುಚ್ಚಿ ಹಾಕುತ್ತೇವೆ’ ಎಂದು ಹೇಳಿದ್ದರು. ಈ ಕುರಿತು ಕೃಷಿ ಅಧಿಕಾರಿ ಸೆ. 15ರಂದು ಬೈಲಹೊಂಗಲ ಠಾಣೆಗೆ ದೂರು ನೀಡಿದ್ದರು. ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಸಿಬ್ಬಂದಿ ಎಂ.ಬಿ.ವಸ್ತ್ರದ, ಎಸ್.ಯು.ಮೆಣಸಿನಕಾಯಿ, ಎಂ.ಬಿ.ಕಂಬಾರ ಮತ್ತಿತರರು ತನಿಖೆ ನಡೆಸಿ ನಕಲಿ ಎಸಿಬಿ ಅಧಿಕಾರಿಗಳಿಬ್ಬರನ್ನು ಬಂಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts